ವಿವಿಧ ವಸತಿ ಶಾಲೆ: ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

0
276

ಕಲಬುರಗಿ: ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ೨೦ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ವಸತಿರಹಿತ ಶಾಲೆ ಹಾಗೂ  ೦೯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಖಾಲಿಯಿರುವ ಒಟ್ಟು ೫೮ ಭಾಷಾ ಮತ್ತು ವಿಷಯ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರಾಗಿ  ಕಾರ್ಯನಿರ್ವಹಿಸಲು  ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಆಳಂದ ಮತ್ತು ಕಲಬುರಗಿ ಫಿಲ್ಟರ್ ಬೆಡ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರ ೨ ಹುದ್ದೆಗಳಿಗೆ ಹಾಗೂ ಜೇವರ್ಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಹಿಂದಿ ಶಿಕ್ಷಕರ ೧ ಹುದ್ದೆಗೆ ಬಿ.ಎ. ಬಿ.ಇಡಿ ಮತ್ತು ಟಿಇಟಿ ಪಾಸಾಗಿರಬೇಕು. ಆಳಂದ, ಫಿಲ್ಟರ್ ಬೆಡ್ ಕಲಬುರಗಿ ಮತ್ತು ದಂಡೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಅಫಜಲಪುರ, ಶಹಾಬಾದ, ವಾಡಿ(ಜಂ), ಮುಧೋಳ, ಸೇಡಂಗಳಲ್ಲಿನ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಗಳಲ್ಲಿನ ಆಂಗ್ಲ ಭಾಷಾ ೮ ಶಿಕ್ಷಕರ ಹುದ್ದೆಗಳಿಗೆ ಬಿ.ಎ., ಬಿ.ಇಡಿ ಮತ್ತು ಟಿಇಟಿ ಪಾಸಾಗಿರಬೇಕು.

Contact Your\'s Advertisement; 9902492681

ಫರಹತಾಬಾದ, ಮುಧೋಳ, ಇಜೇರಿಗಳಲ್ಲಿನ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಉರ್ದು ಭಾಷಾ ಶಿಕ್ಷಕರ ೩ ಹುದ್ದೆಗಳಿಗೆ ಬಿ.ಎ., ಬಿ.ಇಡಿ ಮತ್ತು ಟಿಇಟಿ ಪಾಸಾಗಿರಬೇಕು.  ಆಳಂದ, ನರೋಣಾ, ಅಫಜಲಪುರ,  ಮಣ್ಣೂರ, ಚಿಂಚೋಳಿ ಚಿಮ್ಮನಚೋಡ್, ವಾಡಿ,  ಕಮಲಾಪೂರ,  ಫರಹತಾಬಾದ್, ಮಹಿಬೂಬ ನಗರ ಕಲಬುರಗಿ,  ಮುಧೋಳ,  ಇಜೇರಿ, ಯಡ್ರಾಮಿ ಹಾಗೂ ಜೇವರ್ಗಿಗಳಲ್ಲಿನ ಮೌಲಾನಾ ಆಜಾದ್ ಮಾದರಿ ಶಾಲೆ, ಆಳಂದ ಮತ್ತು ಸೇಡಂಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿಗಳಲ್ಲಿನ ೧೬ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಬಿ.ಎಸ್.ಸಿ., ಬಿ.ಇಡಿ ಮತ್ತು ಟಿಇಟಿ ಪಾಸಾಗಿರಬೇಕು.

ಚಿಮ್ಮನಚೊಡ, ಸುಲೇಪೇಟ್, ಶಹಾಬಾದ ಮತ್ತು  ಮುಧೋಳಗಳಲ್ಲಿನ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ೪ ಗಣಿತ ಶಿಕ್ಷಕರ ಹುದ್ದೆಗಳಿಗೆ ಬಿ.ಎಸ್.ಸಿ. ಬಿಇಡಿ ಮತ್ತು ಟಿಇಟಿ ಪಾಸಾಗಿರಬೇಕು. ನರೋಣಾ, ಅಫಜಲಪುರ,  ಮಣ್ಣೂರ, ಚಿಮ್ಮನಚೋಡ್, ವಾಡಿ,  ಕಮಲಾಪುರ,  ಫರಹತಾಬಾದ್, ಮಹಿಬೂಬನಗರ ಕಲಬುರಗಿ,  ಮುಧೋಳ,  ಇಜೇರಿ ಹಾಗೂ ಯಡ್ರಾಮಿಗಳಲ್ಲಿನ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಹಾಗೂ ಆಳಂದ ಮತ್ತು  ಸೇಡಂಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ೧೩ ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಬಿ.ಎಸ್.ಸಿ. ಬಿ.ಇಡಿ ಮತ್ತು ಟಿಇಟಿ ಪಾಸಾಗಿರಬೇಕು.

ಅಫಜಲಪುರ, ಆಳಂದ, ಸೇಡಂ, ಚಿಂಚೋಳಿ, ಜೇವರ್ಗಿಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ೫ ಗಣಕಯಂತ್ರ ಶಿಕ್ಷಕರ ಹುದ್ದೆಗೆ ಬಿಸಿಎ ಪಾಸಾಗಿರಬೇಕು. ಅಫಜಲಪುರ, ಆಳಂದ, ವಾಡಿ,  ಸೇಡಂಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಆರ್ಟ್ ಆಂಡ್ ಕ್ರಾಫ್ಟ್ ೪ ಹುದ್ದೆಗಳಿಗೆ ಹಾಗೂ ಅಫಜಲಪುರ ಮತ್ತು ಜೇವರ್ಗಿಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೨ ಸ್ಟಾಫ್ ನರ್ಸ್ ಹುದ್ದೆಗಳಿಗೆ ಬಿ.ಎಸ್.ಸಿ./ ಜಿ.ಎನ್.ಎಂ. ನರ್ಸಿಂಗ್ ಪಾಸಾಗಿರಬೇಕು.

ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಾಸಾಗಿರಬೇಕು. ಟಿ.ಇಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಅಭ್ಯರ್ಥಿಗಳಿಗೆ ಪ್ರಥಮಾಧ್ಯತೆ ನೀಡಲಾಗುತ್ತದೆ. ಕನಿಷ್ಠ ೫ ವರ್ಷಗಳ ಬೋಧಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.  ಶಿಕ್ಷಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಸಂದರ್ಶನ ಹಾಗೂ ಡೆಮೋ ಕ್ಲಾಸ್ (demo classs)  ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಮೇ ೨೭ ಕೊನೆಯ ದಿನವಾಗಿದೆ. ಅರ್ಜಿ  ನಮೂನೆ ಹಾಗೂ ಮತ್ತಿತರ ಮಾಹಿತಿಗಾಗಿ ಕಲಬುರಗಿ ಕನ್ನಡ ಭವನ ಪಕ್ಕದಲ್ಲಿನ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ  08472-247260ಗೆ ಸಂಪರ್ಕಿಸಲು ಕೋರಲಾಗಿದೆ. ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here