ಕಲಬುರಗಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಲು ಐಸಿಎಂಆರ್ ಅನುಮತಿ ನೀಡಿದೆ ಎಂದು ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ. ವಿಕ್ರಂ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಐಸಿಎಂಆರ್ ಅನುಮತಿ ಪಡೆದಿರೋ ಏಕೈಕ ಖಾಸಗಿ ಆಸ್ಪತ್ರೆ ಇದಾಗಿದ್ದು, ಮಂಗಳೂರು ಹಾಗೂ ದಾವಣಗೆರೆಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಅನುಮತಿ ಸಿಕ್ಕಿದೆ. ಆದರೆ, ಯಾವುದೇ ಖಾಸಗಿ ಆಸ್ಪತ್ರೆಗೆ ಸಿಕ್ಕಿಲ್ಲ.
ಜಿಲ್ಲೆಯ ದಿನೇದಿನೆ ಕೊರೊನಾ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಆಸ್ಪತ್ರೆಯಲ್ಲಿ ಪ್ರಾರಂಭಿಸಿರುವ ಲ್ಯಾಂಬ್ನಿಂದ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ವಿಕ್ರಂ ತಿಳಿಸಿದ್ದಾರೆ. ಅಲ್ಲದೆ ಥ್ರೋಟ್ ಸ್ವಾಬ್ ಸ್ಯಾಂಪಲ್ ಟೆಸ್ಟ್ ಸಾಮರ್ಥ್ಯ ದುಪ್ಪಟ್ಟಾಗಿದೆ.
ಜಿಮ್ಸ್‌ಲ್ಲಿ ಎಷ್ಟು ಟೆಸ್ಟ್ ಮಾಡಲಾಗುತ್ತದೆಯೋ, ಅಷ್ಟೇ ಪ್ರಮಾಣದಲ್ಲಿ ನಾವು ಟೆಸ್ಟ್ ಮಾಡಿ ವರದಿ ಕೊಡುವ ಸಾಮರ್ಥ್ಯ ಹೊಂದಿದ್ದೇವೆ. ಸದ್ಯ ನಿತ್ಯ 200 ಥ್ರೋಟ್ ಸ್ಯಾಂಪಲ್ ವರದಿ ಮಾಡಬಹುದು. ಅಗತ್ಯವಿದ್ದಲ್ಲಿ ಅದರ ಸಾಮರ್ಥ್ಯ ದುಪ್ಪಟ್ಟು ಮಾಡಬಹುದು.
ಜಿಮ್ಸ್ ಮೇಲೆ ಒತ್ತಡ ಹೆಚ್ಚಾದಲ್ಲಿ ತಮ್ಮ ಲ್ಯಾಬ್ನಲ್ಲಿ ಟೆಸ್ಟ್ ಮಾಡಲು ಸಿದ್ಧರಿದ್ದೇವೆ. ಸರ್ಕಾರಕ್ಕೆ ಅಗತ್ಯವಿದ್ದಲ್ಲಿ ತಮ್ಮ ಸೇವೆ ಬಳಸಿಕೊಳ್ಳಬಹುದು ಎಂದು ವಿಕ್ರಂ ಸಿದ್ಧಾರೆಡ್ಡಿ ತಿಳಿಸಿದ್ದಾರೆ.