ಪತ್ರಕರ್ತ ಅಜೀತ್ ದೇವಗನ್ ಮೇಲೆ ಕ್ರಮಕ್ಕೆ ರಂಜೋಳ್ವಿ ಆಗ್ರಹ

0
82

ಕಲಬುರಗಿ: ಸೂಫಿ ಹಜರತ್ ಖ್ವಾಜಾ ಗರೀಬ್ ನವಾಜ್ ಮೊಹಿನೊದ್ದೀನ್ ಚೀಸ್ತಿ (.) ಅವರ ಬಗ್ಗೆ ಖಂಡನೀಯ ಹೇಳಿಕೆ ನೀಡಿದ ನ್ಯೂಸ್ 18 ನಿರೂಪಕ ಅಜೀತ್ ದೇವಗನ್ ಮೇಲೆ ಕಠಿಣ ಕ್ರಮ ಗೊಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯದ ಉಪಾಧ್ಯಕ್ಷ, ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಯೋಜಕರಾದ ಸಾಜಿದ್ ಅಲಿ ರಂಜೋಳ್ವಿ ಅವರು ಆಗ್ರಹಿಸಿದ್ದಾರೆ.

ಭಾರತ ಸೇರಿದಂತೆ ಮತ್ತು ವಿದೇಶದಲ್ಲೂ ಸೂಪ್ರಸಿದ್ಧರಾಗಿರುವ ಎಲ್ಲಾ ಧರ್ಮ ಮತ್ತು ಸಮುದಾಯದ ಬಾಂಧವರು ಸ್ಮರಿಸಿ ಆರಾಧಿಸುವ ಹಿಂದುಸ್ತಾನದ ಪೂಜ್ಯ ಸೂಫಿ ಖಾಜಾ ಗರೀಬ್ ನವಾಜ್ (.) ದರ್ಗಾಕ್ಕೆ ಭೇಟಿ ನೀಡಿ ತಮ್ಮ ನಂಬಿಕೆಯ ಹರಿಕೆಗಳು ಪಡೆದು ಸ್ಮೀರಿಸುವ ಪವಿತ್ರ ಸ್ಥಳವಾಗಿದೆ.

Contact Your\'s Advertisement; 9902492681

ಸೂಫಿ ಚಿಸ್ತಿ(ರ.ಅ) ಅವರ ಬಗ್ಗೆ ನ್ಯೂ18 ಖಾಸಗಿ ಸುದ್ದಿ ವಾಹಿನಿಯಲ್ಲಿ ಟಿ.ಆರ್.ಪಿಗಾಗಿ ನಡೆಸಲಾದ ಪ್ಯಾನಲ್ ಡಿಸ್ಕಷನ್ ಕಾರ್ಯಕ್ರಮ ಒಂದರಲ್ಲಿ ನಿರೂಪಕ ಆ್ಯಂಕರ್ ಅಜೀತ್ ದೇವಗನ್ ಪೂಜ್ಯ ಚಿಸ್ತಿ ಅವರ ಜೀವನದ ಬಗ್ಗೆ ಹಗುರವಾಗಿ, ಆಪತಿಜನಕವಾಗಿ ಪದ ಬಳಕೆ ಮಾಡಿ ವಿಕೃತ ಮೆರೆದಿದ್ದಾರೆ.

ದೇಶ ವಿದೇಶದಲ್ಲಿ ಕೋಟಿಗಟ್ಟಲೆ ಭಕ್ತರು ಮತ್ತು ಭಾರತದ ಗೌರ ಕಳಸವಾಗಿರುವ ಸೂಫಿ ಮೋಹಿನೊದ್ದೀನ್ ಚಿಸ್ತಿಯನ್ನು ಭಾರತದ ಮುಸ್ಲಿಂರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಪೂಜಿಸುತ್ತಾರೆ. ಇಂತಹ ಸೂಫಿ ಬಗ್ಗೆ ಟಿಕೆ ಮಾಡಿ, ಅಪಾರ ಜನಸಮುದಾಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಸುದ್ದಿವಾಹಿನಿ ಮತ್ತು ನಿರೂಪಕ ಅಜೀತ್ ದೇವಗನ್ ನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here