ಅಪ್ಪಾ ಅಪ್ಪಾ ನನ್ನಪ್ಪಾ
ನೀನಗಿಂತ ವೀರ ಯಾರಪ್ಪಾ..!
ಮೀಸೆಯ ತಿರುವಿದ ನೀನು
ಕಾಣುತ್ತಿಯಾ ಹುಲಿಯಪ್ಪಾ..!
ಜೋಗುಳ ನೀನು ಹಾಡಲಿಲ್ಲ
ಕಥೆಯನು ನನಗೆ ಹೇಳಲೆ ಇಲ್ಲಾ
ಮಡಿಲಲಿ ಅಂತು ಕೂಡಿಸಲಿಲ್ಲ
ಜೊತೆಯಲಿ ಬಂದು ಕೈಯನು ಹಿಡಿದು
ಬದುಕಲಿ ನನಗೆ ಆಸರೆಯಾಗಿ
ನಡೆಯುತ್ತಲಿದ್ದೆ ನೀನಪ್ಪಾ..
ಚಂದಿರನನ್ನು ತೋರಿಸಲಿಲ್ಲ
ಚುಕ್ಕೆಗಳೆಣಿಸಿ ಹೇಳಲೆ ಇಲ್ಲ
ತುತ್ತನ್ನು ಮಾಡಿ ಉಣಿಸಲಿಲ್ಲ.
ಹೆಗಲಲಿ ಕೂಡಿಸಿ ಬರೆಗಾಲಲಿ ನಡೆದು
ಕನಸನು ಕಾಣಿಸಿ ಎತ್ತರ ಬೆಳೆಸಿದ
ನನ್ನಯ ದೇವರು ನೀನಪ್ಪಾ
ಬೆಚ್ಚನೆ ಸ್ನಾನವ ಮಾಡಿಸಲಿಲ್ಲ
ಸ್ವಚ್ಚನೆ ಬಟ್ಟೆ ಉಡಸಲಿಲ್ಲ
ಬುತ್ತಿಯ ಎಂದಿಗೂ ಕಟ್ಟಲಿಲ್ಲ
ರಾತ್ರಿ ಹಗಲು ನಮಗಾಗಿ
ಮಳೆ ಬಿಸಿಲು ಚಳಿಯಲಿ
ಶ್ರಮ ಪಟ್ಟ ದೈವ ನೀನಪ್ಪಾ..
ಅಪ್ಪಾ ಅಪ್ಪಾ
ನಿನ್ನಯ ತ್ಯಾಗದ ಪ್ರೀತಿಗೆ
ಸರಿಸಾಟಿ ಯಾರು ಹೇಳಪ್ಪಾ
ನನ್ನಯ ಜೀವದ ಉಸಿರು ನೀನು
ನಿನ್ನನು ನಾನು ಮರೆಯಲ್ಲಪ್ಪಾ…
-ಮಲಿಕಜಾನ ಶೇಖ
ತಂದೆ ಯ ವೀರತೆ,ತಂದೆಯ ತ್ಯಾಗ ತಂದೆಯ ಪ್ರೀತಿ ಬಗ್ಗೆ ಅತ್ಯುತ್ತಮ ಕವನ ರಚಿಸಿದ ನಿಮ್ಮ ಈ ಸಾರ್ಥಕ ಕವನ ಎಲ್ಲ ತಂದೆಯರಿಗೆ ಅರ್ಪಣೆ….
ಧನ್ಯವಾದಗಳು ಸನ್ಮಾನ್ಯ ಶ್ರೀ ಮಲಿಕ್ ಜಾನ್ ಶೇಖ ಸರ್ ರವರಿಗೆ