ಕಲಬುರಗಿ: ತಾಲ್ಲೂಕಿನ ಮೇಳಕುಂದಾ ಕೆ ಗ್ರಾಮದ ರೈತರೊಬ್ಬರು ಬಿಸಿಲು ಝಳಕ್ಕೆ ಸಾವನಪ್ಪಿರು ಘಟನೆ ಇಂದು ಜಿಲ್ಲೆಯಲ್ಲಿ ಸಂಭವಿಸಿದೆ.
ಮಲ್ಲಿಕಾರ್ಜುನ, (60) ತಂದೆ ಬಸವಂತರಾವ ಪೊ. ಪಾಟೀಲ್. ಮೇಳಕುಂದಾ ಕೆ ಗ್ರಾಮದ ನಿವಾಸಿಯಾಗಿದ್ದು, ಮಲ್ಲಿಕಾರ್ಜುನ್ ರೈತ ಎಂದು ತಿಳಿದು ಬಂದಿದ್ದು, 5 ಎಕರೆ ಹೊಲವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಮೃತ ರೈತ ಪತ್ನಿ, ಐವರು ಹೆಣ್ಣುಮಕ್ಕಳು , ಒಬ್ಬ ಪುತ್ರ ಮತ್ತು ಇಬ್ಬರು ಸಹೋದರರು, ತಾಯಿ ಮತ್ತು ನಾಲ್ಬರು ಸಹೋದರಿಯರನ್ನು ಅಗಲಿದ್ದಾರೆ. ಡಾ.ಶ್ರೀಶೈಲ ಬಿರಾದಾರ ಪ್ರಾಧ್ಯಾಪಕರ ಸಹೋದರ.
ಇಂದು ಮಧ್ಯಹ್ನ ಮಲ್ಲಿಕಾರ್ಜುನ, ಬಿಸಿಲು ಝಲಕ್ಕೆ ತುತ್ತಾಗಿ, ಸಾವನ್ನಪ್ಪಿದ್ದಾರೆ ತಿಳಿದು ಬಂದಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ತುಂಬಾ ನೋವಿನ ಸಂಗತಿ …. ಆದರೆ ರಾಜ್ಯದ ಆಡಳಿತ ಪಕ್ಷದ ಮುಖ್ಯಮಂತ್ರಿಗೆ ಮಗ ಚಿಂತಿ … ಅದಕ್ಕೆ ಬೆಂಬಲ ನೀಡಿದ ಪಕ್ಷಕ್ಕೆ ಅವರವರದೇ ಚಿಂತಿ…. ವಿರೋಧ ಪಕ್ಷಕ್ಕೆ ಸರ್ಕಾರ ಬೀಳಿಸುವ ಚಿಂತಿ…… ಇನ್ನು ಅಧಿಕಾರಿಗಳಿಗೆ ಖಾಲಿ ಹಾಳೆ ತುಂಬುವ ಚಿಂತಿ…. ಮಾದ್ಯಮದವರಿಗೆ ಮಸಾಲೆ ಸುದ್ದಿ ಚಿಂತಿ… ಹೀಗಿರುವಾಗ ಬಡ ಜನರ ಸ್ಥಿತಿ ಕೇಳೋರು ಯಾರು