ಅಂಕಣ ಬರಹ

ಹಲವು ಅನುಮಾನಗಳ ಮಧ್ಯೆ ಇಂದು ಲೋಕ ಸಭೆ ಚುನಾವಣೆ ಫಲಿತಾಂಶ ಪ್ರಕಟ.!?

ದೇಶಾದ್ಯಂತ ಏಳು ಹಂತದಲ್ಲಿ ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಇನ್ನೇನು ಚುನಾವಣೆ ಫಲಿತಾಂಶಕ್ಕಾಗಿ ಕ್ಷಣಗಣನೆ ಶುರುವಾಗಿದೆ.

ಈ ಚುನಾವಣೆ ನಡೆಯಲು ಚುನಾವಣೆ ಆಯೋಗ ಲಕ್ಷಾಂತರ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಬಳಿಸಿಕೊಂಡು ಚುನಾವಣೆ ನಡೆಸಿತ್ತು, ಮತದಾರರು  ಹಾಗೂ ದೇಶದ ಜನರಲ್ಲಿ ಚುನಾವಣೆ ಕುರಿತು ವಿಶ್ವಾಸ ಸೃಷ್ಠಿಸುವ ಒಂದು ಧ್ಯೇಯವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ ಚುನಾವಣಾ ಆಯೋಗದ ಮೇಲೂ ಇಂದು ವಿವಿಧ ಪಕ್ಷದವರು ಅನುಮಾನಪಡುತ್ತಿದ್ದಾರೆ.

ಅದರಂತೆ ಚುನಾವಣೆ ಇಂದು ನಡೆಯುತ್ತಿರುವ ಲೋಕ ಸಭೆ ಚುನಾವಣೆ ಫಲಿತಾಂಶ ಹಲವು ಅನುಮಾನ ಹಾಗೂ ಅಸಂತೋಷಕ್ಕೆ ಕಾರಣವಾಗು ರೀತಿಯಲ್ಲಿ ಹೊರ ಬರಲು ಸಿದ್ಧವಾಗಿದೆ.

ಫಲಿತಾಂಶದ ಕುರಿತು ಜನರಿಗೆ ಬಹಳಷ್ಟು ನಿರೀಕ್ಷೆಯಿದ್ದು, ಈ ನಿರೀಕ್ಷೆ ಮಧ್ಯೆದಲ್ಲಿ ಚುನಾವಣೆ ಆಯೋಗದ ವಿರುದ್ಧ ಅನುಮಾನದ ಬೇರುಗಳು ಹುಟ್ಟಿಕೊಂಡಿರುವುದು ಬೇಸರದ ಸಂಗತಿ ಇದಾಗಿದೆ. ದೇಶದಲ್ಲಿ ಮತದಾನ ಮುಂಚಿತವಾಗಿ 20 ಲಕ್ಷ ಇವಿಎಂ ಮಷಿನ್ ಗಳು ನಾಪತ್ತೆಯಾಗಿರುವ ಕುರಿತು ಕೆಲವು ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿವೆ. ಹಾಗೂ ಈ ಪ್ರಕರಣ ನ್ಯಾಯಲಯದಿಂದ ಕೂಡ ಹೊರಬಂದಿದೆ. ಆದರೆ ಈ ಕುರಿತು ಚುನಾವಣೆ ಆಯೋಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ದೇಶದ ಜನತೆಯು ಹೆಚ್ಚಿನ ಗಮನ ಕೂಡ ನೀಡಿಲ್ಲ.

ಆದರೆ ಮತದಾನದ ನಂತರ ಸಾಮಾಜಿಕ ಜಾಲಾತಾಣಗಳಲ್ಲಿ ಇವಿಎಂ ಮಷಿನ್ ಗಳ ಲಾರಿ, ಟ್ರಕ್, ಕಾರುಗಳ ಮೂಲಕ ಬೀದಿ ಬೀದಿ ಹಾಗೂ ಸ್ಟ್ರಾಂಗ್ ರೂಮ್ ಗಳತ್ತ ನುಸುಳುತ್ತಿರುವುದನ್ನು ಕಾರ್ಯಕರ್ತರು ವೈರಲ್ ಮಾಡಿದ್ದಾರೆ. ಇದರ ಮಧ್ಯೆ ಈ ಪ್ರಶ್ನೆ ಹುಟ್ಟಿಕೊಳ್ಳುತ್ತಿರುವುದು ಸಹಜ ಸರಿ. ಆದರೆ ಇದಕ್ಕೆ ಚುನಾವಣೆ ಆಯೋಗ ಯಾವುದೇ ಪ್ರತಿಕ್ರಿಯೆ ನೀಡದ ಮೌನ ಆಚರಿಸುವ ಮೂಲಕ ಪ್ರಜಾತಂತ್ರ ಹಾಗೂ ಚುನಾವಣೆ ಆಯೋಗದ ಮೇಲೆ ದೇಶದ ಜನತೆಗೆ ಇರುವ ವಿಶ್ವಾಸ ಗಾಳಿಗೆ ತೋರಿದಂತೆ ಎದ್ದು ಕಾಣುತ್ತಿದೆ.

ಇಂದು ಬರು ಲೋಕಸಭೆ ಫಲಿತಾಂಶ ಯಾವುದೇ ಪಕ್ಷಕ್ಕೆ ಆಗಿರಲಿ ಆದರೆ ಮುಖ್ಯವಾಗಿರುವ ವಿಶ್ವಾಸ ಚುನಾವಣೆ ಆಯೋಗದ ಮೇಲೆ. ಆದರೆ  ಆ ವಿಶ್ವಾಸವೇ ಅನುಮಾನಕ್ಕೆ ಒಳಗಾಗಿದೆ. ಇದು ದೇಶಕ್ಕೆ ಹಾನಿ ತರುವಂತಹದಾಗಿದೆ.

ಇವಿಎಂ ಬದಲಾವಣೆ ಕುರಿತು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಅನುಮಾನ ಸೃಷ್ಠಿಯಾಗಿದೆ. ಈ ಅನುಮಾನಗಳ ಮಧ್ಯೆ ಚುನಾವಣೆ ಆಯೋಗ ಫಲಿತಾಂಶ ಪ್ರಕಟಿಸುತ್ತಿರುವುದು ದೇಶದ ಪರಿಸ್ಥಿಯ ಒಂದು ಸವಾಲಾಗಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

5 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

7 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

14 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

14 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

15 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago