ಕಲಬುರಗಿ: ವೈದ್ಯರ ದಿನಾಚಾರಣೆಯ ಪ್ರಯುಕ್ತ ಭಾರತೀಯ ವೈದ್ಯರ ಸಂಘ ಕರ್ನಾಟಕ ಶಾಖೆ ಕೊಡುವ 2020ನಢ ಸಾಲಿನ ಐಎಂಎ ಪ್ರಶಸ್ತಿಗೆ ನಗರದ ಪ್ರಸಿದ್ಧ ವೈದ್ಯ ಡಾ. ಎಸ್ ಎಸ್ ಗುಬ್ಬಿ ಆಯ್ಕೆಯಾಗಿದ್ದಾರೆ.
ಕಳೆದ 40 ವóರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿನ ಡಾ. ಎಸ್ ಎಸ್ ಗುಬ್ಬಿ ಅವರ ಅನುಪಮ ಸೇವೆಯನ್ನು ಗುರುತಿಸಿ ಭಾರತೀಯ ವೈದ್ಯರ ಸಂಘ ಕರ್ನಾಟಕ ಶಾಖೆಯು ಈ ಪ್ರಶಸ್ತಿಯನ್ನು ಘೋಷಿಸಿದೆ.
ಜುಲೈ 1 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಐಎಂಎ ಹೌಸಿನ ಡಾ. ಎಂ ಎ ನರಸಿಂಹಾಚಾರ್ಯ ಸಭಾಂಗಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಡಾ. ಎಸ್ ಎಸ್ ಗುಬ್ಬಿಯವರು ಜನಪ್ರಿಯ ಅರ್ಥೋಪೇಡಿಕ್ಸ್ ಸರ್ಜನರಾಗಿ, ಎಂಆರ್‍ಎಂಸಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯ ಕಲಬುರಗಿ ಜಿಲ್ಲಾ ಕನ್ನಡ ವೈದ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ ಡಾ. ಎಸ್ ಎಸ್ ಗುಬ್ಬಿ ಅವರನ್ನು ಕಲಬುರಗಿಯ ಐಎಂಎ ಶಾಖೆಯ ಪದಾಧಿಕಾರಿಗಳಾದ ಡಾ. ಅಮೋಲ ಪತಂಗೆ, ಡಾ. ರಾಹುಲ್ ಮಂದಕನಳ್ಳಿ, ಡಾ. ಸಿದ್ದೇಶ ಸಿರವಾರ, ಡಾ.ಸಂತೋಷ ಶೇಗೆದಾರ, ಡಾ. ಸಂಜನಾ ತೆಲ್ಲೂರ, ಡಾ. ಲವಕುಮಾರ ಹಾಗೂ ಟಿ ವಿ ಸಿವಾನಂದನ, ಎಂ ಸದಾನಂದ, ಎಸ್ ಎಸ್ ಹಿರೇಮಠ ಅಭಿನಂದಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…