ಕಲಬುರಗಿ: ಸೊಲಿಲ್ಲದ ಸರದಾರ ಖರ್ಗೆ ವಿರುದ್ಧ ಉಮೇಶ್ ಜಾಧವ್ ಭರ್ಜರಿ ಗೇಲುವು. ಹೌದು ಸತತ ಹನ್ನೊಂದು ಬಾರಿ ಗೆಲುವಿನ ನಗೆ ಬೀರುತ್ತಾ ಸೋಲಿಲ್ಲದ ಸರದಾರನೆಂಬ ಖ್ಯಾತಿಗೊಳಗಾಗಿದ್ದ ಮಲ್ಲಿಕಾರ್ಜುನ ಖರ್ಗೆ ತನ್ನ ಶಿಷ್ಯನ ವಿರುದ್ಧವೆ ಸೋತು ಸುಣ್ಣವಾಗಿದ್ದಾರೆ.. ಡಜನ್ ಬಾರಿ ಗೆಲುವು ಸಾಧಿಸಲು ತುದಿಗಾಲ ಮೇಲೆ ನಿಂತಿದ್ದ ಖರ್ಗೆಗೆ ಮತದಾರರು ಬ್ರೇಕ್ ಹಾಕಿದ್ದಾರೆ.
ಡಾ. ಉಮೇಶ್ ಜಾಧವ್ ಪಡೆದ ಮತಗಳು 6,15,916
ಮಲ್ಲಿಕಾರ್ಜುನ ಖರ್ಗೆ ಪಡೆದ ಮತಗಳು 5,20,726
ಡಾ. ಉಮೇಶ್ ಜಾಧವ್ 95190 ಮತಗಳಿಂದ ಗೆಲುವು
1) ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ
ಬಿಜೆಪಿ – 64010, ಕಾಂಗ್ರೆಸ್ – 90402
ಉತ್ತರದಲ್ಲಿ 26392 ಮತಗಳಿಂದ ಕಾಂಗ್ರೆಸ್ ಮುನ್ನಡೆ
2) ಅಫಜಲಪುರ ವಿಧಾನಸಭಾ ಕ್ಷೇತ್ರ
ಬಿಜೆಪಿ – 84829, ಕಾಂಗ್ರೆಸ್ -49154
ಬಿಜೆಪಿ 35675 ಮತಗಳ ಮುನ್ನಡೆ
3) ಜೇವರ್ಗಿ ವಿಧಾನಸಭಾ ಕ್ಷೇತ್ರ
ಬಿಜೆಪಿ – 82397, ಕಾಂಗ್ರೆಸ್ -58089
ಬಿಜೆಪಿ 24308 ಮತಗಳ ಮುನ್ನಡೆ
4) ಚಿತ್ತಾಪುರ ವಿಧಾನಸಭಾ ಕ್ಷೇತ್ರ
ಬಿಜೆಪಿ – 70325, ಕಾಂಗ್ರೆಸ್ -64960
ಬಿಜೆಪಿ 5365 ಮುನ್ನಡೆ
5) ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ
ಬಿಜೆಪಿ – 82417, ಕಾಂಗ್ರೆಸ್ -61819
ಬಿಜೆಪಿ 20598 ಮತಗಳ ಮುನ್ನಡೆ
6) ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ
ಬಿಜೆಪಿ – 84578, ಕಾಂಗ್ರೆಸ್ -63748
ಬಿಜೆಪಿ 20830 ಮತಗಳ ಮುನ್ನಡೆ
7) ಸೇಡಂ ವಿಧಾನಸಭಾ ಕ್ಷೇತ್ರ
ಬಿಜೆಪಿ – 68676, ಕಾಂಗ್ರೆಸ್ -73753
ಕಾಂಗ್ರೆಸ್ – 5077 ಮತಗಳ ಮುನ್ನಡೆ
8) ಗುರುಮಿಠಕಲ್ ವಿಧಾನಸಭಾ ಕ್ಷೇತ್ರ
ಬಿಜೆಪಿ – 78684, ಕಾಂಗ್ರೆಸ್ -58801
ಬಿಜೆಪಿ 19883 ಮತಗಳ ಮುನ್ನಡೆ