ಕಲಬುರಗಿ: 2019ರ ಚುನಾವಣಾ ಕಾವು ಏರತೊಡಗಿದೆ. ಬೇಸಿಗೆಯ ಉರಿ ಬಿಸಿಲನ್ನು ಲೆಕ್ಕಿಸದೆ ರಾಷ್ಟ್ರೀಯಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ.
ಲೋಕಸಭಾ ಚುನಾವಣೆ ಒಂದು ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಅತಿ ಪ್ರಾಮುಖ್ಯತೆಯನ್ನು ಕಲಬುರಗಿ ಲೋಕಸಭಾ (ಮೀಸಲು) ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ 2019ರ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಕಲಬುರಗಿ ಲೋಕಸಭಾ (ಮೀಸಲು) ಮತ ಕ್ಷೇತ್ರದಲ್ಲಿ ಒಟ್ಟು 19,20,977 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 9,68,242 ಪುರುಷ ಮತ್ತು 9,52,735 ಮಹಿಳಾ ಮತದಾರರು ಸೇರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ವಿಧಾನಸಭಾ ಜಿಲ್ಲಾವಾರು ವಿವರ
ಅಫಜಲಪುರ ವಿಧಾನಸಭಾ ಕ್ಷೇತ್ರ: 1,12,986 ಪುರುಷ, 1,07,141 ಮಹಿಳೆ ಸೇರಿದಂತೆ ಒಟ್ಟು 2,20,127 ಮತದಾರರಿದ್ದಾರೆ. ಜೇವರ್ಗಿ ವಿಧಾನಸಭಾ ಕ್ಷೇತ್ರ: 1,17,164 ಪುರುಷ, 1,15,903 ಮಹಿಳೆ ಸೇರಿದಂತೆ ಒಟ್ಟು 2,33,067 ಮತದಾರರಿದ್ದಾರೆ. ಗುರುಮಿಠಕಲ್ ವಿಧಾನಸಭಾ ಕ್ಷೇತ್ರ: 1,20,879 ಪುರುಷ, 1,21,761 ಮಹಿಳೆ ಸೇರಿದಂತೆ ಒಟ್ಟು 2,42,640 ಮತದಾರರಿದ್ದಾರೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರ: 1,14,018 ಪುರುಷ, 1,13,269 ಮಹಿಳೆ ಸೇರಿದಂತೆ ಒಟ್ಟು 2,27,287 ಮತದಾರರಿದ್ದಾರೆ. ಸೇಡಂ ವಿಧಾನಸಭಾ ಕ್ಷೇತ್ರ: 1,06,277 ಪುರುಷ, 1,08,268 ಮಹಿಳೆ ಸೇರಿದಂತೆ ಒಟ್ಟು 214545 ಮತದಾರರಿದ್ದಾರೆ.
ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ: 1,28,730 ಪುರುಷ, 121358 ಮಹಿಳೆ ಸೇರಿದಂತೆ ಒಟ್ಟು 250088 ಮತದಾರರಿದ್ದಾರೆ.
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ: 1,29,760 ಪುರುಷ, 1,29,914 ಮಹಿಳೆ ಸೇರಿದಂತೆ ಒಟ್ಟು 259674 ಮತದಾರರಿದ್ದಾರೆ. ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ: 1,38,428 ಪುರುಷ 1,35,121 ಮಹಿಳೆ ಸೇರಿದಂತೆ ಒಟ್ಟು 2,73,549 ಮತದಾರರಿದ್ದಾರೆ.