ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಯುವ ರಾಜಕಾರಣಿ ಜಗನ್ ಮೋಹನ್ ರೆಡ್ಡಿ ಅವರಿಗೆ ಮೊದಲಿಗೆ ಅಭಿನಂದನೆಗಳು….ನೆರೆಯ ಆಂಧ್ರಪ್ರದೇಶದಲ್ಲಿ ಜಗನ್ ಮುಖ್ಯಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಹಿನ್ನೆಲೆಯಲ್ಲಿ ಬೀದರ್ ನ ತರುಣ ಮಿತ್ರ ಬಾಲಾಜಿ ಕುಂಬಾರ ಚಟ್ನಾಳ ರೆಡ್ಡಿ ನಡೆದುಬಂದ ಹಾದಿಯನ್ನು ಪರಿಚಯ ಮಾಡಿಕೊಟ್ಡಿದ್ದಾರೆ.
ಬೀದರ್: ತಂದೆಯ ಅಕಾಲಿಕ ಮರಣ ನಂತರ ವೈಎಸ್ಆರ್ ಪಕ್ಷ ಕಟ್ಟಿ ಬೆಳೆಸಿದ ಪರಿ ತುಂಬಾ ವಿಸ್ಮಯಕಾರಿ, ಅನೇಕ ನೋವು, ಅವಮಾನ, ಅಪರಾಧಗಳ ನಡುವೆ ತನ್ನ ರಾಜಕೀಯ ಹೋರಾಟ ನಿರಂತರವಾಗಿ ನಡೆದಿರುವುದು ಕಂಡಿದ್ದೇವೆ.
ಆಂದ್ರಪ್ರದೇಶ ವಿಗಂಡಣೆಯಾಗಿ ತೆಲಂಗಾಣ ಉದಯವಾಗಿತ್ತು. ತೆಲಂಗಾಣ ಬಿಟ್ಟು ಆಂದ್ರಪ್ರದೇಶ ರಾಜ್ಯದಲ್ಲಿ ಹೆಚ್ಚಿನ ಒತ್ತು ಕೊಟ್ಟು ಪಕ್ಷ ಸಂಘಟಿಸಲು ಆರಂಭಿಸಿದರು.
ರಾಜ್ಯದ ಹಿತ ಬಯಸುವ ಮೂಲಕ ಅಸ್ಮಿತೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇಡೀ ಕುಟುಂಬದ ಸದಸ್ಯರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ತಂದೆ ‘ (ವೈ. ಎಸ್. ರಾಜಶೇಖರರೆಡ್ಡಿ )ಯ ಅಭಿವ್ರದ್ಧಿ ಕಾರ್ಯಗಳೇ ನನ್ನ ಮುಂದಿನ ರಾಜಕೀಯ ಕ್ಷೇತ್ರಕ್ಕೆ ಪೂರಕವೆಂದು ಜನಮಾನಸದಲ್ಲಿ ಬಿತ್ತುವ ಮೂಲಕ ಆಂದ್ರಪ್ರದೇಶ ರಾಜ್ಯದಲ್ಲಿ ವೈಎಸ್ಆರ್ ಪಕ್ಷ ಕಟ್ಟಿ ಬೆಳೆಸಿದ್ದು ದೊಡ್ಡ ಸಾಹಸದ ಪಯಣವೇ ಸರಿ.
ತನ್ನ ರಾಜ್ಯಬಿಟ್ಟು ಉಳಿದ ಕಡೆ ಗಮನ ಹರಿಸದೇ ಧೈರ್ಯ, ಛಲದಿಂದ ರಾಜಕೀಯ ಹೋರಾಟ ಆರಂಭಿಸಿದರು
ತನ್ನ ರಾಜ್ಯದ ಹಿತ ಕಾಪಾಡುವುದು ಬಿಟ್ಟು ಪ್ರಧಾನ ಮಂತ್ರಿ ಕುರ್ಚಿ ಮೇಲೆ ಟವೇಲ್ ಹಾಕಿದ ಚಂದ್ರ ಬಾಬು ನಾಯ್ಡು ಕನಸು ಭಗ್ನ ಮಾಡವುದರ ಜೊತೆಗೆ ಸಿಎಂ ಪಟ್ಟದಿಂದ ಕೆಳಗಿಳಿಸಿ ವಿರೋಧ ಪಕ್ಷ ಸ್ಥಾನದಲ್ಲಿ ಕೂಡಿಸುವಂತೆ ಮಾಡಿದ ಯಶಸ್ವಿ ಯುವ ರಾಜಕಾರಣಿ ಜಗನ್ ರೆಡ್ಡಿ.
ದೇಶದೆಲ್ಲೆಡೆ ಮೋದಿ ಅಲೆಯಿದ್ದರೂ ಕೂಡ ತನ್ನ ರಾಜ್ಯದಲ್ಲಿ ಬಿಜೆಪಿ ಖಾತೆ ತೆರೆಯಲು ಬಿಡದ ಜಗನ್ ಪ್ರತಿಸ್ಪರ್ಧಿ ಪಕ್ಷ ಟಿಡಿಪಿ ಪಕ್ಷ ಮಣ್ಣು ಮುಕ್ಕಿಸಿದರು. ಒಂದು ಪ್ರಾದೇಶಿಕ ಗಟ್ಟಿಯಾಗಿ ಜನರ ನಂಬಿಕೆ ವಿಶ್ವಾಸ ಉಳಿಸಿಕೊಂಡಿದರೆ ರಾಷ್ಟ್ರೀಯ ಪಕ್ಷಗಳು ಚಿಂದಿ ಮಾಡಬಹುದು ಎಂಬುದು ದ್ರಾವಿಡರು ಸಾಕ್ಷಿಯಾಗಿ ತೋರಿಸಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಸ್ವಂತ ಬಹುಮತ ಮೇಲೆ ಅಧಿಕಾರ ಹಿಡಿದ ವೈಎಸ್ಆರ್ ಪಕ್ಷದ ಸಾಹಸಮಯ ಹೋರಾಟ ಮೆಚ್ಚುವಂತಹದು . ಇಂತಹ ಪ್ರಾದೇಶಿಕ ಪಕ್ಷಗಳು ಈ ರಾಜ್ಯಗಳ ಅಭಿವ್ರದ್ಧಿಗೆ ಅವಶ್ಯಕವಾಗಿವೆ.
ಸಾವಿರಾರು ಕಿ.ಮೀ. ಪಾದ ಯಾತ್ರೆ ಮಾಡುವ ಮುಖಾಂತರ ಇಡೀ ಮತದಾರರನ್ನು ತನ್ನತ ಸೆಳೆಯುವಂತೆ ಮಾಡಿದರು. ಪ್ರತಿಸ್ಪರ್ಧಿ ಪಕ್ಷ ಟಿಡಿಪಿಗೆ ಧುಳಿಪಟ ಮಾಡುವುದರ ಜೊತೆಗೆ ರಾಷ್ಟ್ರೀಯ ಪಕ್ಷಗಳ ನೆರಳು ಆಂಧ್ರದ ಮೇಲೆ ಬೀಳದಂತೆ ಎಚ್ಚರವಹಿಸಿದ ದ್ರಾವೀಡರ ಪ್ರಬುದ್ಧತೆ ಹಾಗೂ ಜಗನ್ ರೆಡ್ಡಿಯ ಪಕ್ಷ ಸಂಘಟನೆ ನಿಜಕ್ಕೂ ವಿಸ್ಮಯಕಾರಿ ಹವಾ ಅಲ್ಲವೇ?
-ಬಾಲಾಜಿ ಕುಂಬಾರ, ಚಟ್ನಾಳ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
View Comments
All The Best Jagan Sir