ಚಿಂಚೋಳಿ: ಚಿಂಚೋಳಿ ಮೀಸಲು ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಸೋಲಿಗೆ ಕಾರಣಗಳೇನು ಎಂದು ಕಂಡುಕೊಳ್ಳಲು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅಧ್ಯಕ್ಷತೆಯಲ್ಲಿ ಆತ್ಮ ಅವಲೋಕನ ಸಭೆ ಜರುಗಿತು.
ಸಭೆಯಲ್ಲಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ರವಿಶಂಕರೆಡ್ಡಿ ಮುತ್ತಂಗಿ ಮಾತನಾಡಿ, ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷದ ಮುಖಂಡರುಗಳಿಗೆ ಹಾಗೂ ಕಾರ್ಯಕರ್ತರಿಗೆ ನಿರ್ಲಕ್ಷತನ ತೋರಿದ ಕಾರಣ ಮತಗಳು ಕಡಿಮೆ ಪಡೆಯಲಾಗಿದೆ ಕಾಂಗ್ರೆಸ್ ಮುಖಂಡರು ಯಾರೊಬ್ಬ ಕಾರ್ಯಕರ್ತರಿಗೂ ಮಾತನಾಡಿಲ್ಲ. ಆದರೂ ನಮ್ಮ ಪಕ್ಷದ ಹಾಗೂ ಸಮ್ಮಿಸ್ರ ಸರಕಾರದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಚಿವ ಬಂಡಪ್ಪ ಖಾಶೇಂಪೂರ ಆದೇಶ ಮತ್ತು ಮಾರ್ಗದರ್ಶನದಂತೆ ಜೆಡಿಎಸ್ ಶ್ರಮಿದ್ದ ಕಾರಣ ಕಾಂಗ್ರೆಸ್ ಪಕ್ಷ ಸಮೀಪದಿಂದ ಸೋತಿದೆ ಇಲ್ಲದ್ದರೇ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗಳ ಮತಗಳು ಅಜಗಜಾಂತರ ವ್ಯೆತ್ಯಾಸವಾಗಿರುತ್ತಿತ್ತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ಘಟಕ ತಾಲೂಕಾಧ್ಯಕ್ಷ ಗಣಪತರಾವ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡ ತಾಲೂಕಾ ಪಂಚಾಯತ ಅಧ್ಯಕ್ಷೆ ರೇಣುಕಾ ಚವ್ಹಾಣ ಪರೋಕ್ಷವಾಗಿ ಅವರ ಪತಿ ಪ್ರತ್ತೇಕ್ಷವಾಗಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಜತೆಗೆ ಸ್ಥಳಿಯ ಕೆಲವು ಪುರಸಭೆ ಸದಸ್ಯರುಗಳು, ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ತಾಲೂಕಾ ಪಂಚಾಯತ ಸದಸ್ಯರುಗಳು ಪಕ್ಷ ವಿರೋಧಿ ಚಟುವಟಿಕೆಗಳು ಮಾಡಿರುವುದರಿಂದ ನಾವು ಸೋಲು ಅನುಭವಿಸುಂಮತಾಗಿದೆ ಅಂತವರ ವಿರೂದ್ಧ ಕ್ತರಮ ಜರುಗಿಸಿ ಎಂದು ಹೇಳುತ್ತಾ ಜೋಶಿನಲ್ಲಿ ಜೈ ಕಾಂಗ್ರೆಸ್ ಹಾಗೂ ಜೈ ರಾಠೋಡ ಎನ್ನುವ ಬದಲು ಜೈ ಜಾಧವ ಎಂದು ಘೊಷಣೆ ಹಾಕಿದರು. ಇದೇ ಸಂಧರ್ಭದಲ್ಲಿ ಗೊಂದಲ ಉಂಟಾಯಿತು. ನಂತರ ಗಣಪತರಾವ ಕೋಶಿನಲ್ಲಿ ಜಾಧವ ಎಂದಿದ್ದೇನೆ ಜೈ ರಾಠೋಡ ಎಂದು ಹೇಳುವ ಮೂಲಕ ಕ್ಷೇಮೆ ಯಾಚಿಸಿದರು.
ಪುರಸಭೆ ಸದಸ್ಯ ಅಬ್ದುಲ್ ಬಾಸೀತ್, ಗೋಪಾಲರಾವ ಕಟ್ಟಿಮನಿ, ವಿಜಯಕುಮಾರ ಗಂಗನಪಳ್ಳಿ, ಶಿವಕುಮಾರ ಕೊಳ್ಳುರ, ಮದೂಸುಧನರೆಡ್ಡಿ ಕಲ್ಲೂರ, ಹಾಫೀಸ್ ಚಂದಾಪೂರ, ಅಣವೀರ ಕೋಡ್ಲಿ ಮಾತನಾಡಿ, ಪಕ್ಷ ವಿರೋಧ ಚಟುವಟಿಕೆಗಳು ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡರ ಹಾಗೂ ಚುನಾಯಿತ ಪ್ರತಿನಿಧಿಗಳ ವಿರೋದ್ಧ ಕ್ರಮ ಜರುಗಿಸಬೇಕು. ನಾನು ಸೋತು ಸುಮ್ಮನ್ಬಿರುವುದು ಬೇಡ ಯಾರು ಬೇಜಾರ ಆಗುವುದು ಬೇಕು ಮತ್ತೆ ನಾನೆಲ್ಲ ಹುಮ್ಮಸಿನಿಂದ ಪಕ್ಷದ ಸಂಘನೆ ಮಾಡುವುದರ ಮೂಲಕ ಮುಂಬರುವ ದಿನಗಳಲ್ಲಿ ಸುಭಾಷ ರಾಠೋಡ ಅವರಿಗೆ ಶಾಸಕರಾಗಿ ಮಾಡೋಣ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಮಾತನಾಡಿ, ನನ್ನ ಸೋಲಿಗೆ ಮತ್ತೊಬ್ಬರಿಗೆ ಆರೋಪ ಮಾಡುವುದು ಬೇಡ ನನ್ನ ಸೋಲಿಗೆ ನಾನೇ ಕಾರಣ ಎಂದರು. ನಾನು ಪಕ್ಷಕ್ಕೆ ಹೊಸಬ್ಬ ಪಕ್ಷದ ಕೆಲವು ಮುಖಂಡರಿಗೆ ಬೇಟಿ ಆಗಲು ಸಾದ್ಯವಾಗಲಿಲ್ಲ ಆದರೂ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಶಿಪಾಯಿಗಲಾಗಿ ಪಕ್ಷದ ಮತ್ತು ನನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ. ಪತ್ಯಕ್ಷವಾಗಿ, ಪರೋಕ್ಷವಾಗಿ ಶ್ರಮಿಸಿದ ಹಾಗೂ ಹಗಲಿರುಳು ನನ್ನ ಗೆಲುವಿಗಾಗಿ ಶ್ರಮಿಸಿ ಎಲ್ಲಾ ಕಾರ್ಯಕರ್ತರ ದೇವರಗಳಿಗೆ ಧನ್ಯವಾದ ಎಂದು ಹೇಳಿದರು.
ಡಾ.ಉಮೇಶ ಜಾಧವ ಹಾಗೂ ಬಿಜೆಪಿಯವರು ನನ್ನ ವಿರೂದ್ದ ಸುಳ್ಳು ಪ್ರಚಾರ ಮಾಡಿ ನಮ್ಮ ತಾಂಡದ ಜನರಿಗೆ ವಂಚಿಸಿ ಮತ ಪಡೆದಿದ್ದಾರೆ ಇದು ಸುಳ್ಳಿನ ಜಯ ಎಂದರು. ಉಮೇಶ ಜಾಧವ ತನ್ನ ಪುತ್ರ ಅವಿನಾಶನ ಗೆಲುವಿಗಾಗಿ ಮುಂಬೈನಿಂದ ಹಾಗೂ ನಮ್ಮ ಪಕ್ಕದ ತಾಲೂಕಿನ ಹುಮನಾಬಾದನ ಕೆಲವು ತಾಂಡಗಳಿಂದ ಜನರು ಬಂದು ಐನಾಪೂರ ವ್ಯಾಪ್ತಿಯಲ್ಲಿ ಸುಮಾರು ೮-೧೦ ತಾಂಡಗಳಲ್ಲಿ ಬೋಗಸ್ ಮತ ಹಾಕಿದ್ದಾರೆ. ಆ ಸಂಧರ್ಭದಲ್ಲಿ ನಮ್ಮ ಕಾರ್ಯಕರ್ತರು ನಮ್ಮ ಗಮನಕ್ಕೆ ತಂದಿಲ್ಲ ಇದರಿಂದ ಸೋಲು ಅನುಭವಿಸಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯವರು ಕೆಲವು ಸುಳ್ಳು ಭರವಸೆ ಕೊಟ್ಟು ಜನರಲ್ಲಿ ಮತ ಪಡೆದಿದ್ದಾರೆ ಅವರಿಗೆ ಎರಡ್ಮೂರು ತಿಂಗಳು ಕಾಲವಕಾಶ ಕೊಟ್ಟು ಕಾದು ನೋಡೋಣ ಭರವಸೆ ಈಡೆಸದೇ ಇದ್ದಲ್ಲಿ ಹೋರಾಟ ಕೈಗೊಳ್ಳೋಣ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಟಿಟಿ ಭೀಮರಾವ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ತಾಲೂಕಾ ಪಂಚಾಯತ ಸದಸ್ಯ ಮಹ್ಮದ್ ನಾಯಿಕೋಡಿ, ರಾಮರಾವ ರಾಠೋಡ, ಮುಖಂಡರಾದ ಮಹಿಬೂಬ ಪಟೇಲ್ ಸಾಸರಗಾಂವ, ಚಿತ್ರಶೇಖರ ಪಾಟೀಲ, ಪ್ರಶಾಂತ ಕೊಡದೂರ, ಬಸವರಾಜ ಮಾಲಿ, ಗಂಗಾಧರ ಗಡ್ಡಿಮನಿ, ಶರಣು ಪಾಟೀಲ, ಆನಂದ ಜಾಧವ, ಹಣಮಂತ ಪೂಜಾರಿ, ರಾಮಶೆಟ್ಟಿ ಪವಾರ್, ತಿಪ್ಪಾರೆಡ್ಡಿ ಭಂಟವಾರ್, ರವಿಕಾಂತ ಪೋಲಿಸ್ ಪಾಟೀಲ, ರಾಜು ಜಾಧವ, ಬಸವರಾಜ ಸಜ್ಜನ್, ಅಪ್ಪು ಹೋರೂರ, ಸುಂದರ್ ನಿರಾಳಕರ್ ಸೇರಿದಂತೆ ಅನೇಕರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…