ವಿಜಯಪುರ: ಬಸವಾದಿ ಶರಣರ ಕಾಯಕ ದಾಸೋಹ ಹಾಗೂ ಸಮಾನತೆಯನ್ನು ತಳಹದಿಯನ್ನಾಗಿಟ್ಟುಕೊಂಡು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಕಾಯಕ ದಾಸೋಹ ಪ್ರತಿಷ್ಠಾನವು ತನ್ನ 10ನೇ ವರ್ಷಾಚರಣೆ ನಿಮಿತ್ತ ಹಲವು ಹತ್ತು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ನುಡಿದರು.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿಯ ಗ್ರಾಮದ ಕಂಬಿ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಯಕ ದಾಸೋಹ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರ ಬದುಕು ಹಾಗೂ ಬೋಧನೆಯನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಮುನ್ನಡೆದರೆ ಬದುಕು ಸಾರ್ಥಕವಾಗಬಲ್ಲುದು ಎಂದು ತಿಳಿಸಿದರು.
ರಾಜಕೀಯ ಮುಖಂಡ ಸುರೇಶಗೌಡ ಬಿ. ಪಾಟೀಲ ಅವರು ಕಲಬುರಗಿಯ ಲೇಖಕ ಸೂರ್ಯಕಾಂತ ಸೊನ್ನದ ಅವರು ರಚಿಸಿದ ಕಲ್ಯಾಣ ಶರಣರ ಉದಾತ್ತ ಚಿಂತನೆಗಳು ಕೃತಿ ಬಿಡುಗಡೆ ಮಾಡಿದರು. ಕೃತಿ ಕುರಿತು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶರಣರ ಉದಾತ್ತಬ ಚಿಂತನೆಗಳನ್ನು ತುಂಬಾ ಸರಳವಾಗಿ ಅರ್ಥಪೂರ್ಣವಾಗಿ ವಿಶ್ಲೇಷಣೆ ಮಾಡಿರುವುದು ಈ ಕೃತಿಯ ಹೆಚ್ಚುಗಾರಿಕೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆಯಲ್ಲಿ “ಜಗದ ಬೆಳಕು” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಬಸವತತ್ವ ಪ್ರತಿಪಾದಕರಾಗಿದ್ದ ಇಳಕಲ್ ಲಿಂ. ಡಾ. ಮಹಾಂತ ಸ್ವಾಮಿಗಳು ಮಹಾಂತ ಜೋಳಿಗೆ ಹಿಡಿದು ನಾಡಿನಾದ್ಯಂತ ಸುತ್ತಾಡಿ ವ್ಯಸನಮುಕ್ತ ಸಮಾಜ ಕಟ್ಟಲು ಅಹರ್ನಿಷಿ ಪ್ರಯತ್ನಿಸಿದರು. ಅದರಂತೆ ಗದುಗಿನ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ಪುಸ್ತಕ ಪ್ರಕಟಿಸುವ ಮೂಲಕ ಮನುಕುಲದ ಉಳಿವಿಗೆ ಸತತ ಶ್ರಮಿಸಿದವರು. ಬಸವಾದಿ ಶರಣರ ಕಾಯಕ, ದಾಸೋಹ ಸಂಸ್ಕೃತಿಯನ್ನು ಉಸಿರಾಗಿಸಿಕೊಂಡಿದ್ದ ಲಿಂ. ಡಾ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಕಲ್ಯಾಣ ರಾಜ್ಯದ ಸ್ಥಾಪನೆಯ ಕನಸು ಕಂಡಿದ್ದರು. ನಾಡಿನಾದ್ಯಂತ ಸಂಚಾರ ಮಾಡಿ ಬಸವಾದಿ ಶರಣರ ವಿಚಾರಗಳನ್ನು ವಿಶಿಷ್ಟ ರೀತಿಯಲ್ಲಿ ಪ್ರಚುರಪಡಿಸಿದ ಲಿಂ. ಡಾ. ಮಾತೆ ಮಹಾದೇವಿ ಈ ಮುಂತಾದವರು ಮರ್ತ್ಯಕ್ಕೆ ಬಂದ ತಮ್ಮ ಮಹಾಮಣಿಹ ಪೂರೈಸಿ ಬದುಕಿನ ಸಾರ್ಥಕತೆ ಪಡೆದುಕೊಂಡವರು. ಅಂತೆಯೇ ಅವರು ಜಗದ ಬೆಳಕಾಗಿ ಪರಿಣಮಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಜೆಡಿಎಸ್ ಯುವ ಮುಖಂಡ ರಾಜುಗೌಡ ಬಿ. ಪಾಟೀಲ (ಕುದರಿಸಾಲವಡಗಿ), ಬಿಜೆಪಿ ಮುಖಂಡ ಬಸನಗೌಡ ಎಸ್. ಪಾಟೀಲ (ನಾಗರಾಳ ಹುಲಿ) ಸೇರಿದಂತೆ ವಿವಿಧ ಪಕ್ಷದ ಗಣ್ಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಸಕ ಸೋಮನಗೌಡ ಬಿ. ಪಾಟೀಲ ಸಹೋದರ ಸುರೇಶ ಬಿ. ಗೌಡ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರದಾನ, ಸಾಧಕರಿಗೆ- ನಿವೃತ್ತರಿಗೆ ಸನ್ಮಾನ ಮಾಡಲಾಯಿತು.
ಕೃಷಿ ಸಮಾವೇಶ, ಗೀಗಿಪದ ಕಾರ್ಯಕ್ರಮ, ಜಾನಪದ ಜಾತ್ರೆ ಸೇರಿದಂತೆ ಹಲವು ಹತ್ತು ವಿಧಾಯಕ ಕಾರ್ಯಕ್ರಮಗಳು ಜರುಗಿದವು. ಪ್ರತಿಷ್ಠಾನದ ಎನ್.ಬಿ. ರೋಡಗಿ ಸೇರಿದಮತೆ ಪದಾಧಿಕಾರಿಗಳು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…