ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ. ಜಯಶ್ರೀ ದಂಡೆ ಅವರ ಬದುಕು ಬರಹ ಹಾಗೂ ಅಭಿನಂದನ ಸಮಾರಂಭವನ್ನು ಮೇ 31 ರಂದು ಬೆಳಗ್ಗೆ 9 ರಂದು ಮಧ್ಯಾಹ್ನ 1 ಗಂಟೆಯವೆರೆಗೆ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರಸ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಜಯಶ್ರೀ ದಂಡೆ ಅಭಿನಂದನ ಸಮಿತಿ ತಿಳಿಸಿದೆ.
ಜರುಗಲಿದ್ದು, ಬೆಳಗ್ಗೆ 9 ಗಂಟೆಗೆ ಜರುಗಲಿರುವ ವಿಚಾರ ಸಂಕುರಣದ ಉದ್ಘಾಟನೆಯನ್ನು ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ ಉದ್ಘಾಟಿಸಲಿದ್ದಾರೆ. ಡಾ. ಆನಂದ ಸಿದ್ಧಾಮಣಿ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ಜಯಶ್ರೀ ದಂಡೆಯವರ ಜೀವನ-ಸಾಧನೆ ಕುರಿತು ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಪಾಟೀಲ, ಡಾ. ಜಯಶ್ರೀ ದಂಡೆಯವರ ಶರಣ ಸಾಹಿತ್ಯ ಕುರಿತು ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ, ದಂಡೆಯವರ ಸಂಶೋಧನ ಸಾಹಿತ್ಯ ಕುರಿತು ಜಿಲಾನಾಬಾದ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ವಿಶ್ವನಾಥ ಹೊಸಮನಿ ಪ್ರಬಂಧ ಮಂಡಿಸಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಗ್ಗೆ ೧೧ ಗಂಟೆಗೆ ಅಭಿನಂದನಾ ಸಮಾರಂಭ ಜರುಗಲಿದ್ದು, ಗುಲ್ಬರ್ಗ ವಿವಿ ಕುಲಪತಿ ಡಾ. ಪ್ರೊ. ಎಸ್.ಆರ್. ನಿರಂಜನ್ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ.ಜಿ. ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಪ್ರಸಾರಾಂಗ ನಿರ್ದೇಶಕ ಡಾ. ಎಚ್.ಟಿ. ಪೋತೆ ಗೌರವ ಉಪಸ್ಥಿತಿ ವಹಿಸುವರು ಎಂದು ಅಭಿನಂದನಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.