ಕುಂಬಾರಿಕೆ ನಮ್ಮ ವೃತ್ತಿ ಬದುಕು. ಅದನ್ನು ತನ್ನ ಜೀವಿತಾವಧಿಯಲ್ಲಿ ಒಂದು ದಿನವೂ ಬಿಡುವಿಲ್ಲದೆ ದುಡಿದು ಸಂಸಾರದ ನೊಗವನ್ನ ಒತ್ತು ಸಂಸಾರ ಸಾಗಿಸಿದವಳು ನಮ್ಮ ಅಜ್ಜಿ. ಅಜ್ಜನನ್ನು ನಾವು ಯಾರು ನೋಡಿಲ್ಲ ಆದರೆ ಅವರ ಒಂದು ಫೋಟೋ ಮನೆಯಲ್ಲಿ ಇರುವುದರಿಂದ ಅದನ್ನೆ ನೋಡಿ ಖುಷಿ ಗೊಂಡವರು ನಾವು. ಆದರೆ ಅಜ್ಜಜನ ಬಗ್ಗೆ ಕೆಲವು ಹಿರಿಯರ ಹೇಳಿದ್ದು ಮಾತ್ರ. ಅಜ್ಜನ ಕಾಯಕ ವೆಂದರೆ ನ್ಯಾಯ ಪಂಚಾಯಿತಿ ಮಾಡುವುದು ಮತ್ತು ನಾಟಕದಲ್ಲಿ ಪಾತ್ರವನ್ನು ಮಾಡುವುದು ಹಾಗು ನಮ್ಮದು ಒಂದು ಸೋಡಾ ಅಂಗಡಿ ಕೂಡಾ ಇತ್ತಂತೆ ಅದರ ಜೊತೆಗೆ ಫೋಟೋ ಪ್ರೇಮ್ ಹಾಕುವುದು ಮಾಡುತ್ತಿದ್ದರಂತೆ ಆದರೆ ಅಜ್ಜಿ ಮಾತ್ರ ನಮ್ಮ ಕುಲಕಸುಬು ಕುಂಬಾರಿಕೆಯನ್ನು ಮಾಡುತಿದ್ದಳು ಅಜ್ಜಿ. ನಮ್ಮ ತಿಳುವಳಿಕೆ ಬಂದಾಗಿನಿಂದಲು ಕಾಯಕವನ್ನು ಒಂದು ದಿನವು ನಿಲ್ಲಸಿರಲ್ಲಿ ದಿನ ನಿತ್ಯ ಮುಚುಳಾ, ಪರ್ಯಾಣ ,ಅಂಚು,ಪಣತಿ, ಇನ್ನಿತರ ಮಣ್ಣಿನ ವಸ್ತುಗಳನ್ನು ಮಾಡುತ್ತಿದ್ದಳು ಅವುಗಳನ್ನು ಸ್ವತಾ ತಾನೆ ಸುಟ್ಟು ಮುಸಲ್ಮಾನರ ಓಣಿಯಲ್ಲಿ (ಆಸರ್ ಮಹಲ್) ಹಳೆಪೇಟೆ ಜಂಗಳೆಯ ಓಣಿಗೆ ಓಣಿ ಓಣಿ ಸುತ್ತುತ್ತಾ ಮಾರಾಟ ಮಾಡಿಕೊಂಡು ಬರುತ್ತಿದ್ದಳು. ಬರುವಾಗ ಅಜ್ಜಿ ತರಕಾರಿ ನಮಗೆ ತಿಂಡಿ ತಿನಿಸುಗಳು ಮರೆಯದೆ ತರುತ್ತಿದ್ದಳು. ಇದು ಅಜ್ಜಿಯ ದಿನ ನಿತ್ಯದ ಕಾಯಕ ಇದರ ಜೊತೆಗೆ ಶಹಾಪುರದ ಸಂತೆ ಪ್ರತಿ ಶುಕ್ರವಾರದಂದು ನಡೆಯುತ್ತಿತ್ತು.
ಸಂತೆಯಲ್ಲು ಅಜ್ಜಿ ತಾನು ಮಾಡಿದ ವಸ್ತುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಳು ನಾವು ಕೂಡ ಅಜ್ಜಿಗೆ ಸಹಾಯ ಮಾಡುತ್ತಿದ್ದೆವು. ಮುಸಲ್ಮಾನರ ಹಬ್ಬಗಳು ಬಂದೆ ಮಣ್ಣಿನ ವಸ್ತುಗಳಿಗೆ ಹೆಚ್ಚು ಬೇಡಿಕೆ ಆಗ ನಾವು ಕೂಡ ಅಜ್ಜಿಯ ಜೊತೆ ಮಾರಾಟಕ್ಕೆ ಜಲ್ಲಿಹೊತ್ತುಕೊಂಡು ಹೋಗುತ್ತಿದ್ದೆವು. ದೇಶಮುಖರ ಮನೆಯ ಹತ್ತಿರ ರ್ಯಾವಪ್ಪನ ಹೋಟೆಲ್ ನಲ್ಲಿ ನಮ್ಮಗೆ ಒಗ್ಗರಾಣಿ ಮಿರ್ಚಿ ಬಜಿ ಕೊಡಿಸುತ್ತಿದ್ದದಳು. ಮಾರಾಟ ಮಾಡುವ ಸಂದರ್ಭದಲ್ಲಿ ಕೆಲವರು ಕಡಿಮೆ ದುಡ್ಡಿಗೆ ಕೇಳುವರು ಕೇಲವರು ರೊಟ್ಟಿ ಮಾಡಿದ ತವುಡು, ಬೇಳೆಕಾಳುಗಳು ಒಡೆದ ತವುಡು ಗಳಿಗೆ ತಗೆದು ಕೊಳ್ಳುತ್ತಿದ್ದರು ಅವುಗಳನ್ನು ಹೊತ್ತುಕೊಂಡು ನಾವು ಬರುತ್ತಿದೆವು ಒಮ್ಮೊಮ್ಮೆ ನಾವು ತಗೆದು ಕೊಂಡು ಹೊದ ವಸ್ತುಗಳು ವ್ಯಾಪಾರ ವಾಗುತ್ತಿದ್ದಿದಿಲ್ಲ ಅಲೆ ಪರಿಚಿತರ ಮನೆಯಲ್ಲಿ ಇಟ್ಟು ಬರುತ್ತಿದ್ದೆವು. ವ್ಯಾಪಾರ ವಾಗದ್ದಿದರು ಕೂಡ ಯಾವತ್ತು ನಮಗೆ ತಿಂಡಿ ತರುವುದನ್ನು ಮರೆಯುತ್ತಿರಲ್ಲಿಲ್ಲ.
ಅಜ್ಜಿ ನಮ್ಮ ಜೊತೆಗೆ ದನಕರುಗಳಿಗೆ ಕಬ್ಬಿನ ಸ್ವಾಗಿ ಮತ್ತೆ ವ್ಯಾಪಾರ ವಾಗದೆ ಉಳಿದ ತರಕಾರಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ ದನಕರುಗಳಿಗೆ ಮೈಯುಸುತ್ತಿದ್ದಳು. ಒಂದೊಮ್ಮೆ ಆಗಿನ ಕಾಲಕ್ಕೆ ಒಂದು ಕಟ ಸೊಪ್ಪಿ (ಕಣಿಕಿ) ೧೦೦ರೂಪಾಯಿ ಯಾಗಿತ್ತು ಆದರು ಕೂಡ ನಮ್ಮ ಅಜ್ಜಿ ಖರೀದಿಸಿ ದನಕರುಗಳಿಗೆ ಮೆಯಿಸಿದ್ದಳುು. ಈ ನೆನಪು ಇನ್ನು ಹಾಗೆ ಇದೆ. ದನಕರುಗಳಿಗೆ ನಮ್ಮ ಅಜ್ಜಿ ಬರುವುದೆ ಕಾಯಿತ್ತಿರುತ್ತಿದ್ದು ಬಂದ ತಕ್ಷಣವೇ ಅವುಗಳಿಗೆ ಏನಾದರು ತಗೆದು ಕೊಂಡು ಬಂದಿರುತ್ತಿದ್ದಳು. ನಮ್ಮ ಅಜ್ಜಿಗೆ ಮೈ ಹುಶಾರ ಇಲ್ಲದಾಗ ಡಾಕ್ಟರ್ ರಾಮರಾವ್ ಕುಲಕರ್ಣಿ ಅವರ ಹತ್ತಿರ ತೊರಿಸುತ್ತಿದ್ದದರು. ಆವಾಗ ಡಾಕ್ಟರ್ ಅಂದ ಮಾತು ಏನಮ್ಮ ಪರಮವ್ವ ನಿನಗೆ ಆರೋಗ್ಯ ಸರಿ ಇಲ್ಲವಾ ಅಥವಾ ನಿಮ್ಮ ಎಮ್ಮೆ ಆರಾಮ ಇಲ್ಲವಾ ಎಂದು ಕೇಳುತ್ತಿದ್ದರು ಯಾಕೆಂದೆ ಅಜ್ಜಿಯ ಜೊತೆಗೆ ಎಮ್ಮೆ ಹೋಗುತ್ತಿತ್ತು. ಅಷ್ಟೊಂದು ಹಚ್ಚಿಕೊಂಡಿದ್ದವು ದನಕರುಗಳು ಯಾವಾಗಲೂ ಅಜ್ಜಿಗೆ ಚಹಾ ಕುಡಿಯುವ ಚಟ ದಿನಾಲು ೫ರಿಂದ ೭,೮ ಬಾರಿ ಚಹಾ ಬೇಕಾಗುತ್ತಿತ್ತು. ಅಜ್ಜಿಗೆ ಮನೆಯಲ್ಲಿ ಮಾಡಿದ ಚಹಾಗಿಂತಹ ಹೋಟೆಲ್ ನಲ್ಲಿ ಮಾಡಿದ ಚಹಾ ಜಾಸ್ತಿ ಕುಡಿಯುತ್ತಿದ್ದಳ ಇದರಿಂದು ನಮ್ಮ ಚಾಹಾ ತರಲ್ಲಿಕ್ಕೆ ಹೊದರೆ ನಮ್ಮಗೆ ೧೦ ಪೈಸೆ ಕೊಡುತ್ತಿದ್ದಳು ಅದರ ಜೊತಗೆ ಚಹಾದ ಹೋಟೆಲ್ ಮಾಲಿಕ ಇಬ್ರಾಹಿಂ ನಮಗೆ ಸಕ್ಕರಿ ಕೊಡುತ್ತಿದ್ದ.
ತಿನ್ನಲು ಇದರಿಂದ ನಾನು ತರುತ್ತೆನೆ ಅನ್ನುವ ಹಠ ಮಾಡುತ್ತಿದೆವು ಅಜ್ಜಿಗೆ ತಮ್ಮ ತಮ್ಮನೆ ಮೇಲೆ ಎಲ್ಲಿಲ್ಲದ ಪ್ರೀತಿ ಆಗಾಗ ಕುಂಬಾರಪೇಟೆಗೆ ಹೋಗುತ್ತಿದ್ದಳು. ಅದರಿಂದ ನಮ್ಮಗೆ ತುಂಬಾ ಬೇಜಾರು ಯಾಕೆಂರೆ ಅಜ್ಜಿ ಬರುವ ವರೆಗೆ ತಿಂಡಿ,ತಿನಿಸುಗಳು ಇಲ್ಲ ನಮ್ಮ ಅಜ್ಜಿ ಮಾಡುತ್ತಿದ್ದ ಪಲ್ಯ ಇಗಲು ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತೆ ಅಷ್ಟು ರುಚಿಕರವಾದ ಅಡಿಗೆ ಮಾಡುತ್ತಿದ್ದಳು ಅಜ್ಜಿ ಈಗ ಎಷ್ಟೊಂದು ಮಸಾಲೆ ಪದಾರ್ಥಗಳನ್ನು ಹಾಕಿದರು ಕೂಡಾ ಅಜ್ಜಿ ಮಾಡುತಿದ್ದ ಅಡಿಗೆ ಅಷ್ಟು ರುಚಿ ಇಗಿನ ಅಡಿಗೆಯಲ್ಲಿ ಇಲ್ಲ ಬರೆ ಕಾರ ಉಪು ಕಾಕಿದರೆ ಅಷ್ಟೊಂದು ರುಚಿಕರವಾಗಿರುತ್ತಿತ್ತು ಅಜ್ಜಿ ಮಾಡಿದ ಅಡಿಗಿ ಅಜ್ಜಿ ಮಾತ್ರ ಯಾವಾಗಲೂ ಬಿಸಿ ರೊಟ್ಟಿ ಗಿಂತ ಹೆಚ್ಚಾಗಿ ಕಡಕ ರೊಟ್ಟಿ ಯನ್ನೆ ಊಟಾ ಮಾಡುತ್ತಿದ್ದಳು. ಕೊನೆಯವರೆಗೂ ಅಷ್ಟೊಂದು ಗಟ್ಟಿಯಾಗಿದ್ದವು ಅಜ್ಜಿಯ ಹಲ್ಲುಗಳು. ಅದೊಂದು ದಿನ ೨/೫/೨೦೧೩ ರಂದು ನಾನು ಎಂದಿನಂತೆ ಕೆಲಸಕ್ಕೆ ಹೋಗಿದ್ದೆ ಕೆಲಸ ಮಾಡುತ್ತಿರುವಾಗಲೇ ಸಹೋದರ ವಿಶ್ವಾರಾಧ್ಯ ಸತ್ಯಂಪೇಟೆ ಅವರಿಂದ ನನಗೆ ಕೆರೆ ಬರುತ್ತೆ ಅಜ್ಜಿ ಇನ್ನಿಲ್ಲ ಅಂತಹ ಕೇಳಿ ಆಘಾತ ವಾಗುತ್ತದೆ ಕ್ಷಣ ಒತ್ತು ಸುಧಾರಿಸಿಕೊಂಡು ಮನೆಗೆ ಬಂದೆ ಕೊನೆಗೆ ನನ್ನ ಅಜ್ಜಿ ಹೇಳದೆ ಕೇಳದೆ ಬಾರದ ಊರಿಗೆ ಹೋಗಿಯ ಬಿಟ್ಟಿದ್ದಳು.
-ಸಾಯಿಕುಮಾರ ಇಜೇರಿ, ಶಹಾಪುರ
ಮೊ: 8197742111