ಕಲಬುರಗಿ: ಎಸ್ ಯುಸಿಐ ಪಕ್ಷದ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಾಮ್ರೆಡ್ ಎಸ್. ಎಂ. ಶರ್ಮಾ ರವರ ಪರವಾಗಿ ಪಕ್ಷದ ಜಿಲ್ಲಾ ಸಮಿತಿಯಿಂದ ಪ್ರಚಾರ ಜಾಥಾ ಮಂಗಳವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಿಗ್ಗೆ 8.30 ಕ್ಕೆ ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಈ ಪ್ರಚಾರ ಜಾತಾವನ್ನು ಉದ್ಘಾಟಿಸಲಾಯಿತು.
ಈ ಜಾಥಾ ನಗರದ ಮುಖ್ಯ ಬಡಾವಣೆಗಳಲ್ಲಿ ಬೀದಿ ಸಭೆಗಳ ಮೂಲಕ ನಗರದಾದ್ಯಂತ ಪ್ರಚಾರ ಮಾಡಿ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.