ಉಪನೊಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ 18.860 ಆಕ್ರಮ ಹಣ ಪತ್ತೆ

0
98

ಬೀದರ್: ಇಂದು ಹುಮನಾಬಾದ ತಾಲೂಕಾ ಕಾರ್ಯಾಲಯದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಧ್ಯವರ್ತಿಗಳ ಬಳಸಿಕೊಂಡು ಆಕ್ರಮ ನಡೆಯುವ ಕುರಿತು ಖಚಿತ ಮಾಹಿತಿ ಪಡೆದ ಎಸಿಬಿ ವಲಯದ ಎಸ್.ಪಿ,  ವಿ.ಎಂ. ಜ್ಯೋತಿ ಅವರ ನೇತೃತ್ವವದಲ್ಲಿ ಕಾರ್ಯಚರ್ಣೆ ನಡೆಸಿ ನಗದು ವಶಪಡಿಸಿಕೊಂಡಿದ್ದಾರೆ.

ಇಲಾಖೆಯ ಉಪನೊಂದಣಿಧಿಕಾರಿ ಹಾಗೂ ಸಹಾಯಕ ಸಿಬ್ಬಂದಿಯವರು ಕೆಲವು ಮಧ್ಯವರ್ತಿಗಳನ್ನು ಇಟ್ಟುಕೊಂಡು ಸ್ವತ್ತನ್ನು ನೊಂದಣಿ ಮಾಡಿಸಲು ಕಾರ್ಯಾಲಯಕ್ಕೆ ಬರುವ ಸಾರ್ವಜನಿಕರಿಂದ ನೊಂದಣಿ ಮಾಡಿಸುವಾಗ ಯಾವುದಾದರೊಂದು ನೆಪ ಹೇಳಿ ಮರಳಿ ಕಳುಹಿಸುತ್ತಿದ್ದರು. ಅಲ್ಲಿರುವ ಮಧ್ಯವರ್ತಿಗಳು ಲಂಚವನ್ನು ಅಧಿಕಾರಿಗಳಿಗೆ ಕೊಟ್ಟು ಸಾರ್ವಜನಿಕ ಕೆಲಸ ಮಾಡಿಕೊಡುತ್ತೆವೆಂದು ಹೇಳಿ ಪ್ರತಿನಿತ್ಯ ಸಾರ್ವಜನಿಕರಿಂದ ಲಂಚವನ್ನು ವಸೂಲು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತ ಆಧಾರಿಸಿ, ಎಸಿಬಿ ಪೊಲೀಸರು ಉಪನೊಂದಣಿ ಮನೆ ಹಾಗೂ ಕಚೇರಿಯ ಮೇಲೆ  ಕಾರ್ಯಚರಣೆ ನಡೆಸಿ ನಡೆಸಿ ಅಕ್ರಮ ಹಣ ರೂ 18,860 ಗಳನ್ನು ವಶ ಪಡೆಸಿಕೊಳಲಾಗಿದೆ ಎಂದು ಎಸ್.ಪಿ ಜ್ಯೋತಿ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಬೀದರ ಠಾಣಾ ಲಂಚ ಪ್ರತಿಬಂಧಕ ಕಾಯಿದೆ 1988ರ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ಕರ್ತವ್ಯ ನಿರತ ನೊಂದಣಿ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪತ್ತೆಯಾದ ಒಟ್ಟು ಹಣ ರೂ 31, 920 ಗಳಲ್ಲಿ ನೊಂದಣಿ ರಶೀದಿ ಶುಲ್ಕ ರೂ 13.860 ಮತ್ತು ಹೆಚ್ಚುವರಿಯಾಗಿ ದೊರೆತ ಅಕ್ರಮ ಹಣ ರೂ 18.860 ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಾಗಿದ್ದು, ಈ ಕುರಿತು ನೊಂದಣಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವಶಪಡೆಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಕಾರ್ಯಚರಣೆಯಲ್ಲಿ ಎಸಿಬಿ ಈಶಾನ್ಯ ವಲಯ ಕಲಬುರಗಿರವರು ವಹಿಸಿದ್ದು, ಶ್ರೀ ಬಷೀರುದ್ದೀನ ಬಿ. ಪಟೇಲ ಡಿಎಸ್‌ಪಿ ಎಸಿಬಿ ಬೀದರ್ ಹಾಗೂ ಈಶಾನ್ಯ ವಲಯದ ಎಸಿಬಿ ತಂಡಗಳಿಂದ ಕಾರ್ಯಚರಣೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here