ಶಹಾಪುರ : ಮನೆಯ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಬ್ದುಲ್ ನಬಿ ಹೇಳಿದರು.
ತಾಲ್ಲೂಕಿನ ವನದುರ್ಗ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿರುವ ಸ್ವಚ್ಛ ಭಾರತ ಮೀಷನ್ ಅಡಿಯಲ್ಲಿ ಗಂಧಗಿ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬೀಮನಗೌಡ ಬಿರಾದಾರ್ ಮಾತನಾಡಿ ಸಾರ್ವಜನಿಕ ಸ್ಥಳ ಎಂದು ತಾತ್ಸಾರ ಮಾಡದೆ ಪ್ರತಿಯೊಬ್ಬರೂ ಅಲ್ಲಿಯೂ ಕೂಡ ಸ್ವಚ್ಛತೆಗೆ ಕಾಪಾಡಿಕೊಳ್ಳುವುದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಚ್ಚಾ ವಸ್ತುಗಳು ಬಿಸಾಡುವುದನ್ನು ನಿಲ್ಲಿಸಬೇಕು ಅವುಗಳನ್ನು ಡಸ್ಟಬಿನ್ ನಲ್ಲಿ ಹಾಕಬೇಕು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದರು.
ಪ್ರಾಥಮಿಕ ಕಿರಿಯ ಆರೋಗ್ಯ ಸಹಾಯಕ ಮಲ್ಲೇಶ ಕುರಕುಂದಿ ಮಾತನಾಡಿ ನೀರನ್ನು ಕಾಯಿಸಿ ಬೇಯಿಸಿ ಸೋಸಿ ಕುಡಿಯುವದರ ಜೊತೆಗೆ ಕುಟುಂಬಸ್ಥರು ಆರೋಗ್ಯದ ಕಡೆಗೆ ಗಮನ ಹರಿಸಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಬೇಕು ಎಂದು ನುಡಿದರು.
ಈ ಸಮಾರಂಭದ ವೇದಿಕೆ ಮೇಲೆ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹನುಮಂತ್ರಾಯ ಗೌಡ,ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮಚಂದ್ರಪ್ಪ ಕಾಶಿರಾಜ, ಎಸ್,ಬಿ.ಎಂ.ಸಂಯೋಜಕರಾದ ಶಿವಕುಮಾರ್, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಹಾಗೂ ಇತರರು ಉಪಸ್ಥಿತರಿದ್ದರು