ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಬಸವಾದಿ ಶರಣರ ಕಲಾಕೃತಿ ಪ್ರದರ್ಶನ

0
94

ಕಲಬುರಗಿ: ಚೈತನ್ಯಮಯಿ ಟ್ರಸ್ಟ (ರಿ) ಕಲಬುರಗಿ, ಚೈತನ್ಯಮಯಿ ಆರ್ಟ್ ಗ್ಯಾಲರಿಯ 16ನೇ ಕಲಾ ಮಹೋತ್ಸವ ನಿಮಿತ ದಿ. ಹಿರಿಯ ಚಿತ್ರಕಲಾವಿದ ಬಸವರಾಜ ಮುಗಳಿ ಅವರು ರಚಿಸಿದ ಬಸವಾದಿ ಶರಣರ ಕಾಯಕದ ಜೀವನದ ಕಲಾಕೃತಿಗಳ ಛಾಯಾಚಿತ್ರಿ ಪ್ರದರ್ಶನ ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಎರ್ಪಡಿಸಲಾಗಿದೆ.

ರವಿವಾರ 26 ರಂದು ಸಂಜೆ 5 ಗಂಟೆಗೆ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಅವರು 100 ಕಲಾಕೃತಿಗಳ ಪ್ರದರ್ಶ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಕಲಾಕೃತಿಗಳನ್ನು ಬಹಳ ಆಸಕ್ತಿಯಿಂದ ವೀಕ್ಷಿಸಿ ದಿ. ಬಸವರಾಜ ಮುಗಳಿಯವರ ಕಲಾ ಸಾಧನೆಯನ್ನು ಮೆಟ್ಟಿ ಸಂತೋಷ ವ್ಯಕ್ತಪಡಿಸಿದರು.

Contact Your\'s Advertisement; 9902492681

ದೃಶ್ಯ ಮಾಧ್ಯಮದಲ್ಲಿ ಶರಣರ ಕಾಯಕ ಜೀವನದ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಿಳಿಯುವಂತೆ ಚಿತ್ರಿಸಿರುವ ಮುಗಳಿಯವರ ಕಲಾ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು. ಸಮಾಜ, ಸರಕಾರ, ಇಂಥವರನ್ನು ಗುರುತಿಸಿ ಪ್ರೋತ್ಸಹಿಬೇಕೆಂದು ಅವರು ಒತ್ತಾಯಿಸಿದರು.

ಚಿತ್ರಕಲಾ ಬೆಳವಣಿಗೆಗೆ ವಿಶೇಷವಾಗಿ ಶರಣರ ಹಾಗೂ ವಚನಗಳಿಗೆ ಸಂಬಂಧಪಟ್ಟಂತೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಹಕರಿಸುತ್ತದೆ. ಎ.ಎಸ್. ಪಾಟೀಲರು ಶರಣ ಚಿತ್ರಕಲೆ ಮತ್ತು ವಚನಗಳ ಕುರಿತು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿರುವುದು ಹಾಗೂ ಶರಣ ಕುರಿತು ರಚಿಸಿದ ದಿ. ಬಸವರಾಜ ಮುಗಳಿಯವರ ಚಿತ್ರ ಕಲಾಕೃತಿಗಳ ಪ್ರದರ್ಶನ ಎರ್ಪಡಿಸಿ ಜನ ಸಾಮಾನ್ಯರಿಗೂ ತಲುಪವಂತೆ ಪ್ರಸಾರ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.

ಈ ಪ್ರದರ್ಶನದ ಸಮಾರಂಭಕ್ಕೆ ಬೀದರಿನ ಹಿರಿಯ ಯುವ ಕಲಾವಿದ ಮುಗಳಿಯವರ ಕುಟುಂಬದ ಸದಸ್ಯರು ಹಾಗೂ ಕಲಬುರಗಿಯ ಹಿರಿಯ ಯುವ ಕಲಾವಿದರು ಆಗಮಿಸಿದ್ದರು.

ಪ್ರದರ್ಶನ ಮೇ 27 ರಿಂದ ಜೂ 02 ವರೆಗೆ ಬೆಳಿಗ್ಗೆ 9 ರಿಂದ 12 ವರೆಗೆ ಮತ್ತು 5 ರಿಂದ 8 ವರೆಗೆ ಸಾರ್ವಜನಿಕರಿಗಾಗಿ ತೆರೆದಿಡಲಾಗುವುದೆಂದು ಸಂಚಾಲಕ ಡಾ. ಸುಜಾತಾ ಪಾಟೀಲ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here