ತ್ಯಾಗ-ಬಲಿದಾನವನ್ನು ದೇಶಕ್ಕೆ ಸಾರಿದ ಅಗ್ನಿಶಿಶು ಖುದಿರಾಮ್ ಬೋಸ್

0
28

ಶಹಾಬಾದ: ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನವನ್ನು ಬೆಳೆಸಿಕೊಂಡಿದ್ದ ಖುದಿರಾಮ್ ಬೋಸ್ ಬ್ರಿಟಿಷರನ್ನು ಭಾರತದಿಂದ ಹೊರಹಾಕಬೇಕೆಂಬ ಕನಸನ್ನು ಹೊತ್ತಿದ್ದರು.ಇವರ ತ್ಯಾಗ ನಮಗೆಲ್ಲರಿಗೂ ಪ್ರೇರಣೆಯಾಗಬೇಕೆಂದು ಎಂದು ಎಐಡಿವಾಯ್ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಹೇಳಿದರು.

ಅವರು ಬುಧವಾರ ಎಐಡಿವಾಯ್ಓ ಸಂಘಟನೆ ವತಿಯಿಂದ ಆಯೋಜಿಸಲಾದ ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ ರವರ 112ನೇ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ದೇಶ ಭಕ್ತಿ ಎಂದರೆ,ದೇಶದ ಜನರ ಮೇಲೆ ಹೊಂದುವ ಪ್ರೀತಿ ಎಂದು ಭಾವಿಸಿದ್ದ ಖುದಿರಾಮ, ಬ್ರಿಟಿಷರ ವಿರುದ್ಧ ರಾಜೀರಹಿತ ಹೋರಾಟ ನಡೆಸಿ, ಕೇವಲ 18 ನೇ ವಯಸ್ಸಿನಲ್ಲಿಯೇ ಗಲ್ಲು ಶಿಕ್ಷೆಗೆ ಬಲಿಯಾದರು.ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಪ್ರಥಮ ಬಾರಿಗೆ ಹುತಾತ್ಮರಾಗಿ ತ್ಯಾಗ-ಬಲಿದಾನವನ್ನು ದೇಶಕ್ಕೆ ಸಾರಿದ ಅಗ್ನಿಶಿಶು ಆಗಿದ್ದಾರೆ.ಇವರ ವಿಚಾರಧಾರೆ ಇಂದಿಗೂ ಸ್ಪೂರ್ತಿದಾಯಕವಾಗಿದ್ದು, ಯುವಕರು, ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಎಐಡಿವಾಯ್ಓ ಅಧ್ಯಕ್ಷ ಸಿದ್ದು ಚೌಧರಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿವಾಯ್ಓ ಕಾರ್ಯದರ್ಶಿ ಪ್ರವೀಣ್ ಬಣಮಿಕರ್ ವಹಿಸಿದ್ದರು. ಶಿವುಕುಮಾರ.ಇ.ಕೆ, ತಿಮ್ಮಾಯ್ಯ.ಬಿ.ಮಾನೆ, ನೀಲಕಂಠ.ಎಮ್.ಹುಲಿ,ರಘು ಪವಾರ್,ತಿರುಪತಿ, ಹಣಮಂತ, ಪ್ರಕಾಶ ಯಲಗೋಡಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here