ಕೊಪ್ಪಳ: ರಾಜ್ಯಾದ್ಯಂತ ಹಲವಾರು ಜಿಲ್ಲೆಯಲ್ಲಿ ಕಳ್ಳತನ ಮಾಡಿದ ಖದೀಮರನ್ನು ಕೊಪ್ಪಳ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮುಖೇಶ, ಜಶ್ಚಂತ ಸಿಂಹ, ಸಂದೀಪ ಸೋನಿ ಬಂಧಿತ ಆರೋಪಿಗಳು. ಮಧ್ಯಪ್ರದೇಶ ಮೂಲದ ನಿವಾಸಿಯಾಗಿದ ಇವರು ಅಂತರರಾಜ್ಯ ಕಳ್ಳರು ಎಂದು ಗುರುತಿಸಿಕೊಂಡಿದ್ದಾರೆ. ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿ, ಭಾಗಲಕೋಟೆ ಜಿಲ್ಲೆ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಯಲ್ಲಿ ಮನೆಗಳ ದರೋಡೆ ಮಾಡಿದ್ದ ಖದೀಮರು ಎನ್ನಲಾಗಿದ್ದು, ಕೊಪ್ಪಳದ ಗಂಗಾವತಿಯಲ್ಲಿನ ಪೋಲಿಸರ ಮನೆ ಸೇರಿದಂತೆ ಅಥಣಿ ನಾಯ್ಯಾಧೀಶರ ಮನೆ ಕಳುವು ಮಾಡಿದ್ದಾರೆಂದು ಕೊಪ್ಪಳ ಎಸ್ಪಿ ರೇಣುಕಾ ಸುಕುಮಾರ್ ಅವರು ತಿಳಿಸಿದರು.
ಬಂಧಿತ ಆರೋಪಿಗಳಿಂದ 140 ಗ್ರಾಂ ಬಂಗಾರ ವಶ, 390 ಗ್ರಾಂ ಬೆಳ್ಳಿ ,2 ಬೈಕ್ ಸೇರಿದಂತೆ ಒಟ್ಟು 10 ಲಕ್ಷ ಮೌಲ್ಯದ ಮುದ್ದೆ ಮಾಲನ್ನ ಜಪ್ತಿಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ತಿಳಿಸಿದರು.
ಆರೋಪಿಗಳು ಗಂಗಾವತಿ ನಗರ, ಗ್ರಾಮೀಣ ಭಾಗಗಳಾದ ಹೊಸಕೇರಾ, ಹಣವಾಳ, ಅಥಣಿ, ಜಮಖಂಡಿ ಸೇರಿದಂತೆ ಹಲವೆಡೆ ಸರಣಿ ಮನೆಗಳ್ಳತನ ಮಾಡಿದ್ದರು. ಇವರ ಪತ್ತೆಗೆ ಶ್ರಮಿಸಿದ ಪೊಲೀಸ್ ತನಿಖಾ ತಂಡದ ಕಾರ್ಯ ಶ್ಲಾಘಿಸಿ, ವಿಶೇಷ ಬಹುಮಾನ ಘೋಷಿಸಲಾಗಿದೆ ಅಂತ ಎಸ್ಪಿ ವಿವರಣೆ ನೀಡಿದರು.