ಸುರಪುರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ರೀತಿಯ ಹೋರಾಟದಿಂದಾಗಿ ನಮಗೆ ಸ್ವಾತಂತ್ರ್ಯದೊರೆತಿದೆ ನಮ್ಮ ರಾಷ್ಟಪಿತಾ ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಇನ್ನು ಅನೇಕ ಮಹಾನ್ ವ್ಯಕ್ತಿಗಳು ಹಾಕಿದ ಮಾರ್ಗದಲ್ಲಿ ನಾವುಗಳು ನಡೆದು ನಮ್ಮ ದೇಶವನ್ನು ಸುಭದ್ರವಾಗಿರಿಸೋಣ.
ನಗರದ ತಾಲೂಕು ಆಡಳಿತದ ವತಿಯಿಂದ ನಡೆದ ೭೪ ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಇಂದು ನಮ್ಮ ದೇಶ ಇಷ್ಟು ಸುಭದ್ರವಾಗಲು ಅಂದು ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಜನ ರಾಷ್ಟ್ರಪೇಮಿ ಮಹನೀಯರ ಬಲಿದಾನವಿದೆ ಅವರುಗಳ ನೆನಪಿಸಿಕೊಂಡು ನಾವು ಇಂದು ನಮ್ಮ ಸಮಾಜ ಮತ್ತು ದೇಶವನ್ನು ಕಟ್ಟಬೇಕಾಗಿದೆ ಎಂದು ತಹಸಿಲ್ದಾರ ನಿಂಗಣ್ಣ ಬಿರಾದರ್ ಹೇಳಿದರು.
ಸಧ್ಯ ನಮ್ಮ ದೇಶಕ್ಕೆ ಕಾಡುತ್ತಿರುವ ಕರೊನಾ ಮಹಾಮಾರಿಯಿಂದ ಪಾರಾಗಬೇಕಾಗಿದೆ ಇದಕ್ಕೆ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಕಡ್ಡಾಯವಾಗಿ ಮಾಸ್ಕ ಧರಸಬೇಕು ಮತ್ತು ಪರಸ್ಪರ ಅಂತರವನ್ನು ಕಾಯ್ದುಕೊಂಡು ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಸ್ ೨ ತಹಸಿಲ್ದಾರ ಸುಫಿಯಾ ಸುಲ್ತಾನ, ಕಂದಾಯ ನೀರಿಕ್ಷಕ ಗುರುಬಸ್ಸಪ್ಪ, ಅಶೋಕ ಸುರಪುರಕರ್, ಕೊಂಡಲ್ ನಾಯಕ, ಸೋಮನಾಥ ನಾಯಕ, ಸಂಗಮೇಶ ದೇಸಾಯಿ, ಪ್ರದೀಪ ನಾಲ್ವೆಡೆ, ಭಿಮು ಯಾದವ, ರವಿನಾಯಕ ಸೇರಿದಂತೆ ಎಲ್ಲಾ ಗ್ರಾಮ ಲೆಕ್ಕಿಗರು ಮತ್ತು ಸಿಬ್ಬಂದಿಗಳಿದ್ದರು.