ಕಲಬುರಗಿ; ಲೋಕ ರಕ್ಷಕ್ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳು” ಸಂಸ್ಥೆ ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆಯ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಚರಿತ್ರೆಯ ಪುಸ್ತಕವನ್ನು ಯುವಕರಿಗೆ ವಿತರಣೆ ಮಾಡಲಾಯಿತು.
ಲೋಕ ರಕ್ಷಕ್ ಕಚೇರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದೇಶ ಭಕ್ತಿ ಹಾಗೂ ಸ್ವಾತಂತ್ರ ಹೋರಾಟಗಾರರ ಬಗ್ಗೆ ಅರಿವು ಮೂಡಿಸಲಾಯಿತು.
ಅಧ್ಯಕ್ಷ ದಯಾನಂದ ಯಂಕಂಚಿ, ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ರವಿ ದೇಗಾಂವ ಇತರರು ಮಾತನಾಡಿ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನ್ನಮ್ಮಳ ಆಸ್ಥಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಮನೆತನದವರಾಗಿದ್ದರು ರಾಯಣ್ಣರು, ಅಷ್ಟೇ ಅಲ್ಲದೆ ಇವರು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದರು. ಬ್ರಿಟಿಷರ ವಿರುದ್ದದ ಯುದ್ಧದಲ್ಲಿ ಚೆನ್ನಮ್ಮ ಹಾಗೂ ರಾಯಣ್ಣ ಇಬ್ಬರೂ ಸೆರೆಯಾಳಾದರು. ಸಂಗೊಳ್ಳಿ ರಾಯಣ್ಣ ೧೫ ಆಗಷ್ಟ್ ೧೭೯೮ ರಂದು ಜನಿಸಿದರು. ಅದು ಮುಂದೆ ದೇಶಕ್ಕೆ ಸ್ವಾತಂತ್ರ ಸಿಕ್ಕ ದಿನವಾದರೆ ಮುಂದೆ ನಂದಗಡದಲ್ಲಿ ೨೬ ಜನೆವರಿ ೧೮೩೧ ರಂದು ಗಲ್ಲಿಗೇರಿಸಿದರು. ಅದು ಜನೆವರಿ ೨೬ ಭಾರತವು ಗಣರಾಜ್ಯವೆಂದು ಘೋಷಿಸಿದ ದಿನಾಂಕವಾಗಿದೆ ಎಂದರು.
ಈ ಸಂದರ್ಭದಲ್ಲಿ ವೀರಣ್ಣ ಕಣಮುಸ, ಸರ್ವೇಶ ವಠಾರ, ನಾಗರಾಜ ಮೇಕರ್, ಮಹೇಶ ಗೊಬ್ಬುರ, ಸಚಿನ್ ಎಸ್ ಕೆ, ಓಂಕಾರ ಪಾಟೀಲ್, ರಾಹುಲ ಕಲಶೆಟ್ಟಿ, ಮಹಿಳಾ ಅಧ್ಯಕ್ಷ ಮಂಜುಳಾ ಪಾಟೀಲ್, ಕವಿತಾ ದೇಗಾಂವ ಹಾಗೂ ಸದಸ್ಯರು ಉಪಸ್ಥಿತರಿದ್ದರು.