ಶಹಾಬಾದ: ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಪತ್ರಕರ್ತರ ಮತ್ತು ಪೊಲೀಸರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಸೋಮವಾರ ಶಹಾಬಾದ ಭೋವಿ ವಡ್ಡರ ಸಮಾಜ ಸೇವಾ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ
ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೋವಿ ವಡ್ಡರ ಸಮಾಜ ಸೇವಾ ಸಂಘದ ತಾಲೂಕಾಧ್ಯಕ್ಷ ಭೀಮರಾವ ಸಾಳುಂಕೆ, ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾವಿರಾರು ದುಷ್ಕರ್ಮಿಗಳು ಅಕ್ರಮಕೂಟ ರಚಿಸಿಕೊಂಡು ಅಪರಾಧಿಕ ಪೂರ್ವಯೋಜಿತ ಒಳಸಂಚು ನಡೆಸಿ ಏಕಾಏಕಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಕುಟುಂಬದವರ ಮೇಲೆ, ಪತ್ರಕರ್ತರ ಮತ್ತು ಪೊಲೀಸರ ಮೇಲೆ ಮಾರಕಾಸ್ತ್ರ, ಪೆಟ್ರೋಲ್ ಬಾಂಬ್ ಜತೆ ದಾಳಿ ಮಾಡಿ ಅವರ ಮನೆಯ ಪಿಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಬೆಲೆ ಬಾಳುವ ವಾಹನಗಳಿಗೆ ಬೆಂಕಿ ಹಚ್ಚಿ ನಗನಾಣ್ಯಗಳನ್ನು ದೋಚಿದ್ದಾರೆ.ಇದು ದುರುದ್ದೇಶದಿಂದ ಮಾಡಿದ ಕಾನೂನು ಬಾಹಿರ ಕೃತ್ಯ.ಕೂಡಲೇ ಸರಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಆಗಿರುವ ನಷ್ಟವನ್ನು ಭರಿಸಿಕೊಳ್ಳಬೇಕು.ಹಲ್ಲೆಗೊಳಗಾದವರಿಗೆ ಸೂಕ್ತ ರಕ್ಷಣೆ ನೀಡಿ, ಮುಂದಾಗದಂತೆ ನಿಗಾವಹಿಸಬೇಕೆಂದು ಆಗ್ರಹಿಸಿದರು.ಉಪಾಧ್ಯಕ್ಷ ಅನೀಲ ಬೋರಗಾಂವಕರ್, ಅಂಬು ಕುನ್ನೂರಕರ್,ರಾಮು ಕುಸಾಳೆ,ಸಂಜಯ ವಿಠಕರ್,ಗಿರಿರಾಜ ಪವಾರ,ರಾಕೇಶ ಪವಾರ,ಬಾಲಗೊಂಡ ಕುಸಾಳೆ,ಜೈಕುಮಾರ ಚೌಧರಿ,ಶ್ರಣಿವಾಸ ನೈದಲಗಿ,ಹಣಮಂತ ಚೌಧರಿ, ದೀಪಕ ಚೌಧರಿ,ಯಲ್ಲಪ್ಪ ದಂಡಗುಲಕರ್ ಇತರರು ಇದ್ದರು.