ಕಲಬುರಗಿ: ವಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್-2020ರ ಶೈಕ್ಷಣಿಕ ಸಾಲಿಗೆ ಎನ್.ಸಿ.ವಿ.ಟಿ. ಸಂಯೋಜಿತ ಸಿಟಿಎಸ್ ಯೋಜನೆಯಡಿ ಫಿಟ್ಟರ್ ಹಾಗೂ ವೆಲ್ಡರ್ ವೃತ್ತಿಗಳಿಗೆ (ಮೆರಿಟ್–ಕಂ-ರಿಸರ್ವೇಶನ್ ಆಧಾರಿತ) ಆನ್‍ಲೈನ್ ಮೂಲಕ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಎರಡು ವರ್ಷದ ಫಿಟ್ಟರ್ ವೃತ್ತಿ-16 ಸೀಟುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ನಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಒಂದು ವರ್ಷದ ವೆಲ್ಡರ್ ವೃತ್ತಿ-32 ಸೀಟುಗಳಿಗೆ ಪ್ರವೇಶ ಪಡೆಯಲು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ 10ನೇ ತರಗತಿ ಅನುತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳು 2020ರ ಆಗಸ್ಟ್ 17ಕ್ಕೆ 14 ವರ್ಷ ಮೇಲ್ಪಟ್ಟ ವಯೋಮಿತಿ ಹೊಂದಿರಬೇಕು.
ವಿದ್ಯಾರ್ಥಿಗಳು ರಾಜ್ಯದ ಯಾವುದೇ ಭಾಗದಿಂದ ಇಲಾಖೆಯ www.emptrg.kar.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ 2020ರ ಆಗಸ್ಟ್ 17 ರಿಂದ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ವಾಡಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರ ಮೊಬೈಲ್ ಸಂಖ್ಯೆ 8088336114, 9900289127 ಹಾಗೂ ಸಿಬ್ಬಂದಿಗಳ ಮೊಬೈಲ್ ಸಂಖ್ಯೆ 7892547577, 8660432738, 9916538524 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ವಸತಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನ
ಕಲಬುರಗಿ: ಪ್ರಸಕ್ತ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ವಸತಿ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧ, ಸಿಖ್, ಪಾರ್ಸಿ ಹಾಗೂ ಇತರೆ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ತಾಪೂರ ಕೋರ್ಟ್ ಎದುರುಗಡೆಯಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ (ವಾಣಿಜ್ಯ ಮತ್ತು ವಿಜ್ಞಾನ ಕೋರ್ಸ್) ಹಾಗೂ ಕಲಬುರಗಿಯ ಎಂ.ಎಸ್.ಕೆ.ಮಿಲ್ ರಸ್ತೆ ಮದಿನಾ ಕಾಲೋನಿ ಮಿರ್ಚಿ ಗೋದಾಮ ಹತ್ತಿರದ ಮೊರಾರ್ಜಿ ದೇಸಾಯಿ ಪದವಿ ಪೂರ್ವ (ವಿಜ್ಞಾನ ಕೋರ್ಸ್) ವಸತಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2020ರ ಆಗಸ್ಟ್ 22 ಕೊನೆಯ ದಿನವಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಚಿತ್ತಾಪುರ ವಸತಿ ಕಾಲೇಜಿಗೆ ಸಂಬಂಧಿಸಿದಂತೆ ಮೊಬೈಲ್ ಸಂಖ್ಯೆ 7975446392 ಹಾಗೂ ಕಲಬುರಗಿ ವಸತಿ ಕಾಲೇಜಿಗೆ ಸಂಬಂಧಿಸಿದಂತೆ ಮೊಬೈಲ್ ಸಂಖ್ಯೆ 7760260131/ 9449785047 ಗಳಿಗೆ ಸಂಪರ್ಕಿಸಬೇಕು. ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿ.ಡಿ.ಎ. ಕಚೇರಿ, ಮೊದಲನೇ ಮಹಡಿ, ಸ್ಟೇಷನ ರಸ್ತೆ, ಕಲಬುರಗಿ ಕಚೇರಿಯನ್ನು ದೂರವಾಣಿ ಸಂಖ್ಯೆ.08472-247260ಗೆ ಸಂಪರ್ಕಿಸಲು ಕೋರಲಾಗಿದೆ.
ಅರೆ ಕಾಲಿಕ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ
ಕಲಬುರಗಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅರೆ ಕಾಲಿಕ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಅಧಿಕಾರೇತರ ಅಭ್ಯರ್ಥಿಗಳು ಹಾಗೂ ಎಂ.ಎಸ್.ಡಬ್ಲ್ಯೂ/ಕಾನೂನು ಪದವಿ ಅಥವಾ ಇತರೇ ಯಾವುದೇ ಪದವಿ ವಿದ್ಯಾರ್ಥಿಗಳು ಅಥವಾ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ನ್ಯಾಯಾಲಯದ https://districts.ecourts.gov.in/kalaburagi ವೆಬ್‍ಸೈಟ್‍ದಲ್ಲಿ ಲಭ್ಯವಿರುವ ನಮೂನೆಯನ್ನು ಪಡೆದುಕೊಂಡು ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಗಳನ್ನು (ಪಿ.ಡಿ.ಎಫ್.ನಲ್ಲಿ (sಛಿಚಿಟಿಟಿeಜ ಠಿಜಜಿ ಜಿoಡಿmಚಿಣ) ಒಂದು ಫೈಲ್ ಇರುವಂತೆ 2020ರ ಆಗಸ್ಟ್ 25 ರೊಳಗಾಗಿ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯ ಇ-ಮೇಲ್ dlsaklb8@gmail.com ವಿಳಾಸಕ್ಕೆ ಕಳುಹಿಸಬೇಕೆಂದು ಅವರು ತಿಳಿಸಿದ್ದಾರೆ.