ಶಹಾಬಾದ: ನಗರದ ಸೋಮವಾರ ಜಗದಂಬಾ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಚತುರ್ಥಿ ನಿಮಿತ್ತ ಆಯೋಜಿಸಲಾದ ಶಾಂತಿಸಭೆಯಲ್ಲಿ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿಯನ್ನು ಆಹ್ವಾನ ನೀಡದಕ್ಕೆ ಜೆಡಿಎಸ್ ಮುಖಂಡ ಮಹ್ಮದ್ ಅಜರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಯಾವುದೇ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಎಲ್ಲಾ ಸಮುದಾಯದವರನ್ನು ಕರೆದು ಶಾಂತಿ ಸಭೆಯನ್ನು ಮಾಡಲಾಗುತ್ತಿತ್ತು.ಆದರೆ ಕಳೆದ ಆರು ತಿಂಗಳಿನಿಂದ ಆಯಾ ಧರ್ಮಿಯರನ್ನೇ ಕರೆದು ಶಾಂತಿ ಸಭೆಯನ್ನು ಆಚರಿಸಲಾಗುತ್ತಿದೆ.ಈ ಹಿಂದೆ ಈ ರೀತಿ ಎಂದು ನಡೆದಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಂತಿ ಸಭೆ ಎಂಬುದು ಎಲ್ಲಾ ಧರ್ಮಿಯರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿ ಎಲ್ಲಾ ಸಮುದಾಯವರಲ್ಲಿ ಸೌಹಾರ್ದತೆ ಮೂಡಿಸುವ ಕೆಲಸವಾಗಬೇಕು.ಆದರೆ ಈ ರೀತಿ ನಡೆಯುತ್ತಿರುವುದು ಸರಿಯಲ್ಲ.ಹಬ್ಬಗಳು ಶಾಂತಿ,ಸೌಹಾರ್ದತೆ, ಸಾಮರಸ್ಯಗಳು ಉಂಟಾಗುವಂತಾಗಬೇಕು.ಆದರೆ ಸೋಮವಾರ ನಡೆದಂತ ಶಾಂತಿ ಸಭೆಯಲ್ಲಿ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿಯನ್ನು ಆಹ್ವಾನ ನೀಡದಿರುವುದಕ್ಕೆ ಕಾರಣವೇನು ಎಂದು ತಿಳಿದಿಲ್ಲ. ಕೂಡಲೇ ಮೇಲಾಧಿಕಾರಿಗಳು ಈ ಕುರಿತು ಗಮನಹರಿಸಬೇಕೆಂದು ಆಗ್ರಹಿಸಿದರು.