ಕಲಬುರಗಿ: ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನಾಳೆಯಿಂದ ಶಾಲಾ ಪ್ರಾ ರಂಭೋತ್ಸವ ನಡೆಯಬೇಕಿತ್ತು.
ಆದರೆ ಬಿಸಿಲು ಹೆಚ್ಚಾಗಿರುವ ಕಲಬುರಗಿ ಜಿಲ್ಲೆಗಳಲ್ಲಿ ಜೂ. 14ರಿಂದ ಶಾಲೆಗಳು ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ (ಪ್ರಾಥಮಿಕ ಶಿಕ್ಷಣ )ನಿರ್ದೇಶಕರು ಕಲಬುರಗಿ- ಯಾದಗಿರಿ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿ ಅದೇಶ ನೀಡಿದ್ದಾರೆ.
ಈ ಬಾರಿ 40 ಡಿಗ್ರಿ ಸೆಲ್ಸಿಯಸ್ ಗಿಂತ ಪ್ರಖರ ಬಿಸಿಲಿತ್ತು. ಇಂದು 44.7 ಡಿಗ್ರಿ ಸೆಲ್ಸಿಯಸ್ ಬಿಸಿಲಿತ್ತು.
ಈ ಹಿನ್ನೆಲೆಯಲ್ಲಿ ಶಾಲೆಗಳು ಜೂನ್ 14ರಿಂದ ಶಾಲೆಗಳು ಪ್ರಾರಂಭವಾಗಲಿವೆ ಎಂದು ಸರ್ಕಾರ ಆದೇಶ ಹೊರಡಿಸಿದೆ.