ಬಿಸಿ ಬಿಸಿ ಸುದ್ದಿ

ನಗರದ ಐತಿಹಾಸಿಕ ಸ್ಥಳಗಳನ್ನು ಸುವ್ಯವಸ್ಥೆಗೊಳಿಸುವಂತೆ ಆಗ್ರಹ

ಸುರಪುರ: ಸರ್ದಾರ ವಲ್ಲಭಾಯಿ ಪಟೇಲರ ಮೂರ್ತಿಯನ್ನು ದೇಶದಲ್ಲೆ ಪ್ರಥಮ ಬಾರಿಗೆ ಸ್ಥಾಪನೆಗೊಂಡಿದ್ದು ನಗರದಲ್ಲಿ ಇತಂಹ ಐತಿಹಾಸಿಕ ಮೂತಿ ಇಂದು ಬಿಡಾಡಿದನಗಳ ಹಾಗೂ ತ್ಯಾಜ್ಯವಸ್ತುಗಳನ್ನೇಸೆಯುವ ತಾಣವಾಗಿರುವುದು ದುರಾದೃಷ್ಟಕರವಾಗಿದೆ ಎಂದು ಸುರಪುರ ಐತಿಹಾಸಿಕ ಸ್ಥಳಗಳ ಪುನರ್ ನಿರ್ಮಾಣ ಹೋರಾಟಗಾರ ಅಧ್ಯಕ್ಷ ರಾಜಾ ಪಿಡ್ಡನಾಯಕ ಬೇಸರ ವ್ಯಕ್ತ ಪಡಿಸಿದರು.

ನಗರದ ನಗರಸಭೆ ಕಚೇರಿ ಎದುರುಗಡೆ ಹಮ್ಮಿಕೊಂಡಿದ್ದ ಪ್ರತಿಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಸುರಪುರ ನಗರವು ಒಂದು ಐತಿಹಾಸಿಕ ತಾಣವಾಗಿದೆ ಇಲ್ಲಿಯ ಸ್ಮಾರಕಗಳಿಗೆ ರಕ್ಷಣೆ ಇಲ್ಲದೆ ಸೂರಗುತ್ತಿವೆ ಸರ್ದಾರ ವಲ್ಲಭಾಯಿ ಪಟೇಲರ ಕಟ್ಟೆ ಹಾಗೂ ಟೈಲರ‍್ಸ ಮಂಜಿಲ, ಹಳೆದರಬಾರ, ೧೮೫೭ ರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮಡಿದ ವೀರ ಯೋಧ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ನೆನಪಿಗಾಗಿ ನಿರ್ಮಿಸಿದ ಅಶೋಕ ಸ್ಥಂಬದ ಸ್ಮಾರಕಗಳು ಕುಡಕರಿಗಾಗಿ ನಿರ್ಮಾಣವಾದಂತಾಗಿದೆ ಸಂಜೆಯಾದರೆ ಸಾಕು ಕುಡಕರು ಪುಂಡಪೂಕರಿಗಳು ದಾಂಧಲೆಯ ಬೀಡಾಗಿವೆ ಕೊಡಲೆ ಸರಕಾರ ಹಾಗೂ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಈಗಲಾದರು ಸ್ಮಾರಕಗಳನ್ನು ರಕ್ಷಿಸಿ ನಗರವನ್ನು ಪ್ರಕ್ಷಣೀಯ ಸ್ಥಳವನ್ನಾಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಪತ್ರವನ್ನು ನಗರಸಭೆ ಪೌರಾಯುಕ್ತ ಏಜಾಜ ಹುಸೇನ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ, ತಿಪ್ಪಣ ಪಾಟೀಲ, ಗುರುನಾಥ ರಡ್ಡಿ, ಶಾಂತು ತಳವಾರಗೇರಾ, ವೆಂಕಟೇಶನಾಯಕ ಜಲ್ಲಿಪಲ್ಲಿ ಸೇರಿದಂತೆ ಇನ್ನಿತರರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago