ಬಿಸಿ ಬಿಸಿ ಸುದ್ದಿ

ಇಟ್ಟೆಯ ಹಣ್ಣ ತಿಂದರೆ, ವಿಶ್ವೇಶ್ವರ ಭಟ್ಟರು?

ಇಟ್ಟೆಯ ಹಣ ನರಿ ತಿಂದು
ಸೃಷ್ಟಿ ತಿರುಗಿತ್ತೆಂಬಂತೆ ಮಟ್ಟೆಯನಿಟ್ಟ
ದ್ವಿಜರ ಮಾತದೇಕೆ ಹಗಲು ಗಾಣದ ಗೂಗೆ
ಇರಳಾಯಿತ್ತೆಂದಡೆ ಇರುಳಪ್ಪುದೆ ಮರುಳೆ ?

ಎಂಬ ಬಸವಣ್ಣನವರ ವಚನದಂತೆ ಸನ್ಮಾನ್ಯ ಶ್ರೀ ವಿಶ್ವೇಶ್ವರ ಭಟ್ಟರು ತಮ್ಮ ಬುಡದಲ್ಲಿ ಬೆಂಕಿ ಬಿದ್ದ ಮಾತ್ರಕ್ಕೆ ಇಡೀ ದೇಶಕ್ಕೆ ದೇಶವೇ ಕಂಗಾಲಾಗಿದೆ ಎಂಬಂತೆ ಒಂದೆ ಸಮ ಚೀರಾಡುತ್ತಿದ್ದಾರೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ಮಟ್ಟಸ ಮಾಡಬೇಕಾದ ಬರಹಗಾರ ತನ್ನ ಸ್ವಾರ್ಥ ಲಾಲಸೆಗೆ ಒಳಗಾದಾಗ, ಅಥವಾ ತನ್ನ ಮನಸ್ಸಿನ ವಿಕೃತಿಯನ್ನು ಬರವಣಿಗೆಯಲ್ಲಿ ಹೊರ ಹಾಕಿದಾಗ ಆ ವ್ಯಕ್ತಿ ಹಲವರ ಉಪೇಕ್ಷೆಗೆ ಇಡಾಗುತ್ತಾನೆ. ಅಥವಾ ಬಹುಜನರ ಲೇವಡಿಗೂ ಗುರಿಯಾಗುತ್ತಾನೆ. ಭಟ್ಟರು ಇಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಒಂದೆ ಸಮ ಹೆಟ್ಟಿಸಿಕೊಳ್ಳುತ್ತಿದ್ದಾರೆ. ಲೇವಡಿ, ತಮಾಷೆಗಳಿಂದ ಅವರನ್ನು ಮೂದಲಿಸುತ್ತಿದ್ದಾರೆ.

ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆ ಹಾಗೂ ತ್ರೆöÊಮಾಸಿಕ ಪತ್ರಿಕೆಗಳ ವರದಿ/ಲೇಖನಗಳು ಭಿನ್ನ ವಿಭಿನ್ನ. ಇದು ಪತ್ರಿಕೋದ್ಯಮದ ಆರಂಭದ ವಿದ್ಯಾರ್ಥಿಯೂ ಹೇಳಬಲ್ಲ. ದಿನ ಪತ್ರಿಕೆಗಳಲ್ಲಿ ಬರೀ ಸುದ್ದಿ ಮಾತ್ರ ಪ್ರಕಟಿಸಲ್ಪಡುತ್ತದೆ. ಆ ಸುದ್ದಿಯ ಮೂಲವನ್ನು ಹೇಳಲು ಅದು ತೊಡಗುವುದಿಲ್ಲ. ಆರೋಪಿಸಿದರು. ಹೇಳಿದರು. ಅಭಿಪ್ರಾಯ ಪಟ್ಟರು. ಆಕ್ರೋಶ ವ್ಯಕ್ತಪಡಿಸಿದರು ಎಂದು ಮಾತ್ರ ಹೇಳಿ ಕೈ ತೊಳಕೊಳ್ಳುತ್ತದೆ.

‘ವಾರ ಪತ್ರಿಕೆ’ ದಿನ ಪತ್ರಿಕೆಯಂತೆ ಅಲ್ಲ. ಅದು ಸುದ್ದಿಯ ಹಿಂದಿನ ಸುದ್ದಿಯನ್ನೂ ಬಗೆದು ನೋಡುತ್ತದೆ. ಯಾರೋ ಆರೋಪಿಸಿದ ಮಾತು ಸತ್ಯ- ಅಸತ್ಯವೆ ಎಂದು ತೂಗಿ ನೋಡಿ ಖಚಿತ ನಿರ್ಣಯಕ್ಕೆ ಬರುತ್ತದೆ. ಅಲ್ಲೂ ಕೆಲವು ಸಲ ಊಹಾಪೋಹಗಳು ಹರಿದಾಡುತ್ತವೆ ಎಂದು ಪತ್ರಕರ್ತ ತನ್ನ ಗ್ರಹಿಕೆಗೆ ದಕ್ಕಿದಷ್ಟನ್ನು ಹೇಳುತ್ತಾನೆ. ಯಾವಾಗ ಯಾವುದೆ ಘಟನೆಯ ಕುರಿತು ದಾಖಲೆಗಳು ಲಭ್ಯವಾಗುತ್ತವೋ ಆಗವು ತನಿಖಾ ವರದಿಗಳಾಗುತ್ತವೆ.

ದಿನ ಪತ್ರಿಕೆಗಳು ಬಹುತೇಕವಾಗಿ ತನಿಖಾ ವರದಿಗಳಿಗೆ ಜಾಸ್ತಿ ಆಸ್ಪದ ನೀಡುವುದಿಲ್ಲ. ತಾವು ಕೊಡುವ ವರದಿಯಲ್ಲಂತೂ ತನಿಖೆ ಮಾಡಿದಂತೆ ಬರೆಯುವುದೆ ಇಲ್ಲ. ಆದರೆ ವಿಶ್ವೇಶ್ವರ ಭಟ್ಟರಿಗೆ ವಿಶೇಷವಾದ ಬರವಣಿಗೆ ಸಿದ್ದಿಸಿದೆ. ಕಂಡದ್ದನ್ನು ಕಂಡಂತೆ ಅಲ್ಲ, ಕಾಣದ್ದನ್ನು ಕಂಡಂತೆ ಬರೆದು ಸಮಾಜದಲ್ಲಿ ಗೊಂದಲವನ್ನು ಉಂಟು ಮಾಡಬಲ್ಲ ಪ್ರವೀಣರು. ಹಿಂದೊಮ್ಮೆ ಡಾ.ಎಂ.ಎಂ. ಕಲಬುರ್ಗಿಯವರು ಬರೆದಿಲ್ಲದ ‘ದೇವರ ಮೂರ್ತಿಯ ಮೇಲೆ ಮೂತ್ರ ಮಾಡಬಹುದಂತೆ !?’ ಎಂಬ ತಲೆ ಬರಹ ಪ್ರಕಟಿಸಿ, ಅವರ ಕೊನೆಗೆ ಅಪರೋಕ್ಷವಾಗಿ ಕಾರಣರಾದರು.
ತಮಗೆ ಆಗದವರು ಅಥವಾ ತಮ್ಮ ಸಿದ್ದಾಂತ ನಿಲವುಗಳನ್ನು ಒಪ್ಪದಿರುವ ವ್ಯಕ್ತಿ , ಪಕ್ಷ ಯಾರೆ ಇದ್ದರೂ ಅವರನ್ನು ವಿಶ್ವೇಶ್ವರಭಟ್ಟರು ತಮ್ಮ ಬರವಣಿಗೆಯ ಮೂಲಕ ಗದುಮದೆ ನಿದ್ದೆಯೆ ಬರುವುದಿಲ್ಲ. ಪೆನ್ನಿನ ಮೂಲಕ ಯರ‍್ಯಾರ ಮುಖಕ್ಕೆ ಎಷ್ಟೆÃಷ್ಟು ಮಸಿ ಚೆಲ್ಲಬೇಕು ! ಅಷ್ಟನ್ನು ಚೆಲ್ಲಿಯೇ ಮುಂದೆ ಹೋಗುತ್ತಾರೆ. ಆರೋಗ್ಯವಂತ ಪತ್ರಕರ್ತ ಈ ಸಣ್ಣತನವನ್ನು ಎಂದೂ ಪ್ರದರ್ಶಿಸುವುದಿಲ್ಲ.

ಪಿ.ಲಂಕೇಶ್ ರು ಸಹ ಲಂಕೇಶ ಪತ್ರಿಕೆಯ ಮೂಲಕ ರಾಜ್ಯದ ದೇಶದ ಘಟಾನುಘಟಿ ರಾಜಕೀಯ ನಾಯಕರ ಮೇಲೆ ಏರಿ ತೂರಿ ಅಲುಗಾಡಿಸಿ ಹಲವಾರು ವರದಿಗಳನ್ನು ಪ್ರಕಟಿಸಿದ್ದಾರೆ. ಬಂ, ಗುಂ ಎಂದು ತದುಕಿದ್ದಾರೆ. ಆದರೆ ಅವರೆಂದೂ ದ್ವೆÃಷದ ಬರವಣಿಗೆಯನ್ನು ಮಾಡಿದವರಲ್ಲ. ಅಥವಾ ಯಾರನ್ನೋ ಗುರಿಯಾಗಿಸಿಕೊಂಡು ಅವರನ್ನು ತಮ್ಮ ಕಾಲ ಕೆಳಗೆ ಹಾಕಿ ಒಸಗಿದವರಲ್ಲ. ಅವರ ಟೀಕೆ ಟಿಪ್ಪಣೆಗಳು ಏನಿದ್ದರೂ ಅವು ಗುಣಕ್ಕೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ ಎಂದು ಇರುತ್ತಿದ್ದವು. ಹೀಗಾಗಿಯೇ ಅವು ಅತ್ಯಂತ ಪರಿಣಾಮಕಾರಿ ಬರವಣಿಗೆಯಾಗಿದ್ದವು. ಜಡಗಟ್ಟಿ ಹೋಗಿದ್ದ ಕಾಂಗೈಗಳ ಅಟಾಟೋಪಗಳು, ಭ್ರಷ್ಟ ವಹಿವಾಟುಗಳು, ಹೆಗಡೆಯ ರೇವಜಿತು ಬಾಟ್ಲಿಂಗ್ ಹಗರಣ ಮುಂತಾದವುಗಳ ಮೂಲಕ ತದುಕಿದಾಗ ಪಕ್ಷವೇ ಪತರಗುಟ್ಟಿ ಹೋದದ್ದು ಸುಳ್ಳಲ್ಲ.

ಮೊನ್ನೆ ಮೊನ್ನೆ ಮುಖ್ಯ ಮಂತ್ರಿ ಕುಮಾರ ಸ್ವಾಮಿಯ ಮಗ ನಿಖಿಲ ಕುಮಾರ ಸ್ವಾಮಿ ಆಡದೆ ಇರುವ ಮಾತನ್ನು ಆಡಿದಂತೆ ದಿನ ಪತ್ರಿಕೆಯಲ್ಲಿ ಬರೆಯುವ ಮೂಲಕ ತಮ್ಮ ಸಣ್ಣತನವನ್ನು ಭಟ್ಟರು ಪ್ರದರ್ಶಿಸಿದ್ದಾರೆ. ಬರವಣಿಗೆಗೆ ಯಾವುದಾದರೂ ಮಿಣಿ ಹರಿಯುತ್ತದೆ ಎಂದ ಮಾತ್ರಕ್ಕೆ ಸುಖಾ ಸುಮ್ಮನೆ ಯಾವುದ್ಯಾವುದಕ್ಕೋ ತಗುಲಿಸಿ ಖುಷಿ ಪಡಬೇಕೆಂದು ಬಯಸುವುದು ಧೂರ್ತತನ ಅಥವಾ ವಿಕೃತಿಯ ಪರಮಾವಧಿಯಲ್ಲವೆ ?

ಪತ್ರಕರ್ತನಾದವನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನೂ ಪರಿಶೀಲಿಸುವ ಹದ್ದಿನ ಕಣ್ಣುಳ್ಳವ. ಅಂದ ಮಾತ್ರಕ್ಕೆ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂದು ಸುಮ್ಮ ಸುಮ್ಮನೆ ನಡೆಯದೆ ಇರುವ ಸಂಗತಿಗಳು ನಡೆದಂತೆ ಚಿತ್ರಿಸಬಹುದೆ ? ಊಹೆಗಳ ಮೇಲೆ ದಿನ ಪತ್ರಿಕೆಯ ಸುದ್ದಿಗಳು ಬರೆದರೆ ಇನ್ನೆÃನಾಗಬೇಡ. ಯಾವುದೊ ಕಾರಣಕ್ಕೆ ಆತ್ಮ ಹತ್ಯೆ ಮಾಡಿಕೊಂಡ ಯುವಕರನ್ನು ಮುಸ್ಲಿಂರೆ ಕೊಂದರು ಎಂದು ಬರೆಯುವುದು, ಅದನ್ನು ಸಮರ್ಥಿಸುವುದು, ಆ ಮೂಲಕ ಹೆಣದ ರಾಜಕೀಯ ಮಾಡುವುದು ಎಷ್ಟು ಸರಿ ? ಹೇಳಿ ಕೇಳಿ ಹೆಣದ ರಾಜಕೀಯ ಮಾಡಲು ತಯಾರಾಗಿರುವ ಪಕ್ಷವೊಂದಕ್ಕೆ ಆಹಾರ ಒದಗಿಸಿ ಸಮಾಜದಲ್ಲಿ ಇಲ್ಲದ ಬೆಂಕಿಯನ್ನು ಹೊತ್ತಿಸಿ ಆ ಬೆಂಕಿಯ ಜ್ವಾಲೆಯಲ್ಲಿ ಮೈಕಾಯಿಸಿಕೊಳ್ಳುವ, ತಮ್ಮ ತೀಟೆ ತೀರಿಸಿಕೊಳ್ಳುವ ಬರವಣಿಗೆ ಸರಿಯೆ ?

ಸೋಲು ಗೆಲುವುಗಳು ಯಾವುದೆ ವ್ಯಕ್ತಿಗೆ ಜೀವದಲ್ಲಿ ಬರುವಂಥವುಗಳೆ. ಯಾವುದೆ ವ್ಯಕ್ತಿ ಸೋತಾಗ ಆತ ಆತ್ಮಾವಲೋಕನ ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬರವಣಿಗೆಯಾದರೆ ಅದಕ್ಕೊಂದು ಸಾರ್ಥಕತೆ ಬರುತ್ತದೆ. ಅದೆಲ್ಲ ಬಿಟ್ಟು ನಿಖಿಲ ಕುಮಾರ ಸ್ವಾಮಿ ಸೋತ ಸಂದರ್ಭವನ್ನು ಉಪಯೋಗಿಸಿಕೊಂಡು ತಂದೆ, ತಾತನನ್ನು ಕುಡಿದ ಮತ್ತಿನಲ್ಲಿ ಹೀಯಾಳಿಸಿದ ಎಂದು ಹೂಬಾ ಹೂಬಾ ನೋಡಿದಂತೆ ಬರೆಯುವುದು ನಿಜಕ್ಕೂ ಅಪಾಯಕಾರಿಯಾದ ಸಂಗತಿ.

ರಾಜಕಾರಣಿ, ಅಧಿಕಾರಿಗಳು ಪ್ರಶ್ನಾತೀತರಲ್ಲ, ಹಾಗೆಯೇ ಪತ್ರಕರ್ತರು ಸಹ ಎಂಬುದನ್ನು ವಿಶ್ವೆÃಶ್ವರ ಭಟ್ಟರು ಮರೆಯಬಾರದು. ತಮ್ಮ ಮೂಗಿನ ನೇರಕ್ಕೆ ಬರೆದು ಹೀಯಾಳಿಸುವ ಉದ್ದೆÃಶ ಹೊಂದಿದ್ದರೆ ಆ ಪತ್ರಕರ್ತ ಈ ನೆಲದ ಕಾನೂನಿಗೆ ಒಳಗಾಗಲೇಬೇಕಾಗುತ್ತದೆ. ಈಗ ಆಗಿರುವುದು ಅದೆ. ಆದರೆ ಭಟ್ಟರು ತಮ್ಮ ಮೇಲಾದ ಪ್ರಥಮ ವರ್ತಮಾನ ವರದಿ ಜನ ಸಾಮಾನ್ಯರ ಮೇಲಾದ ದೌರ್ಜನ್ಯ ಎಂಬಂತೆ ಬಿಂಬಿಸುತ್ತಿರುವುದು ಅವರ ಅಧೈರ್ಯದ ಮನಸ್ಸನ್ನು ಎತ್ತಿತೋರಿಸುತ್ತದೆ. ವೈಶ್ಯೆಯೊಬ್ಬಳ ಕಡೆ ಸಹಜ ನೋಟದಲ್ಲಿ ನೋಡ ನೋಡುತ್ತಿದ್ದಂತೆ ಆಕೆ ಒಂದೇ ಸಮ ಬೀದಿ ರಂಪ ಮಾಡಿ ಜನರನ್ನು ಕೂಡಿಸಿ ತನ್ನ ಮೇಲೆ ಅತ್ಯಾಚಾರ ಮಾಡಿದಂತೆ ಬೊಬ್ಬೆ ಇಡುವುದು ಇದೆಯಲ್ಲ ಇದನ್ನು ಯಾರೊಬ್ಬರು ಒಪ್ಪಲಾರರು.

ಭಟ್ಟರೆ ನಿಮ್ಮ ಬರವಣಿಗೆ ಸಮಾಜವನ್ನು ತಿದ್ದುವುದಕ್ಕೆ ಇರಲಿ. ಯಾರನ್ನೋ ಹಣಿದು ಖುಷಿ ಪಡುವ ವಿಕೃತಿತನ ನಿಲ್ಲಲಿ. ಒಡಲೊಳಗಣ ಕಿಚ್ಚು ಒಡಲ ಸುಡುವುದಲ್ಲದೆ ನೆರೆ ಮನೆಯ ಸುಡದು ಎಂಬುದು ನೆನಪಿರಲಿ. ಪತ್ರಕರ್ತನ ಸೂಕ್ಷ್ಮ ಗುಣ ಮರೆತು ಪುಢಾರಿಯೊಬ್ಬನಂತೆ ಪೆನ್ನು ಹಿಡಿದು ಠಳಾಯಿಸುವುದು ರೋಲಕಾಲ್ ಮಾಡಿದಂತೆ. ಇದನ್ನು ಮಾಡಬೇಡಿ. ‘ಕುರುಡಿಯ ಹಾದರಕ್ಕೆ ಊರೆಲ್ಲ ನಿದ್ದೆಗೇಡು’ ಎಂಬಂತೆ ನಿಮಗೆ ಒಪ್ಪಿತವಾಗದ ವ್ಯಕ್ತಿ/ ಸಂಗತಿಗಳ ಕುರಿತು ಬರೆದು ಸಮಾಜವನ್ನು ಹದಗೆಡಿಸಬೇಡಿ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದುದು ನಮ್ಮೆಲ್ಲ ಹೊಣೆ ಎಂಬುದು ನೆನಪಿರಲಿ.

೦ ವಿಶ್ವಾರಾಧ್ಯ ಸತ್ಯಂಪೇಟೆ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago