ಕಲಬುರಗಿ: ಬಿಕ್ಕಟ್ಟಿನಲ್ಲಿ ಆರೋಗ್ಯವ್ಯವಸ್ಥೆಯ ಸಂದರ್ಭದಲ್ಲಿ ಕಳೆದ ಮೂರು ದಿನಗಳ ಹಿಂದೆ ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ, ಡಾ. ನಾಗೇಂದ್ರರವರು ತೀವ್ರವಾದ ಕೆಲಸದ ಒತ್ತಡ ಹಾಗು ಮೇಲಧಿಕಾರಿಗಳ ಕಿರುಕುಳಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಮೃತಪಟ್ಟ ವೈದ್ಯರಿಗೆ ನ್ಯಾಯಕ್ಕೆ ಒತ್ತಾಯಿಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಬೇಕೆಂದು ಎಮ್‌ಎಸ್‌ಸಿ ಜಿಲ್ಲಾ ಸಂಚಾಲಕ ನೇತೃತ್ವದಲ್ಲಿ ಆನ್ ಲೈನ್ ಪ್ರತಿಭಟನೆ ನಡೆಸಿದರು.
ಈ ವೇಳೆಯಲ್ಲಿ ಸಂಚಾಲಕರಾದ ಡಾ.ಸಿಮಾ ದೇಶಪಾಂಡೆ ಮಾತನಾಡಿ ರಾಜ್ಯಾದ್ಯಂತ ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗಳು ಅತೀವವಾದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೂಕ್ತ ಸಂಖ್ಯೆಯಲ್ಲಿ ಸಿಬ್ಬಂದಿ ಹಾಗೂ ಸೌಕರ್ಯಗಳಿಲ್ಲದಿರುವುದರಿಂದ ಆರೋಗ್ಯ ಸಿಬ್ಬಂದಿ ಹಾಗು ವೈದ್ಯರು ಅಮಾನವೀಯ, ಅಸಹನೀಯ ಮತ್ತು ನಿರಂತರವಾದ ಡ್ಯೂಟಿ ಮಾಡುತ್ತಾ ಹಲವಾರು ರೀತಿಯ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು.
ಎಲ್ಲಾ ಸರ್ಕಾರಗಳೂ ಆರೋಗ್ಯ ಕ್ಷೇತ್ರವನ್ನು, ವಿಶೇಷವಾಗಿ ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ಕಡೆಗಣಿಸುತ್ತಾ, ಖಾಸಗೀಕರಣ ನೀತಿಗಳನ್ನು ಅನುಸರಿಸುತ್ತಾ ಬಂದಿರುವುದರಿಂದ ಇಂದಿನ ದುಸ್ಥಿತೆ ಬಂದಿದೆ ಎಂದರೆ ತಪ್ಪಲ್ಲ. ಈ ನೋವಿನ ಘಟನೆ ನಮ್ಮ ಇಡೀ ಆರೋಗ್ಯ ವ್ಯವಸ್ಥೆ ರೋಗಗ್ರಸ್ಥವಾಗಿರುವುದಕ್ಕೆ ನಿದರ್ಶನ. ಒಂದು ಕಡೆ ಆರೋಗ್ಯ ಸಿಬ್ಬಂದಿ, ಮತ್ತು ಇನ್ನೊಂದೆಡೆ ಜನಸಾಮಾನ್ಯರು ಸರಿಯಾದ ಸಮರ್ಪಕವಾದ ಆರೋಗ್ಯ ವ್ಯವಸ್ಥೆ ಇಲ್ಲದಿರುವುದರಿಂದ ಬಲಿಪಶುಗಳಾಗುತ್ತಿದ್ದಾರೆ ಎಂದರು.
ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳು, ಡಾ. ನಾಗೇಂದ್ರರವರಿಗೆ ನ್ಯಾಯ ಕೊಡಿ, ನಿಷ್ಪಕ್ಷಪಾತ ತನೆಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, ನಿಷ್ಪಕ್ಷಪಾತ ತನೆಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, ವೈದ್ಯ-ವೈದ್ಯಕೀಯ ಸಿಬ್ಬಂದಿ ಹಾಗು ಜನರನ್ನು ಉಳಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆನ್‌ಲೈನ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಹಣಮಂತ ಎಸ್ ಹೆಚ್, ವಿಶಾಲ ದೊಡ್ಡಮನಿ ರಾಜ್ಯಾದ್ಯಂತ ವೈಟ್ ಸ್ಪಾರ್ಕ್ಸ (ಮೆಡಿಕಲ್ ಮತ್ತು ಡೆಂಟಲ್ ವಿದ್ಯಾರ್ಥಿಗಳ ವೇದಿಕೆಯ ಸದಸ್ಯರು ಹಾಗೂ ನೂರಾರು ವಿದೈರ್ಥಿಗಳು ಮತ್ತು ಮೆಡಿಕಲ್ ಸರ್ವಿಸ್ ಸೆಂಟರ್(ಎಮ್‌ಎಸ್‌ಸಿ)ನ ವೈದ್ಯರು ಪಾಲ್ಗೊಂಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…