ಕಲಬುರಗಿ: ಹೊಸದಾಗಿ ಖರೀದಿಸಿದ ಮಹೀಂದ್ರಾ ಟ್ರಿಪೋ ಇ ಆಟೋ ರೀಕ್ಷಾದಲ್ಲಿ ವಾಹನದಲ್ಲಿ ಸಾಹಕಷ್ಟು ಸಮಸ್ಯೆ ಎದುರಾಗುತ್ತಿದ್ದು, ಶೋಹರೋಂ ಮಾಲೀಕರು ಸರ್ವಿಸ್ ನೀಡಿದ ಸತಾಯಿಸುತ್ತಿರುವುದು ಬಗ್ಗೆ ಮತ್ತು ಆಟೋ ಖರೀದಿಗೆ ಪಡೆದ ಸಾಲದ ಕಂತು ಪಾವತಿಗೆ ಸಮಯ ಅವಕಾಶ ನೀಡಬೇಕೆಂದು ಒತ್ತಾಯಿಸಿ ಎಂದು ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘ ಕಳೇದ 8 ತಿಂಗಳ ಹಿಂದೆ ಸುಮಾರು 50 ರಿಂದ 60 ನೂತನ ಮಹೀಂದ್ರಾ ಟ್ರಿಪೋ ಇ ರೀಕ್ಷಾ ಆಟೋಗಳು ಶಾ ಮಹೀಂದ್ರಾ ಶೋಹರೋಮ್‌ದಿಂದ ಖರೀದಿ ಮಾಡಿದ ರೀಕ್ಷಾಗಳಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದೆ. ಸರ್ವಿಸಗಾಗಿ ಶೋಹರೂಮಗೆ ಹೋದರೆ, ಸಪ್ತಗಿರಿ ಶೋಹರೂಮ್‌ಗೆ ಸರ್ವಿಸ ಸ೦ಟರ್ ವಹಿಸಿಕೊಟ್ಟಿದ್ದೆವೆಂದು ಹೇಳಲಾಗುತ್ತಿದೆ. ತಮ್ಮ ಶೋಹರೋಮ್ ನಿಂದ ರೀಕ್ಷಾ ಖರೀದಿಸಿಲ್ಲ ಎಂದು ಚಾಲಕರಿ ಸರ್ವಿಸ್ ನೀಡಲು ಶೋಹರೋಮ್ ಮಾಲಿಕರು ಹಿಂದೆಟ್ಟು ಹಾಕುತ್ತಿದ್ದಾರೆಂದು ಆಟೋ ಚಾಲಕ ಸಂಘದ ಅಧ್ಯಕ್ಷರಾದ ಲಕ್ಮೀಕಾಂತ ಆರ್ ಮಾಲಿಪಟೀಲ್ ಆರೋಪಿಸಿದ್ದಾರೆ.
ಸಾಲ ಮಾಡಿ ಖರೀದಿಸಿದ್ದ ಆಟೋಗಳಾಗಿದ್ದು, ಕೋವಿಡ್-19 ದಿಂದಾಗಿ ಗಾಡಿಗಳ ಕಂತುಗಳು ತುಂಬಲು ಸಮಸ್ಯೆ ಎದುರಾಗಿದ್ದು, ಸಾಲದ ಕಂತುಗಳು ತುಂಬಲು ಕಾಲಾವಕಾಶ ಮತ್ತು ಆಟೋ ರೀಕ್ಷಾಗಳಿಗೆ ಸರ್ವಿಸ್ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಜುಕುಮಾರ ದಸ್ತಾಪುರ, ಮಾರುತಿ ಪಿ ಕಾಂಬಳೆ, ವಿಶ್ವನಾಥ ಜಾಧವ್, ವಿಜಯಕುಮಾರ ಪವಾರ್, ಗುರುನಾಥ ರಾಮನಗರ, ಮಲ್ಲಿಕಾರ್ಜುನ್ ಹೆರೂರಕರ್, ಮಂಜುನಾಥ್ ಕಡಬೂರ ಸೇರಿದಂತೆ