ಕಲಬುರಗಿ: ಕಬ್ಬಿನಲ್ಲಿ ಬಿಳಿ ನೊಣದ ಹಾವಳಿ ಕಂಡು ಬಂದಿದ್ದು, ಜೇವರ್ಗಿ ತಾಲೂಕಿನ ಕಬ್ಬು ಬೆಳೆಯುವ ಎಲ್ಲಾ ರೈತ ಬಾಂಧವರು ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುರಿಸಬೇಕೆಂದು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕ ಸುನೀಲ ಕುಮಾರ ಜವಳಗಿ ಅವರು ತಿಳಿಸಿದ್ದಾರೆ.
ಈ ಬಿಳಿ ನೊಣವು ಆಸರೆ ಬೆಳೆಗಳಾದ ಕಬ್ಬು, ಜೋಳ, ಬಿದಿರು ಹಾಗೂ ಇನ್ನಿತರ ಹುಲ್ಲಿನ ಜಾತಿಗೆ ಸೇರಿರುವ ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮಣ್ಣಿನಲ್ಲಿದ್ದಂತಹ ತೇವಾಂಶ ಹೆಚ್ಚಾಗಿ ಪೊರೈಸಿದ ಸಾರಜನಕ ಬೆಳೆಗೆ ಸಮರ್ಪಕವಾಗಿ ದೊರೆಯದೆ ಇರುವುದರಿಂದ ಬಿಳಿನೊಣದ ಬಾದೆ ಏಕಾಏಕಿಯಾಗಿ ಹೆಚ್ಚಾಗಿದೆ. ಮರಿ ಮತ್ತು ಪ್ರೌಢ ಕೀಟಗಳು ಸತತವಾಗಿ ಎಲೆಯ ಕೆಳಭಾಗದಿಂದ ರಸ ಹೀರುವುದರಿಂದ ಎಲೆಗಳು ಹಳದಿ ಹಾಗೂ ಗುಲಾಬಿ ಅಥವಾ ನೇರಳೆ/ಕೆಂಪು ಬಣ್ಣಕ್ಕೆ ತಿರುಗಿ ನಂತರ ಒಣಗಿ ಹೋಗುತ್ತವೆ. ಬಿಳಿನೊಣದ ಕೋಶದ ಕವಚ ಕಪ್ಪು ಬಣ್ಣದಿಂದ ಕೂಡಿರುವುದರಿಂದ ಎಲೆಗಳು ಬೀಳಿ ಮತ್ತು ಕಪ್ಪು ಚುಕ್ಕೆಗಳಾಗಿ ಕಾಣುತ್ತದೆ. ಸಕ್ಕರೆ ಅಂಶ ಕೂಡಿದ ಪದಾರ್ಥದಿಂದಾಗಿ ಎಲೆಯ ಮೇಲ್ಭಾಗದಲ್ಲಿ ಕಪ್ಪು ಬೂಷ್ಟ ಬೆಳೆಯುತ್ತದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಹಾಗೂ ಶೇ.25-30 ರಷ್ಟು ಇಳುವರಿ ಕಡಿಮೆಯಾಗುತ್ತದೆ.
ನಿರ್ವಹಣೆ ಕ್ರಮಗಳು: ರೈತರು ಬಿಳಿ ನೊಣದ ಬಾಧೆ ಕಂಡ ತಕ್ಷಣ 0.5 ಗ್ರಾಂ. ಥಯೋಮಿಥಾಕ್ಸಾಮ್ 25 ಡಬ್ಲ್ಯ್ಲೂ.ಜಿ ಅಥವಾ 2 ಮೀ.ಲೀ. ಡೈಮಿಥೋಯೆಟ್ 30 ಇ.ಸಿ. ಅಥವಾ 0.5 ಮಿ.ಲಿ. ಇಮಿಡಾಕ್ಲೋಪ್ರಿಡ 17.8 % ಎಸ್.ಎಲ್. ಅಥವಾ ಎಸಿಪೇಟ 75 % ಎಸ್.ಪಿ. 1.5 ಗ್ರಾಂ ಅಥವಾ ಎಸಿಟಾಮಾಪ್ರಿಡ 20 % ಎಸ್.ಪಿ. 0.5 ಗ್ರಾಂ ಪ್ರತಿ ಲೀಟರ ನೀರಿಗೆ + ಜೋತೆಗೆ ಶೇ. 2 ರ ಯೂರಿಯಾ (20 ಗ್ರಾಂ) ಪ್ರತಿ ಲೀಟರ್ ನೀರಿನಲ್ಲಿ ಬೆರಿಸಿ ಸಿಂಪರಣೆ ಮಾಡಬೇಕು.
ಕೀಟದ ತೀವ್ರತೆಗನುಗುಣವಾಗಿ 15 ದಿನಗಳ ಅಂತರದಲ್ಲಿ ಎರಡನೇಯ ಸಿಂಪರಣೆ ಮಾಡಬೇಕು. ಮೇಲ್ಗೊಬ್ಬರವಾಗಿ ನೀರು ಕೊಟ್ಟ ನಂತರ ಪ್ರತಿ ಎಕರೆಗೆ 20-25 ಕಿ.ಗ್ರಾಂ ಯೂರಿಯಾ + ಜೊತೆಗೆ ಹರಳು ರೂಪದ ಕೀಟನಾಶಕಗಳಾದ ಕ್ಲೋರ್ಯಾಂಟ್ರಿನಿಲಿಪ್ರೊಲ್ 0.4 ಜಿ.ಆರ್ @ 5 ಕಿ.ಗ್ರಾಂ ಪ್ರತಿ ಎಕರೆಗೆ ಕೊಡುವುದು ಸೂಕ್ತ. ಕಬ್ಬಿನ ಪರಿಸರದಲ್ಲಿ ಪರಭಕ್ಷಕ ಕೀಟ (ಗುಲಗಂಜಿ ಹುಳು) ಹಾಗೂ ಜೈವಿಕ ಶೀಲಿಂದ್ರ (ಅಕ್ರಿಮೊನಿಯಂ ಜೈಲ್ಯಾನಿಕಂ) ಕಂಡುಬಂದಲ್ಲಿ ಅವನ್ನು ಉತ್ತೇಜಿಸುವುದು. (ಇಂತಹ ಸಮಯದಲ್ಲಿ ರಾಸಾಯನಿಕವನ್ನು ಬಳಸುವುದು ಸೂಕ್ತವಲ್ಲ).
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಡಾ. ಬಸವರಾಜ ಇವರ ಮೊಬೈಲ್ ಸಂಖ್ಯೆ 9945488197 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…