ಕಲಬುರಗಿ: ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಲಬುರಗಿ ಕಾರ್ಯಾಲಯದಿಂದ ಕಲಬುರಗಿ ನಗರದಲ್ಲಿ ಇಂದಿನಿಂದ ಆಗಸ್ಟ್ 28ರವರೆಗೆ ಕೊರೋನಾ ವೈರಸ್ ಕುರಿತು ಆಟೋ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಿದರು.
ಈ ಜಾಗೃತಿ ಕಾರ್ಯಕ್ರಮವನ್ನು ಆಗಸ್ಟ್ 24ರಂದು ಕಲಬುರಗಿ ನಗರದಲ್ಲಿ, ಆಗಸ್ಟ್ 25ರಂದು ಖಣದಾಳ, ಸಿರನೂರ, ಕಾಳನೂರ. ಆಗಸ್ಟ್ 26ರಂದು ಸರಡಗಿ, ಹಾಗರಗಿ ಮತ್ತು ಮಾಲಗತ್ತಿ, ಆಗಸ್ಟ್ 27ರಂದು ಉದನೂರ, ಹಿರಾಪೂರ, ಸ್ಟೇಷನ್ ಬಬಲಾದ್ ಹಾಗೂ ಆಗಸ್ಟ್ 28ರಂದು ಕೋಟನೂರ, ಡಬರಾಬಾದ, ಸಿಂದಗಿಗಳಲ್ಲಿ ಆಟೋ ಮೂಲಕ ಕೋರೊನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಲಬುರಗಿ ಕಾರ್ಯಾಲಯದ ಸಹಾಯಕ ನಾಗಪ್ಪ ಅಂಬಾಗೋಳ ಸೇರಿದಂತೆ ಮತ್ತಿತರರು ಇದ್ದರು.