ಕಲಬುರಗಿ: ನಗರದ ಏಕ್ತಾ ಕಾಲೋನಿ ಬಡಜನರಿಗೆ ಶಾಶ್ವತ ಮನೆ ನಿರ್ಮಿಸಿ ಕೊಡಬೇಕೆಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್. ಯು. ಸಿ.ಐ (ಸಿ ) ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ASA (ದಕ್ಷಿಣ ) ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಎಲ್ಲಾ ನಿರಾಶ್ರಿತರಿಗೆ ಸ್ವಂತ ವಸತಿ ಒದಗಿಸಬೇಕೆಂದು ಮಿನಿ ವಿಧಾನಸೌಧ ಎದುರುಗಡೆ ಪ್ರತಿಭಟನಾ ಪ್ರದರ್ಶನವನ್ನು ನಡೆಸಿ ಜಿಲ್ಲಾಧಿಕಾರಿಗೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಆಗ್ರಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ಮುಖಂಡರಾದ ಎಸ್. ಎಂ. ಶರ್ಮಾ, ಭೀಮಾಶಂಕರ್ ಪಾಣೇಗಾಂವ, ಡಾ. ಸೀಮಾ ದೇಶಪಾಂಡೆ, ಮಲ್ಲಿನಾಥ್ ಸಿಂಘೆ, ಮಹೇಶ್ ಎಸ್. ಬಿ. ಈರಣ್ಣ ಇಸ್ಬಾ, ಶರಣು ವಿ. ಕೆ. ಮಲ್ಲು ಧರಿಯಾಪುರ್, ಜಾವೇದ್, ವಾಜಿದ ಶೇಖ್ ಸೇರಿದಂತೆ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.