ಸಮಸ್ಯೆಗಳಿಂದ ನಲುಗುತ್ತಿರುವ ಕೊಪ್ಪಳ ಜಿಲ್ಲೆಯ ನಿಲೋಗಲ್ ಗ್ರಾಮ

0
54
  • ಸಾಜಿದ್ ಅಲಿ ಕಲಬುರಗಿ

ಕೊಪಳ್ಳ: ಗ್ರಾಮದಲ್ಲಿ ಪ್ರವೇಶ ಮಾಡಬೇಕೆಂದರೆ ಹಗ್ಗದ ಮೇಲೆ ನಡೆದಂತೆ, ಜೀವನ ಸಾಗಿಸಬೇಕೆಂದ ಸಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತೆ, ಸಮಸ್ಯೆಗೆ ಸ್ಪಂದಿಸಲು ಮನವಿ ಮಾಡಿದರೆ ಕ್ಯಾರೆ ಅನ್ನದ ಅಧಿಕಾರಿಗಳು, ಗ್ರಾಮದಲ್ಲಿಯೇ ಪಂಚಾಯತ್ ಕಚೇರಿ ಇದ್ದರು ಲೆಕ್ಕಕೆ ಉಂಟು ಆಟಕ್ಕಿಲ್ಲ ಎಂಬಂತೆ ಈ ಗ್ರಾಮದ ವ್ಯವಸ್ಥೆ.

ಹೌದಾ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರು ಇನ್ನೂ ಈ ಗ್ರಾಮದ ಗೊಳು ಕೇಳಿಸಕೊಳುವ ಅಧಿಕಾರಿಗಳು ಮಾತ್ರ ದರ್ಶನ ನೀಡಿಲ್ಲ ಎಂಬಂತೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ವ್ಯವಸ್ಥೆ ಇದು. ಗ್ರಾಮದ ಜನರು ಗ್ರಾಮದಲ್ಲಿ ಕೃಷಿಗೊಂಡ ಇದ್ದು ಇನ್ನೊಂದು ಕೃಷಿ ಹೊಂಡತೆಗೆದು ಹಣ ತೆಗೆದಿರುವ ಆರೋಪ ಮಾಡಿದ್ದಾರೆ, ನಿಲೋಗಲ್ ಗ್ರಾಮದಲ್ಲಿ ಸಿಸಿ. ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದು, ಜೊತೆಗೆ ಗ್ರಾಮದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮದ ನಿವಾಸಿಗಳು ಹಲವು ಬಾರಿ ನೀಲೋಗಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರತಿಕ್ರಿಯೆ ಮಾತ್ರ ಸಿಕ್ಕಿಲ್ಲ  ಎಂದು ಗ್ರಾಮದ ನಿವಾಸಿ ಪರಿಶುರಾಮ್ ಭೀ ಡೊಕ್ಕೆ ತಮ್ಮ ಗ್ರಾಮದ ಅಳಲು ತೊಡಿಕೊಂಡಿದ್ದಾರೆ.

Contact Your\'s Advertisement; 9902492681

ಜಿಲ್ಲಾಧಿಕಾರಿಗಳಿಗೆ ಗ್ರಾಮದ ಸಮಸ್ಯೆಯ ವಾಸ್ಥವದ ಕುರಿತು ಮನವರಿಕೆ ಮಾಡಿದ್ದೇವೆ, ಸಮಸ್ಯೆ ನೀವಾರಿಸುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದರು, ಆದರೆ ಇದುವರೆಗೆ ಯಾವುದೇ ರೀತಿ ಸಮಸ್ಯೆಗೆ ಸ್ಪಂದನೆ ದೊರೆತ್ತಿಲ್ಲ ಎಂದು ನಿವಾಸಿ ಭೀಮಪ್ಪ ಡೊಕ್ಕೆ ಅವರು ಇ ಮೀಡಿಯಾ ಲೈನ್ ಜೊತೆ ಮಾತನಾಡಿ ಮಾಹಿತಿ ನೀಡಿದರು.

ಗ್ರಾಮದಲ್ಲಿ ಜನರು ವಾಸಮಾಡು ಸ್ಥಳಲ್ಲಿ ಭಯಂಕರ ಕಲಿಜು ಮತ್ತು ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ಗ್ರಾಮದಲ್ಲಿ ಮಲೇರಿಯಾ, ಡೈರಿಯಾ ಸೇರಿದಂತೆ ಸಂಕ್ರಾಮಿ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿದ್ದು, ಶೌಚಾಲಯದ ವ್ಯವಸ್ಥೆ ಇಲ್ಲದೆ ಜನರ ಜೀವನ ಆಸ್ತವ್ಯಸ್ಥರೂಪಡೆದುಕೊಳುತ್ತಿದೆ. ಗ್ರಾಮದಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಇದ್ದರೂ ಇಲ್ಲದಂತೆ ನಡೆದುಕೊಳುವುದಲ್ಲದೆ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆಂದು ಭೀಮಪ್ಪ ಆರೋಪಿಸುತ್ತಿದ್ದು. ಶೀಘ್ರದಲ್ಲಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ನಡೆಸಬೇಕೆಂದು ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here