ಬಿಸಿ ಬಿಸಿ ಸುದ್ದಿ

ಎಸ್.ಪಿ. ಬಾಲಸುಬ್ರಮಣ್ಯಂ ಅನಾರೋಗ್ಯದಿಂದ ಚೇತರಿಕೆಗೆ “ಮತ್ತೆ ಹಾಡಲಿ”ಸಂಗೀತ ನಮನ

ಕಲಬುರಗಿ: ನಿನ್ನೆ ಸ್ನೇಹಸಂಗಮ ವಿವಿದೊದ್ದೇಶ ಸೇವಾ ಸಂಘ ಹಾಗೂ ಕೆ.ಹೆಚ್.ಬಿ. ಗೆಳೆಯರ ಬಳಗದ ಸಹಯೋಗದಲ್ಲಿ ಗಾನಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ ಅವರು ಅನಾರೋಗ್ಯದಿಂದ ಚೇತರಿಸಿಕೊಂಡು “ಮತ್ತೆ ಹಾಡಲಿ” ಎಂಬ ಶೀರ್ಷಿಕೆಯಡಿಯಲ್ಲಿ ಅವರ ಹಲವಾರು ಗೀತೆಗಳನ್ನು ಪ್ರಸ್ತುತ ಪಡಿಸುವದರೊಂದಿಗೆ ಸಂಗೀತ ಸೇವೆ ಪುನರಾರಂಭಿಸಲಿ ಎಂಬ ಪ್ರಾರ್ಥನೆಯ ಸಂಗೀತ ಸಮಾರಂಭ ಕೆ.ಹೆಚ್.ಬಿ. ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಭಾಗದ ಖ್ಯಾತ ಸಂಗೀತ ಕಲಾವಿದರಾದ ಸಂಗಮೇಶ ಶಾಸ್ತ್ರೀ ಮಾಶಾಳ, ಶಿವಾನಂದ ಗೌಡಗಾಂವ, ಲಕ್ಷ್ಮಣ ಹೆರೂರ, ಮಲ್ಲಿಕಾರ್ಜುನ ಕಲಬುರಗಿ ಜಂಬಗಿ, ರಾಜು ಹೆಬ್ಬಾಳ, ವಿಜಯಕುಮಾರ ಮಾಲಿಪಾಟೀಲ ಸೇರಿದಂತೆ ಹಲವಾರು ಕಲಾವಿದರು ಅವರ ಅದ್ಭುತ ಹಾಡುಗಳನ್ನು ಹಾಡಿದರು. ಸಭಿಕರು ಹಾಗೂ ಕಲಾವಿದರು ಸೇರಿ ಎಸ್.ಪಿ.ಬಿ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಚ್.ಬಿ. ಗೆಳೆಯರ ಬಳಗದ ಮುಖಂಡರಾದ ಸಂಗಮೇಶ್ವರ ಸರಡಗಿ ಮಾತನಾಡುತ್ತಾ ಎಸ್.ಪಿ.ಬಿ. ಅವರು ನೆರೆಯ ಆಂಧ್ರಪ್ರದೇಶದಲ್ಲಿ ಜನಿಸಿದರೂ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಬಸವತತ್ವದ ಪ್ರತಿಪಾದಕರಾದ ಕನ್ನಡದ ವಚನಗಳ ಬಗ್ಗೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಪ್ರತಿವಾರ ಒಂದೊಂದು ವಚನ ಹಾಡುತ್ತಾ ವಚನದ ಸಾರ ತಿಳಿಸುತ್ತಿದ್ದರು. ಶರಣರ ವಚನಗಳ ಬಗ್ಗೆ ಎಷ್ಟು ಅಭಿಮಾನ ಇತ್ತೆಂದು ಗೊತ್ತಾಗುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಸಂಗೀತಕ್ಕೆ ಹಲವಾರು ರೋಗಗಳನ್ನು ಕಳೆಯುವ ಶಕ್ತಿ ಇದೆ. ಮನುಷ್ಯನು ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡದಿಂದ ಬದಕುತ್ತಿದ್ದಾನೆ. ಶಾಂತಿ ನೆಮ್ಮದಿಯಿಂದ ಜೀವಿಸಬೇಕಾದರೆ ಮನುಷ್ಯನಿಗೆ ಸಂಗೀತ ಅವಶ್ಯಕ ಎಂದು ಹೇಳಿದರು. ಕೆಲ ಪರಭಾಷಾ ಗಾಯಕರು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿಲ್ಲ ಅಂತವರಿಗೆ ಎಸ್.ಪಿ.ಬಿ. ಅವರು ಆದರ್ಶವಾಗಲಿ ಎನ್ನುತ್ತಾ ಆದಷ್ಟು ಬೇಗ ಎಸ್.ಪಿ.ಬಿ. ಅವರು ಗುಣಮುಖರಾಗಿ ಎಂದಿನಂತೆ ಅವರ ಸಂಗೀತ ಸೇವೆ ಸಾಗಲಿ ಎಂದರು.

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಕುಲಕರ್ಣಿ, ದಿಲೀಪ್ ಭಕರೆ, ವಿನೋದ ಪಡನೂರ, ಸೂರ್ಯಕಾಂತ ಸಾವಳಗಿ, ಬಸವರಾಜ ಹಳವಾರ, ಸಾಯಬಣ್ಣ ಜಂಬಗಿ, ಶ್ರೀನಿವಾಸ ಭುಜ್ಜಿ, ವೀರೇಶ ಬೋಳಶೆಟ್ಟಿ ನರೋಣಾ, ಶಿವಕಾಂತ ಚಿಮ್ಮಾ, ಶಂಭುಲಿಂಗ ವಾಡಿ, ಶಿವರಾಜ ಬಿರಬಿಟ್ಟೆ, ರವೀಂದ್ರ ಗುತ್ತೇದಾರ, ಸಂಜುಕುಮಾರ ಹೆರೂರ, ಶರಣ ವಾಡಿ, ಶಿವಕುಮಾರ ಕಲಬುರಗಿ ಜಂಬಗಿ ಸೇರಿದಂತೆ ಇತರರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

8 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

15 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago