ಸಾರಸ್ವತ ಲೋಕದ ಬಹುದೊಡ್ಡ ವಿದ್ವಾಂಸ ಡಾ:ಈಶ್ವರಯ್ಯ ಮಠ: ಜೆ.ಅಗಸ್ಟಿನ್

0
42

ಸುರಪುರ: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿಗಳಾದ ಡಾ:ಈಶ್ವರಯ್ಯ ಮಠ,ಕೆ.ವಿರಪ್ಪ ಹಾಗು ಏಕದಂಡಗಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿಗಳ ಕುರಿತು ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಸಂಘ ಸುರಪುರ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನುಡಿನಮನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಜೆ.ಅಗಸ್ಟಿನ್ ಮಾತನಾಡಿ, ಈ ನಾಡು ಅನೇಕ ಶ್ರೇಷ್ಠರ ಕೊಡುಗೆಯಿಂದ ಅತ್ಯಂತ ಚಲನಶೀಲತೆ ಪಡೆದಿದೆ. ಸಾಹಿತಿ ಈಶ್ವರಯ್ಯ ಮಠ ಕನ್ನಡದ ಬಹುದೊಡ್ಡ ವಿದ್ವಾಂಸರಾಗಿದ್ದರು, ಕೆ.ವೀರಪ್ಪ ಪುರಾಣಗಳನ್ನು, ನವ್ಯ ನವೋದಯ ಕಾವ್ಯಗಳನ್ನು ಬರೆದವರು, ಯಾದಗಿರಿಯ ಏಕದಂಡಗಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಗುರುನಾಥೇಂದ್ರ ಸರಸ್ವತಿ ಸ್ವಾಮಿಜಿಗಳು ಅವಿರತವಾಗಿ ಸಮಾಜದ ಏಳ್ಗೆಗಾಗಿ ಪ್ರಯತ್ನಿಸಿದ್ದರು, ಇವರೆಲ್ಲರ ಅಗಲಿಕೆ ನಮಗೆಲ್ಲಾ ತುಂಬಾ ನೋವುಂಟು ಮಾಡಿದೆ, ಈ ಸಮಾಜವು ಇವರ ಋಣವನ್ನು ಸದಾ ಸ್ಮರಿಸುತ್ತದೆ. ಅಲ್ಲದೇ ಸುರಪುರದ ಕನ್ನಡ ಸಾಹಿತ್ಯ ಸಂಘವನ್ನು ಪುನರುಜ್ಜೀವನಗೊಳಿಸೋಣ ಎಂದರು.

Contact Your\'s Advertisement; 9902492681

ಸಭೆಯಲ್ಲಿದ್ದ ಸುರಪುರ ತಾಲೂಕಾ ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ‘ಈ ನಾಡು ಕಳೆದ ಎರಡು ತಿಂಗಳ ಅವಧಿಯಲ್ಲಿ ಅನೇಕ ಹಿರಿಯ ಸಾಹಿತಿಗಳನ್ನು, ಪ್ರತಿಭಾವಂತರನ್ನು ಕಳೆದುಕೊಂಡು ಸಾಹಿತ್ಯಲೋಕ ಬಡವಾಗುತ್ತಿದೆ, ‘ಕತ್ತಲಲ್ಲಿ ಅರಳಿದ ದಿಗ್ಗಜರ ಸಾಲು ಸಾಲೇ, ಸಾಲು ದೀಪಗಳ ಹಚ್ಚಿ ಕತ್ತಲಲ್ಲಿ ನಿಂತ ಸಂತರೆಲ್ಲಾ’ ಮರೆಯಾಗುತ್ತಿದ್ದಾರೆ. ಅದಕ್ಕೇ ನಿಶ್ಯಬ್ಧ ಹೇಳುತ್ತಿದೆ’, ‘ಸಾವಿಗೇ ಸಾವು ಬರಲಿ ಎಂದು ನಿಶ್ಯಬ್ಧ ನುಡಿಯಿತು’, ಈ ಸಾವಿನ ಸರಪಳಿ ಕೊನೆಗೊಂಡು, ನಾಡು ಮತ್ತೆ ನವಚೈತನ್ಯ ಪಡೆಯಲಿ’ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ, ನ್ಯಾಯವಾದಿ ನಿಂಗಣ್ಣ ಚಿಂಚೋಡಿ, ಬೀರಣ್ಣ ಬಿ.ಕೆ. ಆಲ್ದಾಳ, ಮಹಾಂತೇಶ ಗೋನಾಲ ಮಾತನಾಡಿ ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು.ಇದೇ ಸಂದರ್ಭದಲ್ಲಿ ಅಗಲಿದ ಸಾಹಿತಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ಸಭೆಯಲ್ಲಿ ನ್ಯಾಯವಾದಿ ಯಲ್ಲಪ್ಪ ಹುಲಕಲ್ಲ, ಕಾಂಗ್ರೆಸ್ ಸಮಿತಿ ಪ.ಪಂ.ಪ್ರ.ಕಾರ್ಯದರ್ಶಿ ರಮೇಶ ದೊರೆ, ನಬೀಲಾಲ ಮಕಾನದಾರ, ಶರಣಬಸಪ್ಪ ಯಾಳವಾರ, ದೊಡ್ಡಮಲ್ಲಿಕಾರ್ಜುನ ಉದ್ಧಾರ, ರಾಘವೇಂದ್ರ ಭಕ್ರಿ, ಕೃಷ್ಣ ದರಬಾರಿ, ಮೋನಪ್ಪ ಕಳಸರ, ರಾಘವೇಂದ್ರ ಬಾಡಿಯಾಳ, ಲಕ್ಷ್ಮಣ ಗುತ್ತೇದಾರ, ರಾಮಪ್ರಸಾದ ತೋಟದ, ಚೆನ್ನಪ್ಪ ಹೂಗಾರ, ನಿಂಗಣ್ಣ ಬುಡ್ಡಾ, ವೆಂಕಟೇಶ ಬೇಟೆಗಾರ, ಮೂರ್ತಿ ಬೊಮ್ಮನಳ್ಳಿ ಅವರು ಭಾಗವಹಿಸಿದ್ದರು.

ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ದೇವು ಹೆಬ್ಬಾಳ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here