ಆಳಂದ: ಶಾಸಕ ಸುಭಾಷ್ ಆರ್ ಗುತ್ತೇದಾರರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಅವರು ಶೀಘ್ರದಲ್ಲಿ ಚೇತರಿಕೆ ಕಾಣಲೆಂದು ಪಕ್ಷದ ಮುಖಂಡರು, ಅಭಿಮಾನಿಗಳು ತಾಲೂಕಿನಾದ್ಯಂತ ವಿಶೇಷ ಪೂಜೆ ಕೈಗೊಂಡಿದ್ದಾರೆ.
ಶಾಸಕರ ಸ್ವಗ್ರಾಮವಾದ ಆಳಂದ ತಾಲೂಕಿನ ತಡಕಲ ಗ್ರಾಮದ ಗ್ರಾಮದೇವತಾ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ರುದ್ರಾಭೀಷೇಕ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಗ್ರಾ.ಪಂ ಅಧ್ಯಕ್ಷ ಶಿವಪುತ್ರಪ್ಪ ಬೆಳ್ಳೆ, ಯುವ ಮುಖಂಡರಾದ ತಿಪ್ಪಯ್ಯ ಗುತ್ತೇದಾರ, ಬಸವರಾಜ ಕೆರೂರ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಮಾನೆ, ಶರಣು ಕುಮಸಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ನಿಂಬಾಳ ಗ್ರಾಮದಲ್ಲಿ ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಗುರುಶಾಂತ ಪಾಟೀಲ ನಿಂಬಾಳ ಪೂಜೆ ಸಲ್ಲಿಸಿದರು. ಕಡಗಂಚಿ, ಧಂಗಾಪುರ, ನಿಂಬರ್ಗಾ, ಮಾಡಿಯಾಳ, ಭೂಸನೂರ, ಮಾದನಹಿಪ್ಪರ್ಗಾ, ಗೋಳಾ ಬಿ, ಸುಂಟನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶಾಸಕ ಅಭಿಮಾನಿಗಳು ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿದರು.