ಆದರ್ಶ ವಿದ್ಯಾರ್ಥಿಗಳಾಗಿ ರೂಪಿಸುವರೇ ಉತ್ತಮ ಶಿಕ್ಷಕರು-ರಮೇಶ ವಾಲಿ

0
47

ಶಹಾಬಾದ:ಮಕ್ಕಳಲ್ಲಿ ಶ್ರದ್ಧೆ, ಸರಳತೆ,ಪ್ರೀತಿ ಬೆಳೆಸುವ ಮೂಲಕ ಆದರ್ಶ ವಿದ್ಯಾರ್ಥಿಗಳಾಗಿ ಮಾಡುವವರೇ ಉತ್ತಮ ಶಿಕ್ಷಕ ಎಂದು ಸಿಐ ಇಂಗಿನಶೆಟ್ಟಿ ಕಾಲೇಜಿನ ಉಪನ್ಯಾಸಕ ರಮೇಶ ವಾಲಿ ಹೇಳಿದರು.

ಅವರು ಶನಿವಾರ ನಗರದ ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಶಿಕ್ಷಕರು ಈ ದೇಶದ ಶಿಲ್ಪಿಗಳು.ಒಂದು ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರು ನೀಡುವ ಶಿಕ್ಷಣ ಪ್ರಮುಖವಾಗಿರುತ್ತದೆ. ದೇಶದ ಸಮಗ್ರ ವಿಕಾಸದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಡಾ.ರಾಧಾಕೃಷ್ಣನ್ ಅವರು ಒಬ್ಬ ಶಿಕ್ಷಕರಾಗಿ ರಾಷ್ಟ್ರದ ಉನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದು ಸಾಮನ್ಯ ವಿಷಯವಲ್ಲ.ಮಕ್ಕಳನ್ನು ಎತ್ತರ ಜ್ಞಾನವನ್ನು ನೀಡುವ ಮೂಲಕ ಶಿಕ್ಷಕರು ಡಾ.ರಾಧಾಕೃಷ್ಣನ್ ಅವರನ್ನು ನೆನೆಯಬೇಕೆಂದರು.

ಎಸ್.ಜಿ.ವರ್ಮಾ ಪ್ರಾಥಮಿಕ ಶಾಳೆಯ ಮುಖ್ಯಗುರುಮಾತೆ ಅನಿತಾ ಶರ್ಮಾ ಮಾತನಾಡಿ, ಶಿಕ್ಷಕರು ತ್ಯಾಗಮಯ ಜೀವನ ನಡೆಸಿದಾಗ ಮಾತ್ರ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ.ಅಂಥಹ ಶ್ರೇಷ್ಠ ಗುಣಗಳನ್ನು ಡಾ.ರಾಧಾಕೃಷ್ಣನ್ ಅವರು ಶಿಕ್ಷಕರಲ್ಲಿ ಕಂಡಿದ್ದರು.ಅದಕ್ಕಾಗಿ ನನ್ನ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎನ್ನುವ ಮೂಲಕ ಶಿಕ್ಷಕ ವೃತ್ತಿಗೆ ಬಹು ದೊಡ್ಡ ಗೌರವ ತಂದು ಕೊಟ್ಟರು ಎಂದು ಹೇಳಿದರು.ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರುಮಾತೆ ದಮಯಂತಿ ಸೂರ್ಯವಂಶಿ, ಎಸ್.ಎಸ್.ನಂದಿ ಪ್ರೌಢಶಾಲೆಯ ಮುಖ್ಯಗುರು ಸುಧೀರ ಕುಲಕರ್ಣಿ ಮಾತನಾಡಿದರು.

ಉಪನ್ಯಾಸಕರಾದ ಪ್ರಕಾಶಕೋಸಗಿಕರ್,ಸಾಯಿಬಣ್ಣ, ಬಾಬಾಸಾಹೇಬ ಸಾಳುಂಕೆ, ಚನ್ನಬಸಪ್ಪ ಕೊಲ್ಲೂರ್, ಅನೀಲ ಕುಲಕರ್ಣಿ, ವಸಂತ ಪಾಟೀಲ, ರಮೇಶ ಜೋಗದನಕರ್,ಚಂದುಲಾಲ ಬಸೂದೆ,ಶಿಕ್ಷಕಿಯರಾದ ಮಹೇಶ್ವರಿ ಗುಳಿಗಿ, ಶಿರೋಮಣಿ ದಯಾಲ, ಜಗದೇವಿ ಅಗಸ್ಥ್ಯ ತೀರ್ಥ, ನೈನಾ ಚಪ್ಪಳಗಾಂವಕರ್, ವಿ.ಎಸ್.ಹಿರೇಮಠ, ರಮೇಶ ಮಹೀಂದ್ರಕರ್ ಇತರರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here