ಶಿಕ್ಷಕರ ದಿನಾಚರಣೆ ನಿಮಿತ್ತ “ಗುರುವಂದನಾ” ಕಾರ್ಯಕ್ರಮ

0
156

ಕಲಬುರಗಿ: ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದುಕೊಳ್ಳಬೇಕು. ಆದರೆ ಭವಿಷ್ಯ ರೂಪಿಸುವ ಗುರಿಯಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು. ಇಂತಹ ಸಂದರ್ಭದಲ್ಲಿ ಕೈ ಹಿಡಿದು ಗುರಿ ಮುಟ್ಟಿಸಿ ಸಾಧನೆ ಶಿಖರವೇರಿಸುವವನೆ ನಿಜವಾದ ಗುರು ಎಂದು ಸಂಘಟಕ ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು.

ಇಂದು ಕಲಬುರಗಿ ತಾಲೂಕಿನ ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಆವರಣದಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ಯ “ಗುರುವಂದನಾ” ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕರ ವೃತ್ತಿ ಬಹಳ ಪವಿತ್ರವಾದುದು.

Contact Your\'s Advertisement; 9902492681

ಏನು ಅರಿಯದ ಮಕ್ಕಳಿಗೆ ಜ್ಞಾನ ತುಂಬಿ ರಾಷ್ಟ್ರದ ಉತ್ತಮ ಪ್ರಜೆಯಾಗಿ ರೂಪಿಸುತ್ತಾರೆ. ಗುರುಶಿಷ್ಯರ ಸಂಬಂಧದಲ್ಲಿ ಇಂದಿನ ಹಾಗೂ ಹಿಂದಿನ ದಿನಗಳಲ್ಲಿ ವ್ಯತ್ಯಾಸವಾದರು. ಶಿಕ್ಷಕರು ಮಾತ್ರ ತನ್ನ ವೃತ್ತಿಯ ಬಗ್ಗೆ ಪೂಜ್ಯತೆ ಭಾವದಿಂದ ಕಾಯಕ ಮಾಡುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡುವುದೆ ತನ್ನ ಕರ್ತವ್ಯವೆಂದು ಭಾವಿಸಿ ಸೇವೆಗೈಯುತ್ತಿದ್ದಾರೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ಸುಧಾ ಹಾಲಕಾಯಿ ಮಾತನಾಡುತ್ತಾ ತಾಯಿ-ತಂದೆಯ ಋಣ ಹಾಗೂ ಅಕ್ಷರ ಕಲಿಸಿದ ಗುರುಗಳ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಗುರುವಿನ ಸ್ಥಾನ ಬಹುದೊಡ್ಡದು ಇದರ ಮಹತ್ವ ಅರಿತವ ಮಹಾನ ವ್ಯಕ್ತಿಯಾಗಿ ದೇಶ ಸೇವೆ ಮಾಡುತ್ತಾನೆ.

ಸಂದಿಗ್ದ ಸಂದರ್ಭದಲ್ಲಿ ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿ ಉತ್ತಮ ನಾಡು ಕಟ್ಟುವ ಕಾರ್ಯ ಆಗಲೆಂದು ಹಾರೈಸಿದರು.
ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಗೌಡೇಶ ಬಿರಾದಾರ, ಓಂದೇವಿ ಬಿರಾದಾರ, ರಾಜಕೀಯ ಯುವಮುಖಂಡರಾದ ವೀರೇಶ ಬಿರಾದಾರ ಉಪಳಾಂವ, ಪ್ರಗತಿಪರ ರೈತ ಲಕ್ಷ್ಮೀಕಾಂತ ಪಿ. ಟೆಂಗಳಿ, ಯುವ ಮುಖಂಡ ಲಕ್ಷ್ಮೀಪುತ್ರ ಬಿರಾದಾರ, ಮುರಳಿದರ ಮಾಗನೂರ ಇದ್ದರು.

ಗುರುವಂದನಾ ಸಮಾರಂಭದಲ್ಲಿ ಶಿಕ್ಷಕರಾದ ಶ್ರೀದೇವಿ ಪಟವಾದಿ, ಶ್ವೇತಾ ರೆಡ್ಡಿ, ಶಿವಲೀಲಾ ಇಟಗಿ, ಶಾಂತಾಬಾಯಿ ಸೇಡಂ, ನಾಗರತ್ನ ಗುಡೇದ, ಜ್ಯೋತಿ ಪಾಟೀಲ, ಸಂಗೀತಾ ಪಾಟೀಲ, ಮಹಾನಂದಾ ಪಾಟೀಲ, ಸಂಗೀತ ಶಿಕ್ಷಕರಾದ ಸಂಗಮೇಶ ಶಾಸ್ತ್ರೀ ಮಾಶಾಳ, ಶಿವಾನಂದ ಗೌಡಗಾಂವರನ್ನು ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾವಿದ ಶಿವಕುಮಾರ ಕಲಬುರಗಿ ಜಂಬಗಿ, ಶರಣಬಸಪ್ಪ ನಾಗೂರ, ರಾಮಲಿಂಗ ಎ. ಬಿರಾದಾರ, ಶರಣಪ್ಪಾ ಕಾಂಬಳೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here