ಕಲಬುರಗಿ: ತಳವಾರ, ಪರಿವಾರ ಸಮುದಾಯಗಳ ಈ ಜ್ವಲಂತ ಸಮಸ್ಯೆ ಸರ್ಕಾರದ ಗಮನದಲ್ಲಿದೆ ಆದಷ್ಟು ಬೇಗ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದರು.
ಇಂದು ನಗರಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ, ತಳವಾರ ಪರಿವಾರ ಎಸ್ಟಿ ಹೋರಾಟ ಸಮಿತಿ ನಿಯೋಗ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದವರು ಬಾಬುರಾವ್ ಚಿಂಚನಸೂರ್ ಅವರು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಮತ್ತು ನನ್ನ ಗಮನಕ್ಕೆ ತಂದು ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಾ. ಸದಾ೯ರ ರಾಯಪ್ಪ , ರಾಜೇಂದ್ರ ರಾಜವಾಳ, ರವಿ ಸಣ್ಣ ಸಂತಮ್, ಬಿ.ಸಿ ಪಾಟೀಲ್ , ಚಂದ್ರಶೇಖರ ಜಮಾದಾರ ವಕೀಲರು, ದೇವಾನಂದ್ ಆರ್ ಸೊಪ್ಪು ,ದೇವೇಂದ್ರ ಚಿಗರಳ್ಳಿ,ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು.