ವೃದ್ಧಾಪ್ಯ ವೇತನ ನೀಡಲು ಆಗ್ರಹ

0
64

ರಾಯಚೂರು: ವೃದ್ಯಾಪ್ಯ, ವಿಧವಾ, ವಿಕಲಾಂಗ ಸೇರಿದಂತೆ ವಿವಿಧ ಮಾಸಾಶನಗಳಿಂದ ಫಲಾನುಭವಿಗಳಿಗೆ ಮಂಜೂರಾಗಿರುವ ವೇತನವನ್ನು ಸರಿಯಾಗಿ ಪಾವತಿ ಮಾಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಡಿವೈಎಫ್ಐ ಸಂಘಟನೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಕಳೆದ ವರ್ಷಗಳಿಂದ ವೃದ್ಧಾಪ್ಯ, ವಿಧವಾ, ವಿಕಲಾಂಗರ ವೇತನ ನೀಡದೆ ಗೋಳಾಡಿಸುತ್ತಿದ್ದಾರೆ. ಪ್ರತಿ ಬಾರಿ ಪೋಸ್ಟ್ ಮನ್ ನಾಲ್ಕೈದು ತಿಂಗಳ ಮಾಸಾಶವನ್ನು ಫಲಾನುಭವಿಗಳಿಗೆ ಕೇವಲ 2 ತಿಂಗಳ ಮಾಸಾಶನ ನೀಡಿ ಕೈತೊಳೆದುಕೊಳ್ಳುತ್ತಿದ್ದು, 5 ತಿಂಗಳ ಮಾಸಾಶನದಲ್ಲಿ 2 ತಿಂಗಳ ಮಾತ್ರ ನೀಡಿ,ಇಷ್ಟೇ ಮಂಜುರಾಗಿದೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು ಆರೋಪಿಸಿದ್ದಾರೆ.

Contact Your\'s Advertisement; 9902492681

ಅಧಿಕಾರಿಗಳು ಇದರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲದೆ ಇರುವುದು ಅನೇಕ ಅನುಮಾನಗಳಿಗೆ ಏಡೆಮಾಡಿಕೊಟ್ಟಿದೆ ಎಂದು ಪ್ರತಿಭಟನೆಯ ನೇತೃತ್ವವಹಿಸಿ ಆಕ್ರೋಶ ಹೊರಹಾಕಿದರು.

ಅನೇಕ ವೃದ್ದರು ಈ ವೇತನವನ್ನೆ ನಂಬಿಕೊಂಡಿದ್ದಾರೆ. ಈ ರೀತಿ ವಿಳಂಭ ಕಡಿತವಾಗಿ ವೇತನ ಪಾವತಿ ಮಾಡು ತ್ತಿರುವುದರಿಂದ ಜೀವನ ನಡೆಸಲು ಕಷ್ಟವಾಗಿದೆ. ಆರೋಗ್ಯ ಸಮಸ್ಯೆಗಳಿದ್ದು ಚಿಕಿತ್ಸೆಗೆ ಹಣ ಇಲ್ಲದಂತಾಗಿದೆ. ಔಷಧಗಳನ್ನು ಪಡೆಯಲು ವೃದ್ಧಾಪ್ಯ ವೇತನವೇ ಆಧಾರವಾಗಿದೆ. ಕಳೆದ ೫ ತಿಂಗಳಿಂದ ಸಮರ್ಪಕವಾಗಿ ಮಾಸಾಶನ ವಿತರಣೆ ಮಾಡುತ್ತಿಲ್ಲ. ಇದರಿಂದ ತೀವ್ರ ಸಮಸ್ಯೆಯಾಗಿದೆ.

ಕೂಡಲೇ ಮಾನ್ಯ ತಹಶೀಲ್ದಾರರು ಸಮಸ್ಯೆಯನ್ನು ಪರಿಶೀಲಿಸಿ ತಾಲೂಕಿನ ವೃದ್ಧರು ವಿಕಲಾಂಗರು ವಿಧವೆಯರಿಗೆ ವೇತನ ದೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಅಮರೇಗೌಡ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ್ಯಾವಮ್ಮ, ಮರಿಯಮ್ಮ, ಡಿವೈಎಫ್ ಐ ಸಂಘಟನೆಯ ರಮೇಶ ಮಡ್ಡಿಕಾರ್, ಫಲಾನುಭವಿಗಳಾದ ಭೀಮರಾಯ ಬೈಚಬಾಳ, ರುಕಜಮುದ್ದೀನ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here