ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ಮುದುವತ್ತಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಅಂಬೇಡ್ಕರ್ ವೃತ್ತ ಮುಂಭಾಗದಲ್ಲಿ ಮಹಾನಾಯಕ ಧಾರಾವಾಹಿಯ ಬೃಹತ್ತಾದ ಪ್ಲೆಕ್ಸ್ ಅಳವಡಿಸಲಾಗಿದೆ.
ಮುದುವತ್ತಿ ಗ್ರಾಮ ಪಂಚಾಯಿತಿಯ ಡಾ. ಬಿ.ಆರ್ ಅಂಬೇಡ್ಕರ್ ಮಹಿಳಾ ಸೇವಾ ಟ್ರಸ್ಟ್(ರಿ) ವತಿಯಿಂದ ಸಂಸ್ಥಾಪಕ ಮತ್ತು ಅದ್ಯಕ್ಷರಾದ ಸನ್ಮಾನ್ಯ ಶ್ರೀಮತಿ ಶೋಭಾ ಹರೀಶ್ ಮತ್ತು ಉಪಸಂಸ್ಥಾಪಕರು ಕುಮಾರಿ ಡಾಕ್ಟರ್ ನೇತ್ರಾವತಿ ಕಾರ್ಯದರ್ಶಿಯಾದ ಶ್ರೀಮತಿ ಮಂಜುಳಾ, ಸದಸ್ಯರಾದ ಶ್ರೀಮತಿ ಶೋಭಾ, ಸುಷ್ಮಾ,ಮಮತಾ,ಆಶಾ, ಪವಿತ್ರ, ವಿಜಯಮ್ಮ, ವೆಂಕಟಲಕ್ಷ್ಮಮ್ಮ, ಮುದುವತ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿವೆಂಕಟಪ್ಪ, DSS ಕೇಶವಮೂರ್ತಿ ಸರ್ ಹಾಗೂ ಸುತ್ತಮುತ್ತಿನ ಹಳ್ಳಿಯ ಮುಖಂಡರ ನೇತೃತ್ವದಲ್ಲಿ ಈ ಮಹಾನಾಯಕ ಧಾರಾವಾಹಿಯ ಬೃಹತ್ ಪ್ಲೆಕ್ಸ್ ಇಡಲಾಗಿದೆ.
ಈ ಸಂದರ್ಭದಲ್ಲಿ ಬಿ.ಆರ್ ಅಂಬೇಡ್ಕರ್ ಮಹಿಳಾ ಸೇವಾ ಟ್ರಸ್ಟ್(ರಿ) ಸಂಸ್ಥಾಪಕ ಮತ್ತು ಅದ್ಯಕ್ಷರಾದ ಸನ್ಮಾನ್ಯ ಶ್ರೀಮತಿ ಶೋಭಾ ಹರೀಶ್ ಮಾತನಾಡಿ ಜನರಿಗೆ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ನಮ್ಮ ಗ್ರಾಮದಲ್ಲಿ ಇಂದು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ನಮ್ಮ ಸಂವಿಧಾನ ಶಿಲ್ಪಿ, ಜನರ ಆರಾಧ್ಯ ದೈವ ಬಾಬಾ ಸಾಹೇಬರ ಜೀವನ ಚರಿತ್ರೆಯ ಬಗ್ಗೆ ತಿಳಿಸಲು ಅದರ ಜೊತೆಗೆ ಧಾರವಾಹಿಯನ್ನು ವೀಕ್ಷಿಸಲು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಬ್ಯಾನರ್ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸೇವಾ ಟ್ರಸ್ಟ್ ನ ಉಪ ಸಂಸ್ಥಾಪಕರಾದ ಕುಮಾರಿ ಡಾ. ನೇತ್ರಾವತಿರವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಅವರು ಮಾತನಾಡಿ ಕೆಲವು ಕಿಡಿಗೇಡಿಗಳು ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ರವರಿಗೆ ಕರೆಯ ಮೂಲಕ ಮಹಾನಾಯಕ ಧಾರಾವಾಹಿಯನ್ನು ನಿಲ್ಲಿಸುವಂತೆ ಒತ್ತಡ ತರುತ್ತಿದ್ದಾರೆ, ಅಲ್ಲದೆ ಅವರಿಗೆ ಜೀವ ಬೆದರಿಕೆ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಯಾವುದೇ ಕಾರಣಕ್ಕೂ ಮಹನಾಯಕ ಧಾರಾವಾಹಿ ನಿಲ್ಲಿಸಬಾರದೆಂದು ಮನವಿ ಮಾಡಿದರು. ಜೊತೆಗೆ ರಾಘವೇಂದ್ರ ಹುಣಸೂರು ರವರ ಬೆನ್ನೆಲುಬಾಗಿ ನಾವು ಇರುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಿ.ಆರ್ ಅಂಬೇಡ್ಕರ್ ಮಹಿಳಾ ಸೇವಾ ಟ್ರಸ್ಟ್(ರಿ) ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.