ಜನ ಸಂರಕ್ಷಣೆ ಹಕ್ಕೊತ್ತಾಯಗಳನ್ನು ಪರಿಗಣಿಸಲು ಆಗ್ರಹಿಸಿ ಸಿಪಿಐಎಂ ಪ್ರತಿಭಟನೆ

0
48

ಕಲಬುರಗಿ: ದೇಶದ ಹಾಗೂ ವಿದೇಶಗಳ ಬಹುರಾಷ್ಟ್ರೀಯ ಸಂಸ್ಥೆಗಳ ವ್ಯಾಪಕವಾದ ಲೂಟಿಗೆ ದೇಶವನ್ನು ತೆರೆಯುತ್ತಿರುವುದು ಖಂಡನೀಯವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿಗಳಾದ ಶರಣಬಸಪ್ಪ ಮಮಶೇಟಿ ಅವರು ತಿಳಿಸಿದ್ದಾರೆ.

ಇಂದು ಕೋಡ್ಲಿದಿಂದ ಕಾಳಗಿ ತಹಶೀಲ್ದಾರ್ ಕಚೇರಿ ವರೆಗೆ ರೈತ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನಾ ಮೆರವಣಿಗೆ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

Contact Your\'s Advertisement; 9902492681

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನಹಾಗೂಬೆಂಬಲ) ಸುಗ್ರಿವಾಜ್ಞೆ 2020, ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕುರಿತ ರೈತ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದ ಸುಗ್ರಿವಾಜ್ಞೆ 2020 ,ಅಗತ್ಯವಸ್ತುಗಳ ತಿದ್ದುಪಡಿ ಕಾಯ್ದೆ ಸುಗ್ರಿವಾಜ್ಞೆ – 2020,  ವಿದ್ಯುತ್ಕಾಯ್ದೆ – 2020  ಮತ್ತು ದೇಶದ ಕಾರ್ಮಿಕ ವರ್ಗದ ಎಥೇಚ್ಛಲೂಟಿ ನಡೆಸಲುಕೈಗಾರಿಕೆಗಳ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಅನುಕೂಲ ಮಾಡುವ ಪ್ರಮುಖಕಾರ್ಮಿಕ ತಿದ್ದುಪಡಿ ಕಾಯ್ದೆಗಳು ಸೇರಿದಂತೆ ಎಲ್ಲ ಸುಗ್ರೀವಾಜ್ಞೆಗಳನ್ನು ವಾಪಾಸುಪಡೆಯುವಂತೆ ಮತ್ತು ಇವುಗಳನ್ನು ಶಾಸನಗಳನ್ನಾಗಿಸುವ ಪ್ರಯತ್ಙಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರಬೇಕಾಗಿರುವ ಜಿ.ಎಸ್.ಟಿ ಬಾಕಿ, ಬಜೆಟ್ ಅನುದಾನದ ಬಾಕಿ, ಬರ ಹಾಗೂ ಅತೀವೃಷ್ಟಿ ಪರಿಹಾರ, ಕೋವಿಡ್ಪರಿಹಾರದ ಮೊತ್ತವನ್ನು ಕೂಡಲೇಬಿಡುಗಡೆ ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗಳಿಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಾಗಯ್ಯ ಸ್ವಾಮಿ, ಅಶೋಕ್ ಮ್ಯಾಗೆರಿ, ಪಾಂಡುರಂಗ ಮಾವಿನಕರ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here