ಯಾದಗಿರಿ: ನಗರದ ಕಬಾಡಗೇರಾದಲ್ಲಿರುವ ಎಕ್ಸಿಸ್ ಬ್ಯಾಂಕ್ ಶಾಖೆಯಲ್ಲಿನ ಸುರಪುರ ತಹಸೀಲ್ದಾರ್ ಹೆಸರಲ್ಲಿನ ಖಾತೆಯಲ್ಲಿದ್ದ ಹಣದಲ್ಲಿನ ೭೫ ಲಕ್ಷ ೫೯ ಸಾವಿರ ೯೦೦ ರೂಪಾಯಿಗಳನ್ನು ನಕಲಿ ಸಹಿ ಬಳಸಿ ಹಣ ಎಗರಿಸಿದ ಘಟನೆ ನಡೆದಿದೆ.
ಈ ಕುರಿತು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಹಸೀಲ್ದಾರ್ ಸುರಪುರ ಹೆಸರಲ್ಲಿನ ಎಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ 91901008033954 ಸಂಖ್ಯೆಯ ಖಾತೆಯಿದ್ದು ಈ ಖಾತೆಗೆ ಯಾದಗಿರಿ ಜಿಲ್ಲಾಧಿಕಾರಿಗಳು ನೈಸರ್ಗಿಕ ವಿಕೋಪದಡಿ ಬೇರೆ ಬೇರೆ ದಿನಾಂಕಗಳಂದು ಒಟ್ಟು ೩ ಕೋಟಿ ೫೫ ಲಕ್ಷ ರೂಪಾಯಿಗಳನ್ನು ಖಾತೆಗೆ ಜಮಾ ಮಾಡಲಾಗಿದೆ.ಈ ಹಣವನ್ನು ಕೋವಿಡ್-೧೯ ಸಲುವಾಗಿ ಖರ್ಚು ಮಾಡಲಾಗುತ್ತಿರುತ್ತದೆ.
ನನಗೆ ಕೋವಿಡ್ ಪಾಸಿಟಿವ್ ಬಂದ ಕಾರಣದಿಂದ ನಾನು ಕೆಲ ದಿನಗಳಿಂದ ಚಿಕಿತ್ಸೆಗಾಗಿ ಕಲಬುರ್ಗಿ ಮತ್ತಿತರೆ ಹೈದರಾಬಾದ್‌ನ ಆಸ್ಪತ್ರೆಗಳಿಗೆ ಹೋಗಿ ಬಂದಿದ್ದು,ಈಗ ಕರ್ತವ್ಯದಲ್ಲಿದ್ದೆನೆ.ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಂದು ಮತ್ತೆ ಹಣದ ಅವಶ್ಯಕತೆಯಿದ್ದಲ್ಲಿ ಪತ್ರದ ಮುಖೆನ ತಿಳಿಸುವಂತೆ ಹೇಳಲಾಗಿದ್ದರಿಂದ ಎಕ್ಸಿಸ್ ಬ್ಯಾಂಕ್ ಖಾತೆಯಲ್ಲಿನ ಹಣ ಖರ್ಚಾದುದರ ಕುರಿತು ಪರಿಶೀಲನೆ ನಡೆಸಿದಾಗ ನನ್ನ ಖಾತೆಯಿಂದ ಸುಮಾರು ೭೫ ಲಕ್ಷ ೫೯ ಸಾವಿರ ೯೦೦ ರೂಪಾಯಿ ಹಣ ವ್ಯತ್ಯಾಸ ಕಂಡುಬಂದಿದ್ದರಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ,ಬ್ಯಾಂಕ್ ಸಿಬ್ಬಂದಿ ನನ್ನ ಹೆಸರಿನ ಚೆಕ್ ನೀಡಿ ಅದರ ಮೇಲೆ ನಕಲಿ ಸಹಿ ಮಾಡಿ ಮಹಾಲಕ್ಷ್ಮೀ ಎಂಟರ್ ಪ್ರೈಸಸ್ ಎಂಬ ಹೆಸರಿನ ಜಿಎಸ್‌ಟಿ ಸಂಖ್ಯೆಯುಳ್ಳವರು ಲಕ್ಷ್ಮೀ ಗಂಡ ರಾಜು ಕಟ್ಟಿಮನಿ ಸಾ: ವಜ್ಜಲ್ ಗ್ರಾಮದವರು ಹಣ ಸಂದಾಯ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಪಿಐ ಎಸ್.ಎಮ್.ಪಾಟೀಲ್ ಅವರು ಕಾರ್ಯಾಚರಣೆ ಆರಂಭಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡುವಲ್ಲಿ ಯಾವುದೇ ರೀತಿಯ ಅನುಮಾನ ವ್ಯಕ್ತಪಡಿಸದೆ ಸಂದಾಯ ಮಾಡಿರುವುದರಿಂದ ಎಕ್ಸಿಸ್ ಬ್ಯಾಂಕ್ ಸಿಬ್ಬಂದಿ ಬಗ್ಗೆ ಅಥವಾ ಚೆಕ್ ಹೇಗೆ ಲಕ್ಷ್ಮೀ ಎಂಟರ್ ಪ್ರೈಸಸ್ ಮಾಲೀಕರ ಕೈಗೆ ಹೋಯಿತು,ಅದರ ಮೇಲೆ ಮೊಹರು ಹೇಗೆ ಬಂತು ಎಂದು ಯೋಚಿಸುವಲ್ಲಿ ತಹಸೀಲ್ ಕಚೇರಿಯ ಸಿಬ್ಬಂದಿಯೂ ಇದರಲ್ಲಿ ಶಾಮಿಲಾಗಿರಬಹುದೆಂದು ಅನುಮಾನ ವ್ಯಕ್ತವಾಗುತ್ತಿದ್ದು ಈ ವಂಚನೆಯ ಹಿಂದೆ ಯಾರಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…