ಬಿಸಿ ಬಿಸಿ ಸುದ್ದಿ

ತಳವಾರ, ಪರಿವಾರ ಸಮುದಾಯಕ್ಕೆ ಸರಕಾರ ಅವಮಾನಿಸುತ್ತಿದೆ: ಡಾ. ಸರ್ದಾರ್ ರಾಯಪ್ಪ ಆರೋಪ

ಕಲಬುರಗಿ: ತಳವಾರ, ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ವಿವಿಧ ರೀತಿಯಲ್ಲಿ ಶಾಂತಿಯುತವಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ  ಸರತಿ ಉಪವಾಸ ಸತ್ಯಾಗ್ರಹ ಮಾಡುತ್ತ  ಕಳೆದ 27 ದಿನಗಳಿಂದ  ಹೋರಾಟ ಮಾಡುತ್ತಬಂದಿದ್ದೇವೆ. ಆದರೆ ನಮ್ಮ ಶಾಂತಿಯುತವಾದ ಹೋರಾಟವನ್ನು  ಜಿಲ್ಲಾ ಆಡಳಿತ, ಈ ಭಾಗದ ಶಾಸಕ, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು, ರಾಜ್ಯ ಸರಕಾರ ಕಡೆಗಣಿಸಿ ತಳವಾರ, ಪರಿವಾರ ಸಮುದಾಯಗಳಿಗೆ ಅವಮಾನಿಸುತ್ತಿದ್ದಾರೆ ಎಂದು ತಳವಾರ ಪರಿವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ್ ರಾಯಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇಂದು ನಗರದ ಪತ್ರಿಕಾ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ತಳವಾರ, ಪರಿವಾರದವರಿಗೆ ಆದ ಅನ್ಯಾಯದ ಕುರಿತು ಧ್ವನಿ ಎತ್ತುತ್ತೇವೆ, ನಿಮಗೆ ನ್ಯಾಯ ಸಿಗದಿದ್ದರೆ ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿದವರು ಕೂಡ ಧ್ವನಿ ಎತ್ತುತ್ತಿಲ್ಲ, ಇನ್ನೊಂದು ಕಡೆ ಕೋವಿಡ್-19 ನೆಪವೊಡ್ಡಿ ಮುಖ್ಯಮಂತ್ರಿಗಳು ಉದ್ದೇಶಪೂರ್ವಕವಾಗಿ ತರಾತುರಿಯಲ್ಲಿ ಅಧಿವೇಶನ  ಮುಕ್ತಾಯಗೊಳಿಸುವ  ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋವಿಡ್-19 ಕಾರಣ ಹೇಳುತ್ತಿರುವ ಶಾಸಕರಾಗಲಿ, ಸಚಿವರಾಗಲಿ ಮತ್ತು ಸರಕಾರ ತಮ್ಮ ಯಾವ ಚಟುವಟಿಕೆಗಳು ನಿಲ್ಲಿಸಿದ್ದಾರೆ?  ಅಧಿವೇಶನ  ಬೇಗನೆ ಮೊಟಕುಗೊಳಿಸುತ್ತಿರುವುದರ  ಉದ್ದೇಶವಿಷ್ಟೇ ಶಾಸಕರು, ಸಚಿವರು ಹಾಗೂ ಸರಕಾರ ಕೋವಿಡ್-19 ಸಂದರ್ಭದಲ್ಲಿ ಮಾಡಿರುವ ಭ್ರಷ್ಟಾಚಾರದ ಕರ್ಮಕಾಂಡ ಬಯಲಿಗೆ ಬರುತ್ತಿದೆ ಎನ್ನುವ ಭಯದಿಂದ ಅಧಿವೇಶನ ಬೇಗನೆ ಮುಕ್ತಾಯಗೊಳಿಸುತ್ತಿದೆ.  ಹಾಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ಶಾಸಕ, ಸಚಿವರಂತೂ ನನಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಹೇಳಿಕೊಂಡು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಒಂದು ವೇಳೆ ನಿಜವಾಗಿ ಕೋವಿಡ್ ಆಗಿದ್ದರೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ವಾದರೂ ಅಧಿವೇಶನದಲ್ಲಿ ಭಾಗಿಯಾಗಿ ನಮಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಸತ್ತಿನಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಯವರಿಂದ ಅಂಕಿತವಾಗಿ ರಾಜ್ಯಪತ್ರ ಹೊರಡಿಸುವಂತೆ ಕರ್ನಾಟಕ ರಾಜ್ಯ ಸರಕಾರ ಯಾವ ಬದಲಾವಣೆ ಇಲ್ಲದೆ ತಳವಾರ, ಪರಿವಾರದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡಬೇಕಾಗಿತ್ತು. ಆದರೆ ಇನ್ನೊಬ್ಬರನ್ನು ಓಲೈಸಲು ಮತ್ತು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಹಾಗೂ  ಸಚಿವರು ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ.

ಸರಕಾರ ಮತ್ತು ಅಧಿಕಾರಿಗಳ ದಿವ್ಯನಿರ್ಲಕ್ಷ್ಯ ನಮ್ಮ ಸಹನೆಯ ಕಟ್ಟೆ ಒಡೆಯುವಂತೆ ಮಾಡುತ್ತಿದೆ. ಇದರಿಂದ ನಮ್ಮ ಹೋರಾಟ ಶಾಂತಿಯಿಂದ ಕ್ರಾಂತಿಯೆಡೆಗೆ ಹೆಜ್ಜೆ ಇಡುವಂತೆ ಮಾಡುತ್ತಿದೆ. ಆದರೂ ಅಧಿವೇಶನ ಮುಗಿಯುವವರೆಗೆ ಒಂದು ಆಶಾಭಾವನೆಯಿಂದ ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಕಲಬುರ್ಗಿಗೆ ಬಂದಾಗ ನಮ್ಮ ಧರಣಿ ನಿರತ ಸ್ಥಳಕ್ಕೆ ಭೇಟಿಕೊಟ್ಟು, ಮನವಿ ಸ್ವೀಕರಿಸಿ, ನಮ್ಮ  ಬೇಡಿಕೆಗೆ ಒಂದು ಭರವಸೆಯ ಆಶ್ವಾಸನೆ ಕೊಡುತ್ತಾರೆ ಎಂಬ ನಿರೀಕ್ಷೆಯನ್ನು  ಹುಸಿಗೊಳಿಸಿ  ಇಡೀ ತಳವಾರ, ಪರಿವಾರ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಆದರೂ ನಾವು ಇಲ್ಲಿಯವರೆಗೆ ತಾಳ್ಮೆ ಕಳೆದುಕೊಂಡಿಲ್ಲ. ಅಧಿವೇಶನ  ಮುಗಿಯುವರೆಗೂ  ಕಾದು ನೋಡುತ್ತೇವೆ. ಅಧಿವೇಶನದಲ್ಲೂ  ಕೂಡ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಅಧಿಕಾರಿಗಳು, ಶಾಸಕ, ಸಚಿವರು, ಸಂಸದರು ಹಾಗೂ ಸರಕಾರ ಎದುರಿಸಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

ದೇವೇಂದ್ರ ಕೆ ಚಿಗರಹಳ್ಳಿ, ರಾಜ್ಯ ಉಪಾಧ್ಯಕ್ಷರು, ರಾಜೇಂದ್ರ ರಾಜವಾಳ , ರಾಜ್ಯ ಕಾರ್ಯದರ್ಶಿ ರೇವಣಸಿದ್ದಪ್ಪ ಗೌಡ ಕಮಲಮನಿ, ತಾಲೂಕ ಅಧ್ಯಕ್ಷ ಚಂದ್ರಶೇಖರ್ ಜಮಾದಾರ್,  ವಕೀಲರು ತಳವಾರ್ ಸಮಾಜದ ಮುಖಂಡರಾದ ಸುನಿತಾ M ತಳವಾರ್, ಸುಭಾಶ್ ಜಮಾದಾರ್,  ಚಂದ್ರಶೇಖರ್ ಕೋಟರಗಸ್ತಿ, ಶರಣು ಕೋಳಿ ಸೇರಿಂದತೆ ಇತರರು ತಿಳಿಸಿದ್ದಾರೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago