ಕಲಬುರಗಿ: ಸರಕಾರಿ ಸೇವೆಯಿಂದ ನಿವೃತಿಯಾದವರು ತಮ್ಮ ಅನುಭವವನ್ನು ಮತ್ತು ಉನ್ನತ ಮೌಲ್ಯದ ವಿಚಾರಗಳನ್ನ ಸಮಾಜಕ್ಕೆ ಧಾರೆ ಎರೆಯುವುದರ ಮೂಲಕ ಸಮಾಜವನ್ನು ಸನ್ಮಾರ್ಗದೆಡೆ ಕೊಂಡೊಯ್ಯಲು ಸಹಕರಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವೆಂದು ಸಾಹಿತಿ ಡಾ. ಎಸ್.ಎಂ ಹಿರೇಮಠ ಅಭಿಪ್ರಾಯಪಟ್ಟರು.
ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ನಗರದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸತ್ಕಾರ ಮತ್ತು ಸೇವಾ ನಿವೃತಿ ಹೊಂದಿದವರಿಗೆ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಹಳ್ಳಿಗಳಿಯೂ ಸಹ ನಗರೀಕರಣದ ಗಾಳಿ ಬೀಸುತ್ತಿದ್ದು ಇದರಿಂದ ಮುಂದಿನ ಭವಿಷ್ಯ ಹೇಗೆ ಎಂದು ಚಿಂತಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು ಮಠಗಳು ಇಂತಹ ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಮಾತನಾಡಿ ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಸಮಾಜ ಸೇವೆ ಅತ್ಯಗತ್ಯವಾಗಿದ್ದು ಕೇವಲ ಸರಕಾರಿ ಸೇವೆಯಿಂದ ಮಾತ್ರ ನಿವೃತ್ತರಾಗಬಹುದು ಸಮಾಜ ಸೇವೆಯಿಂದಲ್ಲ, ನಿಮ್ಮ ಸೇವೆ ಇಂದಿನಿಂದ ಸಮಾಜಕ್ಕಾಗಿ ಧಾರೆ ಎರೆಯಿರಿ ಎಂದು ಕೋರಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀನಿವಾಸ ಸರಡಗಿಯ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಆಶಿರ್ವಚನ ನೀಡಿ ತಮಗೆ ತಮ್ಮ ಶ್ರೀಮಠಕ್ಕೆ ಭಕ್ತರೇ ಬಹುದೊಡ್ಡ ಆಸ್ತಿಯಾಗಿದ್ದು ಅಂತಹ ಅನೇಕ ಭಕ್ತರಿಂದು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದು, ಶ್ರೀಮಠ ಹಮ್ಮಿಕೊಳ್ಳುವ ಸಮಾಜ ಮುಖಿ ಕಾರ್ಯಗಳಲ್ಲಿ ಕೈಗೂಡಿಸಿ ಚಟುವಟಿಕೆಗಳಲ್ಲಿ ಭಾಗಹಿಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಮುತ್ತ್ಯಾನ ಬಬಲಾದ ಮಠದ ಪೂಜ್ಯ ಗುರುಪಾದಲಿಂಗ ಮಹಾಸಿವಹೋಗಿಗಳು, ಚಿತ್ತಾಪೂರದ ಪೂಜ್ಯ ಸೋಮಶೇಖರ ಶಿವಾಚಾರ್ಯರು, ಹರಸೂರಿನ ಪೂಜ್ಯ ಕರಿಸಿದ್ದೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು. ಸೇವೆಯಿಂದ ನಿವೃತ್ತಿರಾದ ಡಾ. ಎಸ್.ಎಂ ಹಿರೇಮಠ, ಮಲ್ಲಯ್ಯ ಹಿರೇಮಠ, ಭೀಮರಾಯ ಹೆಚ್, ಸುಭಾಷ ಸಿಂಗ್, ಶ್ರೀ ಮರೆಪ್ಪ ನಾಟೀಕಾರ, ಶರಣಬಸಪ್ಪ ಪಾಟೀಲ ಅವರನ್ನ ಶ್ರೀಮಠದಿಂದ ಸತ್ಕರಿಸಲಾಯಿತು, ಶಿವಶಂಕರ ಬಿರಾದಾರ ಪ್ರಾರ್ಥಿಸಿದರು, ರವಿ ಶಹಾಪುರಕರ್ ಸ್ವಾಹತಿಸಿದರು. ಎನ್.ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಲಿಂಗಯ್ಯ ಮಠಮತಿ ನಿರೂಪಿಸಿದರು. ಹಣಮಂತರಾಯ ಆಟ್ಟೂರ ವಂದಿಸಿದರು. ಸಮಾರಂಭದಲ್ಲಿ ಸಂಗಯ್ಯ ಸ್ವಾಮಿ ಹಿರೇಮಠ, ಸಂತೋಷ ಆಡೆ, ಭೀಮಾಶಂಕರ ಚಕ್ಕಿ, ಬಸವರಾಜ ಶೀಲವಂತ, ಬಿ.ಆರ್. ಪಾಟೀಲ ಸರಡಗಿ, ಸಿದ್ದರಾಜ ಬಿರಾದಾರ, ಚನ್ನವೀರಪ್ಪ ಸಲಗರ, ಶಿವರಾಜ ಪಾಟೀಲ ಅವರಾದ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…