ಅಂಕಣ ಬರಹ

ಭಾಗ-2: ಸತ್ಯಂಪೇಟೆ ಕಾಲಂ: ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವುದಕ್ಕೆ ಕೇಂದ್ರದ ಯತ್ನ?!

ಕನ್ನಡ ಭಾಷೆ ಎರಡು ಸಾವಿರ ವರ್ಷಗಳಷ್ಟು ಹಳೆಯದು. ಈ ಭಾಷೆಗೆ ತನ್ನದೆ ಆದ ಇತಿಹಾಸ ಇದೆ. ಕನ್ನಡದ ಜೊತೆ ಜೊತೆಗೆ ಇಲ್ಲಿನ ಜನಗಳು ಭಾವನಾತ್ಮಕವಾಗಿ ಬೆರೆತು ಹೋಗಿದ್ದಾರೆ. ತಮ್ಮಗಳ ಗತ ಇತಿಹಾಸ ಭಾಷೆಯೊಂದಿಗೆ ತಳುಕು ಹಾಕಿಕೊಂಡಿದೆ. ಯಾವುದೆ ಭಾಷಿಕ ತನ್ನ ಭಾಷೆಯಲ್ಲಿ ಎಷ್ಟು ಸಮರ್ಥವಾಗಿ ಅಭಿವ್ಯಕ್ತಗೊಳಿಸಲು ಸಾಧ್ಯವೋ, ಆತನ ಇನ್ನೊಂದು ಭಾಷೆಯಲ್ಲಿ ಅಷ್ಟು ಚೆನ್ನಾಗಿ ವಿವರಿಸಲಾರ. ಹೀಗಾಗಿ ಭಾಷೆ ತಾಯಿಯೊಂದಿಗಿನ ಸಂಬಂಧದಂತೆ. ಅದು ನೆಲದ ಭಾಷೆ. ನೀರಿನ ಭಾಷೆ. ಗಾಳಿಯ ಭಾಷೆಯಂತೆ ನಮ್ಮೊಂದಿಗೆ ಸಮ್ಮಿಳಿತಗೊಂಡಿದೆ.

ಪಂಪ, ರನ್ನ, ಪೊನ್ನ, ನೂರಾರು ಜನ ವಚನ ಕಾರರು, ದಾಸರುಗಳು, ಶಿವಯೋಗಿಗಳು, ಸಂತರು ಸಾಧರುಗಳು ಕನ್ನಡ ಭಾಷೆಯನ್ನು ಸಶಕ್ತವಾಗಿ ಉಳಿಸಿ ಬೆಳೆಸಿದ್ದಾರೆ. ಕನ್ನಡದ ಹಲವಾರು ಕವಿಗಳ ಸಾಹಿತಿಗಳ ವಿಮರ್ಶಕರ, ವಿಚಾರಗಳನ್ನು ಅನ್ಯ ಭಾಷೆಯಲ್ಲಿ ತರ್ಜುಮೆ ಮಾಡಲಿಕ್ಕೆ ಸಾಧ್ಯವಿಲ್ಲ ಎಂಬಷ್ಟು ಪರಿಪೂರ್ಣವಾಗಿ ನೆಲದ ಭಾಷೆಯನ್ನು ಬಳಸಿಕೊಂಡು ಬೆಳೆದಿವೆ. ಉದಾಹರಣೆಗೆ ಕನ್ನಡ ನಾಡಿನ ಅತ್ಯುನ್ನತ ಅನುಭಾವಿ, ಆಧ್ಯಾತ್ಮಿಕ ಜೀವಿ ಅಲ್ಲಮಪ್ರಭುಗಳ ವಚನಗಳನ್ನು ಹಿಂದಿ, ಇಂಗ್ಲೀಷ, ಪ್ರೆಂಚ್, ರಷ್ಯಾ, ಸ್ಪ್ಯಾನಿಶ್ ಯಾವುದೆ ಭಾಷೆಯಲ್ಲಿ ತರ್ಜುಮೆ ಮಾಡಲು ಸಾಧ್ಯವಿಲ್ಲ.

ಕನ್ನಡ ಎಷ್ಟು ಸಶಕ್ತ ಭಾಷೆಯೆಂದರೆ ಒಂದೆ ಪದ ಹಲವಾರು ಪ್ರಸಂಗಗಳಲ್ಲಿ ಬೇರೆ ಬೇರೆ ಅರ್ಥವನ್ನು ಹೊರಡಿಸುತ್ತದೆ. ಕನ್ನಡದ ಗತ್ತು ವೈಭವವೇ ಭಿನ್ನ ಭಿನ್ನ. ಹಾಗೆಯೆ ತೆಲುಗು, ತಮಿಳು, ಮಲಯಾಳಿ ಭಾಷೆಗಳೂ ಸಹ ತನ್ನದೆ ಆದ ಸೊಗಡನ್ನು ಹೊಂದಿವೆ. ತಮಿಳಿನ ವೇಮನ , ತಿರುವಳವರ್‍ರ ವಚನಗಳನ್ನು ಅವರದೆ ಭಾಷೆಯಲ್ಲಿ ಓದಬೇಕು. ಕೇಳಬೇಕು. ಆಗ ಮಾತ್ರ ಅವುಗಳ ಮಿಡಿದ ನಮಗೆಲ್ಲ ತಟ್ಟುತ್ತದೆ.

ಇದೆಲ್ಲದರ ಜೊತೆಗೆ ನಮ್ಮ ರಾಷ್ಟ್ರ 1956 ರಲ್ಲಿ ಗಣರಾಜ್ಯವಾದಾಗ ಭಾಷಾವಾರು ಪ್ರಾಂತಗಳನ್ನು ರಚಿಸಲಾಯಿತು. ಆಯಾ ಪ್ರದೇಶದ ಭಾಷೆಯನ್ನು ಉಳಿಸುವ ಬೆಳೆಸುವ ಹಾಗೂ ಅದನ್ನು ಸಂರಕ್ಷಿಸುವ ಎಲ್ಲಾ ಅಧಿಕಾರಗಳು ಆಯಾ ರಾಜ್ಯಗಳಿಗೆ ಇವೆ. ಸಂವಿಧಾನಾತ್ಮಕವಾಗಿಯೂ ಕೇಂದ್ರ ತಪ್ಪು ಹೆಜ್ಜೆಯನ್ನು ಇಡುತ್ತಿದೆ. ಈ ಮೂಲಕ ಹಿಂದಿಯನ್ನು ಇತರ ರಾಜ್ಯಗಳಿಗೆ ಹೇರಿ ತನ್ನದೆ ಏಕಸ್ವಾಮ್ಯವಾದ ಸಂಸ್ಕøತಿಯನ್ನು ತರಲು ಹೊಂಚು ಹಾಕುತ್ತಿದೆ.

ಹೂವಿನ ತೋಟದಲ್ಲಿ ಬಗೆ ಬಗೆಯ ಹೂಗಳಿದ್ದರೆ ಆ ತೋಟಕ್ಕೆ ಹೇಗೆ ವೈಭವ ಪ್ರಾಪ್ತವಾಗುತ್ತದೋ ಹಾಗೆ ವಿಭಿನ್ನ ಭಾಷೆ, ಉಡುಗೆ, ತೊಡುಗೆ ಸಂಸ್ಕತಿಯಿಂದ ಭಾರತಕ್ಕೆ ತನ್ನದೆ ಆದ ಸೊಗಸು ಉಂಟಾಗಿದೆ. ಈ ಸೊಗಡನ್ನು ಒತ್ತಾಯದಿಂದ ಬಿಸಾಕಿ ಒಂದೇ ಸಂಸ್ಕøತಿ, ಒಂದೇ ಭಾಷೆ, ಒಂದೇ ಧರ್ಮ ಎನ್ನುವ ಮೂಲಕ ಇಲ್ಲಿನ ಜನಗಳ ಸ್ವಾತಂತ್ರ್ಯಕ್ಕೆ ಎಳ್ಳು ನೀರು ಬಿಡುವ ಹುನ್ನಾರ ಕೇಂದ್ರ ಸರಕಾರ ನಡೆಸಿರುವುದು ಸರಿಯಾದುದಲ್ಲ.

ಕೇಂದ್ರದ ನಡೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗುತ್ತದೆ. ಸಾವಿರಾರು ಹುಳುಗಳು ಸೇರಿ ಹೇಗೆ ಜೇನನನ್ನು ತಯಾರಿಸುತ್ತವೋ ಹಾಗೆಯೆ ನೂರಾರು ಭಾಷೆಗಳು ಜೊತೆ ಸೇರಿ ಭಾರತವೆಂಬ ತಾಯಿ ಜೇನಿನ ಒಡಗೂಡಿ ರಸಪೂರಿತವಾದ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ. ಜೇನು ಹುಳುಗಳು ಹೇಗೆ ಅಲ್ಲಲ್ಲಿ ಸುತ್ತಾಡಿ , ಸುಳಿದಾಡಿ ನಾನಾ ಬಗೆಯ ಹೂಗಳ ಮಕರಂಧವನ್ನು ಹೀರಿ ಜೇನನ್ನು ಸವಿಯಲು ಸ್ವಾಧಿಷ್ಟಗೊಳಿಸುವಂತೆ ನೂರಾರು ಭಾಷೆಯ ಭಾರತದ ಒಕ್ಕೂಟ ವ್ಯವಸ್ಥೆಯ ಜೇನು ಸ್ವಾಧಿಷ್ಟಮಯವಾಗಿದೆ.

ಇಸ್ರೋದ ಮಾಜಿ ಅಧ್ಯಕ್ಷ್ಯ ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಬೇಕು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಇಂಗ್ಲೀಷನಂತೆ ಹಿಂದಿಯೂ ಸಹ ಒಂದು ಭಾಷೆಯಾಗಿ ಇಷ್ಟಪಟ್ಟವರು ಅಧ್ಯಯನ ಮಾಡಲಿ. ಆದರೆ ಹಿಂದಿ ಕಲಿಯಲೇಬೇಕು ಎಂಬುದು ರಾಜ್ಯಾಂಗ ವ್ಯವಸ್ಥೆಯ ಹಲ್ಲುಗಳನ್ನು ಮುರಿದು ತಮ್ಮ ಪ್ರಭುತ್ವವನ್ನು ಏಕ ಮುಖವಾಗಿ ಪ್ರದರ್ಶಿಸಿದಂತೆ ಆಗುತ್ತದೆ.

ಆಶ್ಚರ್ಯವೆಂದರೆ ಕನ್ನಡ ಭಾಷೆಯನ್ನೇ ಸರಿಯಾಗಿ ಕಲಿಯದ ಇತ್ತೀಚೆಗೆ ಸಂಸತ್ತಿಗೆ ಆಯ್ಕೆಯಾದ ಕರ್ನಾಟಕದ ಇಬ್ಬರು ಸಂಸದರು ಹಿಂದಿ ಭಾಷೆ ಹೇರಿಕೆ ತಪ್ಪಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಮೂರ್ಖ ಶಿಖಾಮಣಿಗಳಿಗೆ ಕನ್ನಡದ ಗಂಧಗಾಳಿಯೆ ಗೊತ್ತಿಲ್ಲ. ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ ಎಂಬಂತೆ ಇವರೀರ್ವರಿದ್ದಾರೆ.

ಸಮಾಧಾನದ ಸಂಗತಿಯೆಂದರೆ ನಮ್ಮ ರಾಜ್ಯದ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಹಾಗೂ ತಮಿಳು ನಾಡಿನ ಮುಖ್ಯ ಮಂತ್ರಿ ಸ್ಟಾಲಿನ್ ಕೂಡ ಕೇಂದ್ರ ಸರಕಾರದ ತ್ರಿಭಾಷಾ ಸೂತ್ರವನ್ನು ಸಾರಾ ಸಗಟಾಗಿ ತಳ್ಳಿಹಾಕಿದ್ದಾರೆ. ಕನ್ನಡ ನಾಡಿನ ಅಸ್ಮಿತೆ ಬಲ್ಲ ಎಲ್ಲಾ ಪ್ರಜ್ಞಾವಂತರು ಕೇಂದ್ರ ಈ ಹೇರಿಕೆಯನ್ನು ತಡೆಯದೆ ಹೋದರೆ ಬಹುದೊಡ್ಡ ಗಂಡಾಂತರಕ್ಕೆ ನಮ್ಮನ್ನು ಅದು ಇಡುಮಾಡಲಿದೆ.

-ವಿಶ್ವಾರಾಧ್ಯ ಸತ್ಯಂಪೇಟೆ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago