ರಾಯಚೂರು: ಪ್ರವಾಸೋದ್ಯಮವನ್ನು ಉಳಿಸ ಬೇಕಾದರೆ ಪರಿಸರವನ್ನು ಬೆಳಸಿ ಪ್ರವಾಸಿ ತಾಣಗಳು ಅಭಿವೃದ್ಧಿಯಾಗುತ್ತವೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಪ್ರಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚ ರಣೆ ಅಂಗವಾಗಿ ಪ್ರವಾಸೋದ್ಯಮ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಚ್ಚತಾ ಪಕ್ವಾಡ- 2020 ಘೋಷ ವಾಖ್ಯೆದಡಿ ಜಿಲ್ಲಾಧಿಕಾರಿ ಕಚೇರಿಯಿಂದ ಕೋಟೆಯವರೆಗೆ ಸೈಕಲ್ ಜಾಥಾ ನಡೆಸಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರವಾಸಿತಾಣಗಳ ಅಭಿವೃದ್ಧಿ ಜೊತೆಗೆ ಕೋವಿಡ್ ಹಿನ್ನಲೆಯಲ್ಲಿ ಜನರ ಆರೋಗ್ಯ ಕಾಪಾಡಬೇಕಾ ಗಿದೆ. ಸೈಕ್ಲಿಂಗ್ ಮಾಡುವುದರಿಂದ ಎಕ್ಸಸೈಜ್ ಆಗುತ್ತದೆ. ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಸೈಕಲ್ ಬಳಕೆ ಮಾಡಿದರೆ ಮಾಲಿನ್ಯ ನಿಯಂತ್ರಣ ಮಾಡಿದಂತಾಗುತ್ತದೆ. ಈ ಎರಡು ಉದ್ದೇಶದಿಂದ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಸೈಕಲ್ ಜಾಥಾ ಮಾಡಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸತೀಶ ಮಾತನಾಡಿ ಜಿಲ್ಲೆಯಲ್ಲಿ ಸುಮಾರು ೧೦ ಪ್ರವಾಸಿ ಸ್ಥಳಗಳಾದ ರಾಯಚೂರು ಕೊಟೆ, ಮಾನವಿ ಕಲ್ಲೂರು, ಮುದಗಲ್ ಕೋಟೆ, ಮಸ್ಕಿ, ಮಲಿಯಾಬಾದ್ ಸೇರಿ ೧೦ ಪ್ರವಾಸೋದ್ಯಮ ತಾಣಗಳನ್ನು ಸರ್ಕಾರ ಗುರುತ್ತಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುತ್ತದೆ.
ಪ್ರತಿವರ್ಷ ಅನುದಾನ ಬಿಡುಗಡೆ ಮಾಡಲಾಗುವುದು ಯಾತ್ರ ನಿವಾಸಿಗಳು ಅಭಿವೃದ್ಧಿಪಡೆಯಲಾಗುತ್ತದೆ ಎಂದು ಹೇಳಿದರು.
ಸೈಕಲ್ ಜಾಥಾ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಕೇಂದ್ರ ಬಸ್ ನಿಲ್ದಾಣದ ಕೋಟೆಗೆ ತಲುಪಿತು.ಕೋಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿ ನಡೆಸಿದರು.
ಈ ಸಂದರ್ಭದಲ್ಲಿ ಸಿಇಓ ಲಕ್ಷ್ಮಿಕಾಂತರೆಡ್ಡಿ, ಅಪರ ಜಿಲ್ಲಾಧಿಕಾರಿ ದುರುಗೇಶ,ಪಿಡಿ ಮಹೇಂದ್ರ ಕುಮಾರ್, ಡಿಎಚ್.ಓ ರಾಮಕೃಷ್ಣ, ನಗರಸಭೆ ಪೌರಾಯುಕ್ತರ ದೇವಾನಂದ್ ದೊಡ್ಡಮನೆ, ವಿಜಯಶಂಕರ್, ತ್ರಿವಿಕ್ರಮ ಜ್ಯೋಷಿ, ರೆಡ್ ಕ್ರಾಸ್ ಸಂಸ್ಥೆಯ ಶ್ರೀನಿವಾಸ ರಾಯಚೂರುಕರ್, ಗ್ರೀನ್ ರಾಯಚೂರು ರಾಜೇಂದ್ರ ಕುಮಾರ್ ಶಿವಾಳೆ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
- ಮುತ್ತಣ್ಣ ರಾಯಚೂರು