ಹೈನುಗಾರಿಕೆಗೆ ಸಾಲ ನೀಡದ ಬ್ಯಾಂಕ್‌ಗಳ ಮೇಲೆ ಕ್ರಮಕ್ಕೆ ಒತ್ತಾಯ

0
66

ಸುರಪುರ: ಕೇಂದ್ರ ಸರಕಾರದ ಡೈರಿ ಉದ್ಯಮ ವಿಕಾಸ ಯೋಜನೆ ಅಡಿಯಲ್ಲಿ ಹೈನುಗಾರಿಕೆ ಅಭೀವೃಧ್ಧಿಗಾಗಿ ನೀಡುವ (ನಬಾರ್ಡ) ಸಾಲವನ್ನು ನೀಡದೆ ಬ್ಯಾಂಕ್ ಅಧಿಕಾರಿಗಳು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಿಂದ ಜಾರಿಗೆ ತಂದಿರುವ (ನಬಾರ್ಡ) ಡಿಇಡಿಎಸ್ ಯೋಜನೆಯೂ ಬಡವರ ಪಾಲಿಗೆ ವರದಾನವಾಗಿದ್ದು,ಇದರಿಂದ ಹಸು ಎಮ್ಮೆ ಸಾಕಣಿಕೆ, ಹಾಲು ಮಾರಾಟ ಕೇಂದ್ರ ಸ್ಥಾಪಿಸಲು ಮತ್ತು ರಸ್ತೆ ಬದಿಯಲ್ಲಿ ಹಾಲು ಹಾಗು ಹಾಲಿನ ಉತ್ಪನ್ನಗಳ ಮಾರಾಟ ವ್ಯಾಪಾರ ಆರಂಭಿಸಲು ಅರ್ಜಿ ಸಲ್ಲಿಸುವವರಿಗೆ ಬ್ಯಾಂಕ್ ಅಧಿಕಾರಿಗಳು ನೇರ ಸಾಲ ನೀಡಬೇಕು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ ೩೩ ಹಾಗು ಇತರೆ ಹಿಂದುಳಿದ ವರ್ಗಗಳಿಗೆ ಶೇ ೨೫ರಷ್ಟು ಸಹಾಯಧನವಿದ್ದು ಬ್ಯಾಂಕಿನ ಅಧಿಕಾರಿಗಳು ಯಾವುದೆ ಬಡ ಕುಟುಂಬದ ಜನತೆಗೆ ಈ ಡಿಇಡಿಎಸ್ ಯೋಜನೆಯಡಿ ಸಾಲ ನೀಡದೆ ಬಡವರಿಗೆ ಮೋಸವೆಸುತ್ತಿದ್ದಾರೆ.ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಸರಕಾರ ಕೂಡಲೆ ಬ್ಯಾಂಕಿನ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಕೂಡಲೆ ಸರಕಾರದ ನಿಯಮದಂತೆ ಹೈನುಗಾರಿಕೆಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಪ್ರವೀಣಕುಮಾರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ,ಆನಂದ ದಾದಾ,ಬಾಗಪ್ಪ ಡೊಣ್ಣಿಗೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here