ಕಲಬುರಗಿ: ಈ ಬಾರಿಯ ಶಿಕ್ಷಕರ ಮತಕ್ಷೇತ್ರಕ್ಕೆ ಅಕ್ಟೋಬರ್ 28 ಕ್ಕೆ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ.
ಕಾಂಗ್ರೆಸ್ ನಿಂದ ಶರಣಪ್ಪ ಮಟ್ಟೂರ್, ಬಿಜೆಪಿಯಿಂದ ಶಶೀಲ್ ಜಿ. ನಮೋಶಿ, ಜೆಡಿಎಸ್ ನಿಂದ ತಿಮ್ಮಯ್ಯ ಪುರ್ಲೆ ಅವರ ಹೆಸರುಗಳು ಅಂತಿಮಗೊಂಡಿವೆ.
ಈ ಹಿನ್ನೆಲೆಯಲ್ಲಿ ಈ ಮೂರು ಪಕ್ಷದ ಅಭ್ಯರ್ಥಿಗಳು ಆರು ಜಿಲ್ಲೆಗಳಿಗೆ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದಾರೆ.
ನಮೋಶಿ: ಬಿಜೆಪಿ ಅಬ್ಯರ್ಥಿಯಾಗಿರುವ ಶಶೀಲ್ ಜಿ. ನಮೋಶಿ ಅವರು ಎದುರಿಸುತ್ತಿರುವುದು ಇದು ಎಂಟನೇ ಸಾರ್ವತ್ರಿಕ ಚುನಾವಣೆ. ಮೂರು ಸಲ ಎಂಎಲ್ಎ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಮೂರು ಸಲ ಎಂಎಲ್ಸಿ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮಟ್ಟೂರು ವಿರುದ್ಧ ತೀವ್ರ ಸೋಲು ಅನುಭವಿಸಿದ್ದಾರೆ.
ಇದಲ್ಲದೆ ಪ್ರತಿಷ್ಠಿತ ಎಚ್ ಕೆಇ ಸಂಸ್ಥೆಗೆ ಚುನಾವಣೆ ಎದುರಿಸಿದ್ದಾರೆ. ಇದರಲ್ಲಿ ಎರಡು ಸಲ ಅಧ್ಯಕ್ಷರಾಗಿ ಒಂದು ಸಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಬಾರಿ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಇವರ ಅಜ್ಜ ಕಾಂಗ್ರೆಸ್ ಪಕ್ಷದ ಲೀಡರ್ ಆಗಿದ್ದರು. ಅಪ್ಪ ಗಂಗಾಧರಪ್ಪ ನಮೋಶಿ ಕಮ್ಯೂನಿಷ್ಟ ಪಕ್ಷದ ಲೀಡರ್ ಆಗಿದ್ದರು. ಶಶೀಲ್ ನಮೋಶಿ ಮಾತ್ರ ಬಿಜೆಪಿ, ಜೆಡಿಎ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಈಗ ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಬಯಸಿದ್ದಾರೆ.
ಮಟ್ಟೂರ್: ಮೂಲತಃ ರಾಯಚೂರು ಜಿಲ್ಲೆಯವರಾದ ಶರಣಪ್ಪ ಮಟ್ಟೂರ್ ಅವರು ಶಿಕ್ಷಕರ ಮತಕ್ಷೇತ್ರದ ಹಾಲಿ ಎಂಎಲ್ ಸಿ ಆಗಿದ್ದು, ಇದು ಅವರು ಎದುರಿಸುತ್ತಿರುವ ಮೂರನೇ ಚುನಾವಣೆ. ಪದವೀಧರ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಆಗ ಬಿಜೆಪಿಯ ಅಮರನಾಥ ಪಾಟೀಲ ಎದುರು ಪರಾಭವಗೊಂಡಿದ್ದರು.
ಆಮೇಲೆ ಶಶೀಲ್ ನಮೋಶಿ ವಿರುದ್ಧ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಒಬ್ಬ ಉತ್ತಮ ಕ್ರೈಂ ಲಾಯರ್ ಆಗಿರುವ ಇವರು ರಾಜಕೀಯ ಕ್ಷೇತ್ರಕ್ಕೆ ಬಂದುದು ಆಕಸ್ಮಿಕವೇ ಆಗಿದೆ. ಇವರ ಮಾಮ ದೇವರಾಜು ಅರಸು ಕಾಲದ ಮುತ್ಸದ್ದಿ ನಾಯಕರಾಗಿದ್ದರು.
ಪುರ್ಲೆ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನವರಾದ ಇವರು ಈ ಹಿಂದೆ ಉಪನ್ಯಾಸಕರಾಗಿದ್ದರು. ಎರಡು ಬಾರಿ ಉಪನ್ಯಾಸಕ ಸಂಘದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಘದ ಅಧ್ಯಕ್ಷರಾಗಿದ್ದಾಗ ಬೋಲ್ಡ್ ಸ್ಟೆಪ್ ತೆಗೆದುಕೊಳ್ಳುತ್ತಿದ್ದ ಇವರು ಈ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಬಯಸಿದ್ದಾರೆ. ಇದು ಇವರು ಎದುರಿಸುತ್ತಿರುವ ಮೊದಲ ಚುನಾವಣೆ ಆಗಿದೆ. ಆದರೆ ಅನೇಕ ಸಾರ್ವತ್ರಿಕ ಚುನಾವಣೆ ಮಾಡಿದ ಅನುಭವ ಇವರಿಗಿದೆ.
ಈ ಮಧ್ಯೆ ನಿವೃತ್ತ ಉಪನ್ಯಾಸಕರಾದ ಎಸ್.ಎಲ್. ಪಾಟೀಲ ಹಾಗೂ ಎಂ.ಬಿ. ಅಂಬಲಗಿಯವರು ನಾಮಿನೇಷನ್ ಮಾಡಲಿದ್ದಾರೆ ಎಂದು ಇವರ ಹೆಸರು ಕೇಳಿ ಬರುತ್ತಿವೆ. ಸದ್ಯದ ಪ್ರಕಾರ 25,104 ಮತದಾರರಿದ್ದು, ಇನ್ನೂ ನಾಲ್ಕೈದು ಸಾವಿರ ಮತದಾರರು ಸೇರ್ಪಡೆಯಾಗಬಹುದೆಂದು ಹೇಳಲಾಗುತ್ತಿದೆ.
ಹೀಗಾಗಿ ಈಶಾನ್ಯ ವಲಯ ಶಿಕ್ಷಕರ ಮತ ಕ್ಷೇತ್ರ ರಂಗು ಪಡೆದುಕೊಳ್ಳುತ್ತಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…